ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್‌ ರೋಗ ನಿವಾರಣೆಗೆ ಬಂದಿವೆ ಮೂರು ‘ಸಿದ್ಧೌ’ಷಧಗಳು!

By Staff
|
Google Oneindia Kannada News

ಚೆನ್ನೈ : ಎಚ್‌ಐವಿ ತಡೆಗಟ್ಟುವ ಗುಣ ಹೊಂದಿರುವ ಮೂರು ಔಷಧಿಗಳನ್ನು ‘ಸಿದ್ಧ’ ಸಂಸ್ಥೆ ಹೊರತಂದಿದ್ದು, ಇವು ಪರಿಣಾಮಕಾರಿಯಾಗಿವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇಲ್ಲಿನ ಗೌರ್ನ್‌ಮೆಂಟ್‌ ಹಾಸ್ಪಿಟಲ್‌ ಆಫ್‌ ಥೊರ್ಯಾಸಿಕ್‌ ಮೆಡಿಸಿನ್‌ನ ವೈದ್ಯರು ಈ ಔಷಧಿಗಳನ್ನು ಒಪ್ಪಿಕೊಂಡಿದ್ದು, ಬಳಸುತ್ತಿದ್ದಾರೆ.

ರಸಗಂಧಿ ಮೆಳುಗು, ಅಮುಕ್ಕರ ಚೂರ್ಣ ಮತ್ತು ನೆಲ್ಲಿಕಾಯಿ ಲೇಹ್ಯಂ ಎಂಬ ಮೂರು ಸಿದ್ಧ ಔಷಧಿಗಳು ಏಡ್ಸ್‌ ರೋಗ ನಿರೋಧಕ ಗುಣಗಳನ್ನು ಹೊಂದಿವೆ. ಆಸ್ಪತ್ರೆಯಲ್ಲಿ ಈ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದೇವೆ ಎನ್ನುತ್ತಾರೆ ವೈದ್ಯರು.

ಸರ್ಕಾರಿ ಹಾಸ್ಪಿಟಲ್‌ ಆಫ್‌ ಥೋರ್ಯಾಸಿಕ್‌ ಮೆಡಿಸಿನ್‌ನ ಉಪ ಸೂಪರಿಂಟೆಂಡೆಂಟ್‌ ಎಸ್‌.ರಾಜಶೇಖರ್‌ ಹೇಳುವಂತೆ- ನಮ್ಮ ಆಸ್ಪತ್ರೆಯಲ್ಲಿ ಏಡ್ಸ್‌ ಪೀಡಿತರಿಗೆ ಬೇಕಾಗುವ ಮೂಲ ಔಷಧಗಳಿವು. ಇಲ್ಲಿ ಏಡ್ಸ್‌ ಪೀಡಿತರ ಪರೀಕ್ಷೆಗಾಗೇ ವಿಶೇಷ ಘಟಕವಿದೆ. ಪ್ರತಿನಿತ್ಯ ಸುಮಾರು 300 ರೋಗಿಗಳು ಇಲ್ಲಿಗೆ ಭೇಟಿಕೊಡುತ್ತಾರೆ. ದುರಂತವೆಂದರೆ ದಿನೇದಿನೇ ಹೆಚ್ಚು ಹೆಚ್ಚು ಮಕ್ಕಳು ಈ ರೋಗ ಪೀಡಿತರಾಗುತ್ತಿದ್ದಾರೆ. ಸದ್ಯದಲ್ಲೇ ನಮ್ಮ ಆಸ್ಪತ್ರೆ ಜೊತೆ ಅಮೆರಿಕ ಮೂಲದ ವೈದ್ಯಕೀಯ ಕೇಂದ್ರಗಳು ಕೈಜೋಡಿಸಲಿವೆ. ಇದರಿಂದ ಏಡ್ಸ್‌ ರೋಗ ನಿಯಂತ್ರಣಕ್ಕೆ ಸುಸಜ್ಜಿತ ವ್ಯವಸ್ಥೆ ಜಾರಿಗೆ ಬರಲಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X