ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಸಂಜೀದಾ ನೌಕೆ, ಪ್ರವಾಸಿಗರಿಗೆ ಜಲಪ್ರದಕ್ಷಿಣೆ ಯೋಗ

By Staff
|
Google Oneindia Kannada News

ಮಂಗಳೂರು: ಅರಬ್ಬಿ ಸಮುದ್ರ ಹಾಗೂ ಹಿಂದೂ ಮಹಾ ಸಾಗರದಲ್ಲಿ ಪ್ರವಾಸಿಗರಿಗೆ ಜಲವಿಹಾರದ ಅವಕಾಶ ಒದಗಿಸಲು ಸಿದ್ಧವಾಗಿರುವ ಸಂಜೀದಾ ನೌಕೆ ಮಂಗಳೂರಿನ ಹಳೇ ಬಂದರಿಗೆ ಆಗಮಿಸಿದೆ.

ಇಂಗ್ಲೆಂಡ್‌ನ ಆ್ಯಂಡರ್ಸನ್‌ ಬೇಕ್‌ ವೆಲ್‌ ಅವರ ಮಾಲಿಕತ್ವದಲ್ಲಿ ಸಜ್ಜಾಗಿರುವ ಈ ನೌಕೆ ಕಳೆದ ತಿಂಗಳು ಗುಜರಾತ್‌ನ ಕಛ್‌ನಲ್ಲಿ ನಿರ್ಮಾಣವಾಗಿತ್ತು. ಮಂಗಳೂರು ಶೈಲಿಯಲ್ಲೇ ಬಿದಿರು, ಸೋಗೆಗಳನ್ನು ಉಪಯೋಗಿಸಿ ನೌಕೆಯ ಛಾವಣಿಯನ್ನು ನಿರ್ಮಿಸಲಾಗಿದೆ. ಹಿಂದೂ ಮಹಾ ಸಾಗರದಲ್ಲಿ ಜಲಪ್ರದಕ್ಷಿಣೆ ಹಾಕಲು ಇಚ್ಛಿಸುವವರಿಗೆ ಇದೊಂದು ಸುಯೋಗ.

ಈ ವರ್ಷದ ಮಳೆಗಾಲವಿಡೀ ಈ ನೌಕೆ ಮಂಗಳೂರಿನ ಅರಬ್ಬೀ ಸಮುದ್ರದಲ್ಲಿಯೇ ಠಿಕಾಣಿ ಹೂಡಲಿದೆ. ಯಂತ್ರ ಮತ್ತು ಹಾಯಿಗಳೆರಡರ ಸಹಾಯದಿಂದ ಈ ನೌಕೆ ಚಲಿಸುತ್ತಿದ್ದು, ಒಂದು ಬಾರಿಗೆ 14 ಮಂದಿ ಪ್ರಯಾಣಿಕರು ಕೂರಬಹುದಾಗಿದೆ. ಪ್ರವಾಸೀ ಕುಟುಂಬಕ್ಕೆ ಪ್ರತ್ಯೇಕ ಕ್ಯಾಬಿನ್‌ ಇದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಸಂಜೀದಾ ನೌಕೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುವುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X