For Daily Alerts
ಹಿರಿಯೂರು ಸಮೀಪ ಬಸ್ಸು-ಲಾರಿ ಡಿಕ್ಕಿ, ಐವರ ದುರ್ಮರಣ
ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಖಾಸಗಿ ಐಷಾರಾಮಿ ಬಸ್ಸು ಹಾಗೂ ಲಾರಿ ನಡುವೆ ಸೋಮವಾರ ಬೆಳಗ್ಗೆ ಸಂಭವಿಸಿದ ಡಿಕ್ಕಿಯಲ್ಲಿ ಈ ಅಪಘಾತ ಸಂಭವಿಸಿದೆ. ಸಾವಿಗೀಡಾದ ಐದು ಮಂದಿಯಲ್ಲಿ ಮೂವರು ಬಸ್ಸಿನ ಪ್ರಯಾಣಿಕರಾದರೆ, ಉಳಿದ ಇಬ್ಬರು ಲಾರಿಯಲ್ಲಿದ್ದವರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಸ್ಸು- ಲಾರಿ ಅಪಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಹತ್ತಿರದ ಆಸ್ಪತ್ರೆಗೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...