For Daily Alerts
ಚೌಡಯ್ಯಸ್ಮಾರಕ ಭವನದಲ್ಲಿ ಮೇ 12 ರಿಂದ 10 ದಿನ ಜಾದೂ ತರಬೇತಿ
ಬೆಂಗಳೂರು : ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 12 ರಿಂದ ಮಾಯಾ ಬಜಾರು ! ಇಂದ್ರಜಾಲ ಕಲಿಯುವ ಬಯಕೆಯವರಿಗೆ ಕನಸು ಕೈಗೂಡುವ ಕಾಲ !
ಬೆಂಗಳೂರಿನ ಜಾಣ ಜಾಣೆಯರು ಸಂಸ್ಥೆ ಹಾಗೂ ಉಡುಪಿಯ ಮಾಧುರಿ ಶಿಕ್ಷಣ ಸಂಸ್ಥೆ ಜಂಟಿಯಾಗಿ ಇಂದ್ರಜಾಲ ತರಬೇತಿ ಕಾರ್ಯಕ್ರಮವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 12 ರಿಂದ 22 ರವರೆಗೆ ಏರ್ಪಡಿಸಿವೆ. ಯಾರು ಬೇಕಾದರೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ. ಮ್ಯಾಜಿಕ್ ಸಾಮಗ್ರಿಗಳನ್ನು ಮಾತ್ರ ಖರೀದಿಸಬೇಕು.
ಯಕ್ಷಲೋಕದ ಪ್ರಸಿದ್ಧ ರಾದ ಇಂಡಿಯನ್ ಹೌದಿನಿ ಪ್ರಹ್ಲಾದ್ ಆಚಾರ್ಯ, ಹಾಸ್ಯ ಜಾದೂಗಾರ ಮಂಜುನಾಥ ಹಿರೇಮಠ ಮತ್ತು ನಕುಲ್ ಶೆಣೈ ತರಬೇತುದಾರರು. ಇದೇ ಸಂದರ್ಭದಲ್ಲಿ ಮಾಸ್ಟರ್ ಹಿರಣ್ಣಯ್ಯ, ಮಿಮಿಕ್ರಿ ದಯಾನಂದ್, ಮೇಕಪ್ ನಾಣಿ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡುವರು.
ಜಾದೂ ಕಲಿಯಲು ಆಸಕ್ತಿಯಿರುವವರು ವಿವರಗಳಿಗೆ 080-3445810 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...