• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನುಸಿ:ಜೈವಿಕ ಔಷಧಿಯತ್ತ ರಾಸಾಯನಿಕಗಳಿಂದ ಕೈ ಸುಟ್ಟುಕೊಂಡ ಸರ್ಕಾರದ ಗಮನ

By Staff
|

ಬೆಂಗಳೂರು : ತೆಂಗಿನ ಮರಗಳಿಗೆ ತಗುಲಿರುವ ನುಸಿಪೀಡೆ ತೊಲಗಿಸಲು ಸಿಂಪರಿಸಿರುವ ಔಷಧಿಗಳು ವಿಫಲವಾಗಿರುವ ಹಾಗೂ ಈ ರಾಸಾಯನಿಕ ಔಷಧಿಗಳಿಂದ ತೆಂಗಿನ ಮರಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜೈವಿಕ ಕೀಟನಾಶಕಗಳನ್ನು ಬಳಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನುಸಿಪೀಡೆ ನಿಯಂತ್ರಣ ಸಮಿತಿಯ ಅಧ್ಯಕ್ಷರಾದ ಕೃಷಿ ಸಚಿವ ಟಿ.ಬಿ. ಜಯಚಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ತೆಂಗಿನ ಮರಗಳಿಗೆ ರಾಸಾಯನಿಕ ಸಿಂಪರಿಸುವ ಕ್ರಮವನ್ನು ಕೈಬಿಡಲಾಗಿದೆ. ಸಮೀಕ್ಷೆಯ ಪ್ರಕಾರ ರಾಜ್ಯದ 4. 35 ಕೋಟಿ ತೆಂಗಿನ ಮರಗಳಿಗೆ ನುಸಿಪೀಡೆ ತಗುಲಿದೆ. ಅವುಗಳಲ್ಲಿ ಸುಮಾರು 1 ಕೋಟಿ ಮರಗಳಿಗೆ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ರಾಸಾಯನಿಕ ಔಷಧಿ ಸಿಂಪಡಿಸಿದ್ದು, ಆ ತೆಂಗಿನ ಮರಗಳು ಹಾನಿಗೊಳಗಾಗಿವೆ ಎಂದು ಜಯಚಂದ್ರ ಹೇಳಿದರು.

ರಾಸಾಯನಿಕ ಔಷಧಿ ಸಿಂಪಡಣೆಯಿಂದ ನುಸಿರೋಗ ನಿಯಂತ್ರಣ ಸಾಧ್ಯವಿಲ್ಲ ಎಂದು ಪ್ರಾಯೋಗಿಕವಾಗಿ ದೃಢಪಟ್ಟಿದೆ. ಎರಡನೇ ಬಾರಿ ರಾಸಾಯನಿಕಗಳ ಸಿಂಪರಣೆ ಕುರಿತು ತಜ್ಞರು ಒಲವು ತೋರಿಲ್ಲದ ಕಾರಣ, ರಾಸಾಯನಿಕಗಳ ಸಿಂಪರಣೆ ಕೈ ಬಿಡಲು ಸರ್ಕಾರ ನಿರ್ಧರಿಸಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ನುಸಿ ನಿಯಂತ್ರಣಕ್ಕಾಗಿ ಈಗಾಗಲೇ 14.14 ಕೋಟಿ ರುಪಾಯಿ ಮೌಲ್ಯದ ರಾಸಾಯನಿಕ ಔಷಧಿಗಳು ಮತ್ತು 5 ಕೋಟಿ ರುಪಾಯಿ ಔಷಧಿಗಳನ್ನು ಬಳಸಲಾಗಿದೆ ಎಂದು ಜಯಚಂದ್ರ ಸ್ಪಷ್ಟಪಡಿಸಿದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more