• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನುದಿನದ ಆತ್ಮ ಚರಿತ್ರೆ! ತಮ್ಮನ್ನು ತಾವೇ ಕಂಡಂತೆ ಸಿಎಂ ಎಸ್ಸೆಂ

By Staff
|

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇತ್ತೀಚೆಗೆ ಅನೌಪಚಾರಿಕ ಮಾತುಕತೆಗೆ ದುರ್ಲಭ. ಬೊಕ್ಕಸ ಭಣಭಣ, ಸಚಿವರ ಬಗ್ಗೆ ದೂರುಗಳು; ವಿಶೇಷವಾಗಿ ಸಹಕಾರ ಸಚಿವ ಡಿ.ಕೆ.ಶಿವಕುಮಾರ್‌ ಕಿತ್ತೆಸೆಯಲು ಆಗ್ರಹ, ಅನರ್ಹ ಮಂತ್ರಿಗಳ ಖಾತೆ ಬದಲಿಸುವ ಒತ್ತಡ...ಹೀಗೆ ಹತ್ತು ಹಲವಾರು ಜಂಜಡಗಳಲ್ಲಿ ಕೃಷ್ಣ ಬ್ಯುಸಿ. ಅಂಥಾದರಲ್ಲೂ ಅಪರೂಪಕ್ಕೆ ಸುದ್ದಿಗಾರರೊಡನೆ ಅವರು ಚಾಟ್‌ಗೆ ಕೂತರು. ಆಗ ಹೊರಬಿದ್ದ ವಿಚಾರಗಳು ಹತ್ತು ಹಲವು....

