ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮೀನುಗಾರರ ಕಣ್ಣೊರೆಸದಿದ್ದರೆ ಜುಲೈ 25ರಿಂದ ರಾಷ್ಟ್ರವ್ಯಾಪಿ ಬಂದ್‌’

By Staff
|
Google Oneindia Kannada News

ಮಂಗಳೂರು : ಮೀನುಗಾರರ ಬವಣೆ ಬಗೆಹರಿಸದಿದ್ದರೆ ಜುಲೈ 25ರಿಂದ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಬಂದ್‌ ನಡೆಸುವುದಾಗಿ ರಾಷ್ಟ್ರೀಯ ಮೀನು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಥಾಮಸ್‌ ಕೊಚೆರ್ರಿ ಗುರುವಾರ ಹೇಳಿದ್ದಾರೆ.

ರಾಜ್ಯ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಆಯೋಜಿಸಿದ್ದ ಸಮಾವೇಶವೊಂದರಲ್ಲಿ ಅವರು ಮಾತಾಡುತ್ತಿದ್ದರು. ಸಮುದ್ರ ದಂಡೆ ರೇಖೆಯಿಂದ 200 ಮೀಟರ್‌ ದೂರದವರೆಗೆ ಮೀನು ಹಿಡಿಯುವ ಅವಕಾಶವನ್ನು ಸಾಂಪ್ರದಾಯಿಕ ಮೀನುಗಾರರಿಗೆ ಕೊಡಬೇಕು. ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತು-ವು-ದಾ-ಗಿ ಉಡುಪಿ ಸಂಸದ ವಿಜಯಕುಮಾರ್‌ ಸೊರಕೆ ಭರವಸೆ ಕೊಟ್ಟಿದ್ದಾರೆ. ಈಗಾಗಲೇ ಮೀನುಗಾರರ 42 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಇವುಗಳನ್ನು ಈಡೇರಿಸುವಂತೆ ಬಹು ದಿನಗಳಿಂ-ದ ಒತ್ತಾಯಿಸುತ್ತಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ಇದು ಹೀಗೇ ಮುಂದುವರೆದರೆ ಮುಷ್ಕರ ನಡೆಸಲೇಬೇಕಾಗುತ್ತದೆ ಎಂದು ಕೊಚೆರ್ರಿ ಎಚ್ಚರಿಸಿದರು.

ಈಗಿರುವ ಮೀನುಗಾರಿಕಾ ನೀತಿಯಲ್ಲಿ ಸಾಕಷ್ಟು ಲೋಪಗಳಿವೆ. ಅದರಲ್ಲಿ ಬದಲಾವಣೆ ತರಬೇಕೆಂದು ಕೇಂದ್ರ ಸರ್ಕಾರದ ಮೇಲೆ ಪದೇಪದೇ ಒತ್ತಡ ತಂದಿದ್ದೇವೆ. ಮೀನುಗಾರರ ಕಷ್ಟಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ. ಒಂದು ವೇಳೆ ಸಂಸತ್‌ ಘೕರಾವ್‌ ಕಾರ್ಯಕ್ರಮವನ್ನು ಮೀನುಗಾರರು ಹಮ್ಮಿಕೊಂಡರೆ, ಅದಕ್ಕೂ ನನ್ನ ಬೆಂಬಲವಿದೆ ಎಂದು ಸಂಸದ ವಿನಯಕುಮಾರ್‌ ಸೊರಕೆ ಭರವಸೆ ಕೊಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X