ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.16.20 ವಿದ್ಯುತ್‌ ಶುಲ್ಕ ಹೆಚ್ಚಳಕ್ಕೆ ಕೆಇಆರ್‌ಸಿ ಅಸ್ತು :ಗ್ರಾಹಕನಿಗೆ ಸುಸ್ತು !

By Staff
|
Google Oneindia Kannada News

ಬೆಂಗಳೂರು : ವಿದ್ಯುತ್‌ ಕ್ಷಾಮದಿಂದ ತೊಂದರೆ ಅನುಭವಿಸುತ್ತಿರುವ ರಾಜ್ಯದ ಜನತೆ, ದುಬಾರಿ ವಿದ್ಯುತ್‌ ಬಿಲ್ಲನ್ನೂ ಹೊರಬೇಕಾದ ದಿನಗಳು ಹತ್ತಿರ ಬಂದಿವೆ. ಸರಾಸರಿ ಪ್ರತಿಶತ 16.20 ರಷ್ಟು ವಿದ್ಯುತ್‌ ದರ ಹೆಚ್ಚಿಸಲು ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ ಹಸಿರು ನಿಶಾನೆ ತೋರಿ ಆದೇಶ ಹೊರಡಿಸಿದೆ.

ವಿದ್ಯುತ್‌ ಶುಲ್ಕ ಹೆಚ್ಚಳಕ್ಕೆ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ ನೀಡಿರುವ ಅನುಮತಿಯಿಂದ ಕರ್ನಾಟಕ ವಿದ್ಯುತ್‌ ಸರಬರಾಜು ನಿಗಮ (ಕೆಪಿಟಿಸಿಎಲ್‌)ಕ್ಕೆ ವಾರ್ಷಿಕ 761.20 ಕೋಟಿ ರುಪಾಯಿ ಸಂಗ್ರಹವಾಗಲಿದೆ. ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿರುವ ಆದೇಶದ ಪ್ರತಿಯನ್ನು ಆಯೋಗದ ಅಧ್ಯಕ್ಷ ಫಿಲಿಪೋಸ್‌ ಮಥಾಯಿ, ಕೆಪಿಟಿಸಿಎಲ್‌ನ ಸಿಎಂಡಿ ವಿ.ಪಿ.ಬಳಿಗಾರ್‌ ಅವರಿಗೆ ಬುಧವಾರ ಹಸ್ತಾಂತರಿಸಿದರು.

ಈ ಮುನ್ನ ಶೇ.30.15 ರಷ್ಟು ಪ್ರಮಾಣದಲ್ಲಿ ವಿದ್ಯುತ್‌ ಶುಲ್ಕವನ್ನು ಹೆಚ್ಚಿಸುವ ಮೂಲಕ ವಾರ್ಷಿಕ 1393 ಕೋಟಿ ರುಪಾಯಿಗಳನ್ನು ಸಂಗ್ರಹಿಸಲು ಅನುಮತಿ ನೀಡುವಂತೆ ಕೆಪಿಟಿಸಿಎಲ್‌, ಆಯೋಗವನ್ನು ಕೋರಿತ್ತು . ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಆಯೋಗ ಪ್ರತಿಶತ 16.20 ಶುಲ್ಕ ಹೆಚ್ಚಳಕ್ಕೆ ಮಾತ್ರ ಅನುಮತಿ ನೀಡಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X