• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮೇರಾ ಭಾರತ್‌ ಮಹಾನ್‌’ದಿನಗಳು ಈಗಿಲ್ಲ-ಎನ್ನಾರ್‌.ನಾರಾಯಣಮೂರ್ತಿ

By Staff
|

ಬೆಂಗಳೂರು : ‘ಮೇರಾ ಭಾರತ್‌ ಮಹಾನ್‌’ ಎನ್ನುವ ಸ್ಲೋಗನ್‌ಗೆ ಭಾರತೀಯ ಉದ್ದಿಮೆದಾರರು ತುಂಬಾ ದಿನ ಅಂಟಿಕೊಳ್ಳುವುದು ಸಾಧ್ಯವಿಲ್ಲ . ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಉದ್ದಿಮೆದಾರರು ಕೇವಲ ಜಾಗತಿಕ ಪ್ರದರ್ಶಕರು ಮಾತ್ರವಾಗಿರುತ್ತಾರೆ ಎಂದು ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌.ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

‘ಮೇರಾ ಭಾರತ್‌ ಮಹಾನ್‌’ ಎನ್ನುವ ದಿನಗಳು ಮುಗಿದಿವೆ. ಯಾರೊಬ್ಬರಿಗೂ ಈಗ ಟೈಂ ಇಲ್ಲ . ನೀವು ಏನನ್ನು ಉತ್ಪಾದಿಸುತ್ತೀರಿ ಹಾಗ ಹೇಗೆ ಸ್ಪರ್ಧಿಸುತ್ತೀರಿ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗುತ್ತದೆ. ಗೌರವ ಹಾಗೂ ಅಧಿಕಾರ ನಮ್ಮ ಸಾಮರ್ಥ್ಯದ ಪ್ರದರ್ಶನದಿಂದಲೇ ಬರುತ್ತವೆ ಎಂದು, ಭಾರತೀಯ ಕೈಗಾರಿಕೆಗಳ ಗುಣಮಟ್ಟ ಸಂಸ್ಥೆಯ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ನಾರಾಯಣ ಮೂರ್ತಿ ಹೇಳಿದರು.

ಭಾರತೀಯ ಕಂಪನಿಗಳು ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹತೆ ಸಂಪಾದಿಸಬೇಕಿದೆ. ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬೇಕಿದೆ. ಈ ಮೂಲಕ ಭಾರತೀಯ ಕಂಪನಿಗಳು ತಮ್ಮ ಮಿತಿಗಳನ್ನು ಹಿಗ್ಗಲಿಸಿಕೊಳ್ಳಬೇಕು ಎಂದ ನಾರಾಯಣಮೂರ್ತಿ, ಉತ್ತಮ ಗುಣಮಟ್ಟ ಬಯಸುವವರು- ಮುಕ್ತ ಮನಸ್ಸು ಹಾಗೂ ಶ್ರೇಷ್ಠ ದರ್ಜೆಯ ಉತ್ಪನ್ನ ತಯಾರಕರನ್ನು ಆದರ್ಶವಾಗಿ ಹೊಂದಿರಬೇಕು ಎಂದರು.

ಜಪಾನಿನ ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳ ಒಕ್ಕೂಟದ ಸಲಹೆಗಾರ ಯೋಷಿಕಜು ತ್ಸುಡಾ, ಸುಂದರಂ-ಕ್ಲೇಟನ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ವೇಣು ಶ್ರೀನಿವಾಸನ್‌ ಅವರುಗಳು, ಗುಣಮಟ್ಟ ಹಾಗೂ ಸ್ಪರ್ಧಾತ್ಮಕತೆ ಕುರಿತು ಮಾತನಾಡಿದರು.
(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more