ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ತೂರಿನಲ್ಲಿ ಮೇ 14ರಂದು ಬೃಹತ್‌ ಕೋಟಿ ಗಾಯತ್ರಿ ಮಹಾಯಜ್ಞ

By Staff
|
Google Oneindia Kannada News

ಪುತ್ತೂರು: ಇಲ್ಲಿನ ‘ಶಿವಳ್ಳಿ ಸಂಪದ’ದ ನೇತೃತ್ವದಲ್ಲಿ ಕೋಟಿ ಗಾಯತ್ರಿ ಮಹಾಯಜ್ಞ ಮೇ 19ರಂದು ಕೆಮ್ಮಿಂಜೆ ದೇವಾಲಯದಲ್ಲಿ ನಡೆಯಲಿದೆ.

ಯಜ್ಞದ ಪೂರ್ವಭಾವಿಯಾಗಿ ಈಗಾಗಲೇ ಶಿವಳ್ಳಿ ಸಮಾಜ ಬಾಂಧವರ ಮನೆಯಲ್ಲಿ ಹಾಗೂ ತಾಲ್ಲೂಕಿನ ವಿವಿಧ ದೇವಾಲಯದಲ್ಲಿ 1 ಕೋಟಿ ಗಾಯತ್ರಿ ಜಪ ಹಾಗೂ 10 ಲಕ್ಷ ತರ್ಪಣ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ. ಮೇ 17ರಂದು ಕೆಮ್ಮಿಂಜೆ ದೇವಾಲಯದಲ್ಲಿ 100ಕ್ಕೂ ಹೆಚ್ಚು ಮಂದಿ ವೈದಿಕರು ಮಹಾಯಾಗವನ್ನು ಆರಂಭಿಸಲಿದ್ದಾರೆ.

ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಯಜ್ಞಶಾಲೆಯಲ್ಲಿ ಯಾಗಕ್ಕಾಗಿ ಹತ್ತು ಯಜ್ಞಕುಂಡಗಳು ಸಿದ್ಧವಾಗಿವೆ. ಗಾಯತ್ರಿ ಮಂತ್ರ ಘೋಷದೊಂದಿಗೆ ಯಜ್ಞ ಕಾರ್ಯ ನಡೆಯಲಿದ್ದು, ಜಪ, ತರ್ಪಣ, ನಮಸ್ಕಾರ, ಹೋಮ ಮತ್ತು ಭೋಜನ ಎಂಬ ಐದು ಹಂತಗಳಲ್ಲಿ ಯಜ್ಞ ಸಂಪನ್ನಗೊಳಿಸಲಾಗುವುದು.

ಯಜ್ಞದ ಅಂಗವಾಗಿ ಮೇ 17ರಂದು 10 ಸಾವಿರ ನಮಸ್ಕಾರ ಕಾರ್ಯಕ್ರಮ, ರಾತ್ರಿ ಅರಣೆ, ಮಥನದ ಮೂಲಕ ಅಗ್ನಿ ಜನನ, ಮೇ 18ರಂದು ಗಣಪತಿ ಹವನ, ವೇದ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ಮೇ 19ರಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರಿಂದ ಗಾಯತ್ರಿ ಮಂತ್ರದ ಮಹತ್ವದ ಬಗ್ಗೆ ಉಪನ್ಯಾಸ ನಡೆಯಲಿದೆ. ಬಳಿಕ ಎಡನೀಪರು, ಪೇಜಾವರ, ಕಾಣಿಯೂರು ಮತ್ತು ಸುಬ್ರಹ್ಮಣ್ಯ ಮಠದ ಯತಿಗಳು ಆಶೀರ್ವಚನ ನೀಡುವರು.

(ಇನ್ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X