ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತನ ಕೊಲೆ :18 ವರ್ಷಗಳ ಖಟ್ಲೆ ಇತ್ಯರ್ಥ, 6 ಪೊಲೀಸರಿಗೆ ಸೆರೆ

By Staff
|
Google Oneindia Kannada News

ಗುಲ್ಬರ್ಗಾ : 18 ವರ್ಷಗಳ ಖಟ್ಲೆ ಕೊನೆಗೂ ಮುಕ್ತಾಯವಾಗಿದೆ. ನಿಧಾನವಾಗಿಯಾದರೂ ಫಲಿತಾಂಶ ದೊರಕಿದೆ. ವಿಪರ್ಯಾಸವೆಂದರೆ ಅಪರೂಪದ ಈ ಖಟ್ಲೆಯಲ್ಲಿ ಆರೋಪಿಗಳ ಸ್ಥಾನದಲ್ಲಿ ನಿಂತು, ಅಪರಾಧ ಖಚಿತಗೊಂಡು ಶಿಕ್ಷೆಗೊಳಗಾದವರು ಪೊಲೀಸರು!

18 ವರ್ಷಗಳ ಹಿಂದೆ ಗುಲ್ಬರ್ಗಾ ಜಿಲ್ಲೆಯ ಪ್ರಭಾವಿ ದೈನಿಕ ‘ಕ್ರಾಂತಿ’ ಪತ್ರಿಕೆಯ ಸಂಪಾದಕ ಸಿದ್ಧರಾಮೇಶ ಅವರನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಪ ಪೊಲೀಸ್‌ ಅಧೀಕ್ಷಕ ಸೇರಿದಂತೆ 6 ಮಂದಿ ಪೊಲೀಸ್‌ ಅಧಿಕಾರಿಗಳಿಗೆ ಗುಲ್ಬರ್ಗಾದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 3 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ಶೇಖರ್‌ ಗೌಡ ಪಾಟೀಲ್‌ ನೀಡಿದ 110 ಪುಟಗಳ ತೀರ್ಪಿನಲ್ಲಿ , ಭಾರತೀಯ ದಂಡ ಸಂಹಿತೆ 120 (ಬಿ) ಮತ್ತು 201 ಕಲಮಿನ ಅನ್ವಯ, ಸಂಚು ಹಾಗೂ ಅಪರಾಧ ಮುಚ್ಚಿ ಹಾಕಲು ಪ್ರಯತ್ನಿಸಿರುವ ಆರೋಪ ರುಜುವಾತುಗೊಂಡಿದ್ದು - ಅಪರಾಧಿಗಳಿಗೆ 3 ವರ್ಷದ ಕಠಿಣ ಶಿಕ್ಷೆ ಹಾಗೂ 7500 ರುಪಾಯಿ ದಂಡ ವಿಧಿಸಲಾಗಿದೆ. ಶಿಕ್ಷೆಗೊಳಗಾದವರಲ್ಲಿ ಒಬ್ಬರು ಉಪ ಪೊಲೀಸ್‌ ಅಧೀಕ್ಷಕ, ಇಬ್ಬರು ಪೊಲೀಸ್‌ ಇನ್ಸ್‌ಪೆಕ್ಟರ್‌, ಒಬ್ಬ ಪಿಎಸ್‌ಐ ಹಾಗೂ ಇಬ್ಬರು ಪೇದೆಗಳು ಸೇರಿದ್ದಾರೆ.

1984, ಫೆಬ್ರವರಿ 14 ರಂದು ಕ್ರಾಂತಿ ಪತ್ರಿಕೆಯ ಸಂಪಾದಕ ಸಿದ್ಧರಾಮೇಶ್‌ ಅವರು ಕೊಲೆಯಾಗಿದ್ದು , ಈ ಕೊಲೆ ಪ್ರಕರಣದಲ್ಲಿ ಪೊಲೀಸರ ಕೈವಾಡವಿದೆ ಎಂದು ಆರೋಪಿಸಲಾಗಿತ್ತು . 1983 ರ ಆಗಸ್ಟ್‌ 26 ರಂದು ಸಿದ್ಧರಾಮೇಶ್‌ ಅವರನ್ನು ಬಹಿರಂಗವಾಗಿ ಥಳಿಸಿದ್ದ ಪೊಲೀಸರು, ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದರು. ಇದರ ಜೊತೆಗೆ ಮೂರು ವಾರಗಳ ಅವಧಿಯಲ್ಲಿ ಸಿದ್ಧರಾಮೇಶ್‌ ಅವರ ಮೇಲೆ 12 ಮೊಕದ್ದಮೆ ಹೂಡಲಾಗಿತ್ತು .

ಪತ್ರಕರ್ತ ಸಿದ್ಧರಾಮೇಶ್‌ ಕೊಲೆ ಪ್ರಕರಣದ ತನಿಖೆಗೆ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಿತ್ತು . ನಂತರ ಈ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸಲಾಗಿತ್ತು .
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X