  • ವಿವಿಧ ಇಲಾಖೆಗಳ ಕಾರ್ಯ ವೈಖರಿಯ ಪರಿಶೀಲನೆ ಕೆಲಸದಲ್ಲಿ ನಾನೀಗ ಮುಳುಗಿದ್ದೇನೆ. ಈ ಕೆಲಸ ಪದೇಪದೇ ಮಾಡುತ್ತೇನಾದರೂ, ಈ ಬಾರಿ ಇದಕ್ಕೆ ವಿಶೇಷ ಮಹತ್ವವಿದೆ. ಯಾಕೆಂದರೆ, ಈ ಬಾರಿ ಎಚ್ಚರಿಕೆ ಕೊಟ್ಟು ಸುಮ್ಮನಾಗುವುದಿಲ್ಲ. ಇದು ನಿರ್ಣಾಯಕ ಪರಿಶೀಲನೆ.
  • ಕೆಲವು ಇಲಾಖೆಗಳಲ್ಲಿ ಕೆಲಸ ಸಮರ್ಪಕವಾಗೇ ನಡೆಯುತ್ತಿದೆ. ಇನ್ನು ಕೆಲವು ಸುಧಾರಿಸಲೇಬೇಕು.
  • ಖಾತೆ ಬದಲಾವಣೆ ವಿಷಯವಾಗಿ ನಾನು ಏನೂ ಹೇಳಲಾರೆ.
  • ಡಾ.ವೀರೇಶ್‌ ಸಮಿತಿ ವರದಿಯ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ. ರೈತರ ಆತ್ಮಹತ್ಯೆಗೆ ಬೆಳೆಹಾನಿ ಅಷ್ಟೇ ಅಲ್ಲದೆ, ವೈಯಕ್ತಿ ಕ ಕಾರಣಗಳೂ ಇವೆ ಎಂಬುದು ಸಮಿತಿಯ ವರದಿಯ ಸಾರ. ಅದು ಕುಡಿತ ಇರಬಹುದು, ಕೈಸಾಲ ಇರಬಹುದು. ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರವೇ ವೀರೇಶ್‌ ಸಮಿತಿ ವರದಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು.
  • ಆಗಸ್ಟ್‌ ತಿಂಗಳ ಕೊನೆಯಲ್ಲಿ ನಾನು ಅಮೆರಿಕಕ್ಕೆ ಹೋಗುತ್ತೇನೆ. ಒಬ್ಬರು ಅಥವಾ ಇಬ್ಬರು ಉದ್ದಿಮೆ ಪ್ರತಿನಿಧಿಗಳು ನನ್ನ ಜೊತೆ ಹೊರಡುವ ನಿರೀಕ್ಷೆಯಿದೆ. ನಾನು ನನ್ನ ಅನಾರೋಗ್ಯದ ಕಾರಣಕ್ಕೆ ಅಮೆರಿಕಕ್ಕೆ ಹೋಗುತ್ತಿದ್ದೇನೆ ಎಂದು ಹುಯಿಲೆಬ್ಬಿಸಿದ್ದಾರೆ. ಅದು ಶುದ್ಧ ಸುಳ್ಳು. ನನ್ನ ಅನಾರೋಗ್ಯದ ಬಗ್ಗೆ ಅದು ಹೇಗೆ ಪುಗ್ಗಗಳೆದ್ದವೋ ನನಗೆ ಗೊತ್ತೇ ಆಗಲಿಲ್ಲ.
  • ಕರ್ನಾಟಕದಲ್ಲಿ ಯಾವ ಕಾರಣಕ್ಕೂ ಪೋಟಾ ಜಾರಿ ಮಾಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗೇ ಇದೆ. ಟಾಡಾ ಜಾರಿಯಿಂದಾದ ತೊಂದರೆಯನ್ನು ಕಾಂಗ್ರೆಸ್‌ ಅನುಭವಿಸಿದೆ. ಆದ್ದರಿಂದಲೇ ಪೋಟಾ ಜಾರಿ ಸರಿಯಲ್ಲ ಎಂಬುದು ಗೊತ್ತಾಗಿರುವುದು.
  • ಮುಕ್ತ ತನಿಖೆ ನಡೆಸಲು ಬೇಕಾಗುವ ವಿಶೇಷ ಅಧಿಕಾರಗಳನ್ನು ಸಿಬಿಐಗೆ ಕೊಟ್ಟಿರುವುದನ್ನು ವಿರೋಧಿಸಿರುವ ನಿರ್ಣಯದಲ್ಲಿ ಯಾವುದೇ ತಿದ್ದುಪಡಿ ತರುವುದಿಲ್ಲ. ಈ ನಿರ್ಣಯ ತೆಗೆದುಕೊಂಡಿದ್ದು ಹಿಂದಿನ ಸರ್ಕಾರ. ಅದನ್ನು ಪುನರ್‌ಪರಿಶೀಲಿಸುವ ಅಗತ್ಯವಿಲ್ಲ.
  • ಲೋಕಸಭೆಗೆ ಮಧ್ಯಂತರ ಚುನಾವಣೆಯ ಅಗತ್ಯ ಸದ್ಯಕ್ಕೆ ಇಲ್ಲ. ಕನಿಷ್ಠ ಪಕ್ಷ ಈ ವರ್ಷದ ಅಕ್ಟೋಬರ್‌ವರೆಗೆ ಅಂತಾ ಪರಿಸ್ಥಿತಿ ನಿರ್ಮಾಣವಾಗದು.
  • ಸರ್ಕಾರಿ ನೌಕರರ ಸಂಖ್ಯೆಯನ್ನು ತಗ್ಗಿಸಲು ಸ್ವಯಂ ನಿವೃತ್ತಿ ಯೋಜನೆಯ ವಿವರಗಳನ್ನು ಸದ್ಯದಲ್ಲೇ ಒದಗಿಸಲಾಗುವುದು. ಮುಖ್ಯ ಕಾರ್ಯದರ್ಶಿ ಎ.ರವೀಂದ್ರ ಈ ವಿಷಯವಾಗಿ ಹೋಂ ವರ್ಕ್‌ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವಯಂ ನಿವೃತ್ತಿ ಯೋಜನೆಯ ಮಾದರಿಯಲ್ಲೇ ರಾಜ್ಯದಲ್ಲೂ ಪ್ಯಾಕೇಜ್‌ ಸಿದ್ಧ ಪಡಿಸಲಾಗುವುದು.
  • ನಿವೃತ್ತ ಡಿಜಿಪಿ ಶ್ರೀನಿವಾಸುಲು ಅವರನ್ನು ರಕ್ಷಣಾ ಸಲಹೆಗಾರರಾಗಿ ನೇಮಿಸಿರುವುದನ್ನು ನಾನು ಸಮರ್ಥಿಸುತ್ತೇನೆ. ಅವರ ಅಗಾಧ ಅನುಭವ ನಮ್ಮ ಕಾನೂನು ಮತ್ತು ಸುವ್ಯವಸ್ಥೆಯ ನೆರವಿಗೆ ಬರಲಿದೆ.
  • ಭೀಮಾ ಜಲಾನಯನ ಪ್ರದೇಶದ 164 ಹಳ್ಳಿಗಳು ನೀರಿನ ತೊಂದರೆ ಎದುರಿಸುತ್ತಿಲ್ಲ ಎಂದು ಸುಪ್ರಿಂಕೋರ್ಟ್‌ಗೆ ಸರ್ಕಾರ ಅಫಿಡವಿಟ್‌ ಸಲ್ಲಿಸಲಿದೆ.
  • ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ನಿರೀಕ್ಷಿತ 33 ಪ್ರತಿಶತ ಪ್ರಗತಿಯಾಗಿದೆ. ಒಂದು ವಿದೇಶೀ ಕಂಪನಿ ನಮ್ಮಲ್ಲಿ ಹಣ ಹೂಡಲೂ ಮುಂದಾಗಿದೆ. ಇದು ಸಂತೋಷದ ವಿಷಯ.
  • ರಾಷ್ಟ್ರ ರಾಜಕೀಯದಲ್ಲಿ ನನ್ನ ಪಾತ್ರ ಏನೂ ಇಲ್ಲ. ನಾನು ಅಲ್ಲಿ ಒಂದು ಬಿಗ್‌ ರಿkುೕರೋ!
  • (ಪಿಟಿಐ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more