ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಕ್ಕಂಜದ ಬೀಜದ ವಂಶವಾಹಿಗಳ ಅಧ್ಯಯನಕ್ಕೆ ಮೊನ್ಸಾಂಟೊ ನೆರವು

By Staff
|
Google Oneindia Kannada News

ಬೆಂಗಳೂರು : ಭಾರತದಲ್ಲಿ ಬರ ಸನ್ನಿವೇಶವನ್ನು ತಾಳಿ ಕೊಳ್ಳುವಂಥ ಕೃಷಿ ಬೆಳೆಗಳ ಬೀಜದ ವಂಶವಾಹಿಗಳ ಕುರಿತ ಅಧ್ಯಯನಕ್ಕೆ 40 ಸಾವಿರ ಡಾಲರ್‌ಗಳ ಆರ್ಥಿಕ ನೆರವನ್ನು ಅಮೆರಿಕ ಮೂಲದ ಮೊನ್ಸಾಂಟೊ ಕಂಪನಿ ಒದಗಿಸಲು ಒಪ್ಪಿಕೊಂಡಿದೆ.

ಬರ ಸನ್ನಿವೇಶವನ್ನು ತಾಳಿಕೊಳ್ಳುವ ಕೃಷಿ ಬೆಳೆ ಬೀಜಗಳಲ್ಲಿನ ಜೀನ್‌ಗಳ ಪತ್ತೆ ಅವುಗಳ ಕ್ಲೋನಿಂಗ್‌ ಕುರಿತು ಅಧ್ಯಯನ ನಡೆಸಲು ಮೊನ್ಸಾಂಟೊ 40 ಸಾವಿರ ರುಪಾಯಿಗಳನ್ನು ನೀಡುತ್ತಿದ್ದು , ಅದರಲ್ಲಿ 24169 ಡಾಲರ್‌ಗಳನ್ನು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಈಗಾಗಲೇ ನೀಡಿದೆ ಎಂದು ಕಂಪನಿಯ ಸುದ್ದಿ ಪ್ರಕಟಣೆ ತಿಳಿಸಿದೆ.

ಮೊನ್ಸಾಂಟೊ ಕಂಪನಿ ಅಧ್ಯಯನಕ್ಕಾಗಿ ನೀಡುತ್ತಿರುವ ನೆರವು ಯಾವುದೇ ನಿಬಂಧನೆಗಳಿಗೆ ಒಳಪಟ್ಟಿಲ್ಲ . ಸಂಶೋಧನೆಗಳ ಫಲಿತಾಂಶ ಬದಲಿಸಿಕೊಳ್ಳುವ ಕುರಿತೂ ನಿರ್ಬಂಧಗಳನ್ನು ಹೇರಲಾಗಿಲ್ಲ ಎಂದು ಕಂಪನಿ ಪ್ರಕಟಣೆ ಸ್ಪಷ್ಟಪಡಿಸಿದೆ. ಮೊನ್ಸಾಂಟೊ ವಿದೇಶಿ ಕಂಪನಿಯ ಕುರಿತು ರಾಜ್ಯ ರೈತಸಂಘ ಮೊದಲಿನಿಂದಲೂ ಭಾರೀ ಪ್ರತಿಭಟನೆ ನಡೆಸುತ್ತಿರುವುದನ್ನು ಇಲ್ಲಿ ನೆನೆಯಬಹುದು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X