ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿಗೆ ವಿಜಯ್‌ ಮಲ್ಯ ಬರುವುದು ಹೇಗೆ? ಹೀಗೆ ಹಾರಿಕೊಂಡು...

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

How Vijay Mallya travels to Parliament?ಸಂಸತ್‌ ಕಲಾಪ ಇರುವ ದಿನಗಳಲ್ಲಿ ಬೆಳಗ್ಗೆ 10 ಗಂಟೆಗೆ ಕೊಂಚ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲೊಂದು 6 ಸೀಟುಗಳ ಪುಟ್ಟ ವಿಮಾನ ಬಂದಿಳಿಯುತ್ತದೆ. ಅದರಿಂದ ಮಹಾರಾಷ್ಟ್ರದ ಎಂಪಿ ಪ್ರಫುಲ್‌ ಪಟೇಲ್‌, ಇನ್ನೊಬ್ಬ ಎಂಪಿ ಸುರೇಶ್‌ ಕಲ್ಮಾಡಿ ಕೆಳಗಿಳಿಯುತ್ತಾರೆ. ಆಮೇಲೆ ವಿಮಾನದೊಡೆಯ ವಿಜಯ್‌ ಮಲ್ಯ ಭೂಸ್ಪರ್ಶ! ಅಲ್ಲಿಂದ ಐಷಾರಾಮಿ ಕಾರಿನಲ್ಲಿ ಸಂಸತ್‌ ಭವನಕ್ಕೆ. ಇದು ಸಂಸತ್ತಿಗೆ ಮಲ್ಯ ಅಂಡ್‌ ಫ್ರೆಂಡ್ಸ್‌ ಬರುವ ಪರಿ.

ಆದರೆ, ಈ ಭಾಗ್ಯ ಎಲ್ಲರಿಗೂ ಇಲ್ಲ. ಕೆಲವರದ್ದು ಹತ್ತಿರದ ಕ್ವಾಟ್ರಸ್‌ನಿಂದ ನಟರಾಜ ಸರ್ವಿಸ್‌, ಇನ್ನು ಕೆಲವರದ್ದು ದಿವಂಗತ ಬಾಲಯೋಗಿ ಪ್ರಾರಂಭಿಸಿದ ಸಂಸತ್ತಿಗಾಗೇ ಓಡಾಡುಡುವ ವಿಶೇಷ ಬಸ್‌ ಪಯಣ, ಕೊಂಚ ಅನುಕೂಲಸ್ಥರೆನ್ನಬಹುದಾದವರು ಅಂಬಾಸಿಡರ್‌ನಲ್ಲೋ ಇನ್ನಾವುದೋ ಕಾರ್‌ನಲ್ಲೋ ಬರುವುದುಂಟು. ಆದರೆ ವಿಜಯ್‌ ಮಲ್ಯ ಈಗ ಸೆಂಟರ್‌ ಆಫ್‌ ಅಟ್ರಾಕ್ಷನ್‌.

ಮಲ್ಯ ಹೀಗೇಕೆ ಓಡಾಡಬೇಕು? ಅವರೇ ಹೇಳುತ್ತಾರೆ ಕೇಳಿ...
ನಮ್ಮದು ಮುಗಿಯದ ವ್ಯವಹಾರದ ತಲೆನೋವು. ಮುಂಬಯಿಯಲ್ಲಿ ಸದ್ಯಕ್ಕೆ ನನ್ನ ಠಿಕಾಣಿ. ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಓಡಾಡುವುದರಿಂದ ದಿನಕ್ಕೆ ಕನಿಷ್ಠ 6 ಗಂಟೆಯಾದರೂ ವ್ಯವಹಾರದ ಕೆಲಸಗಳಲ್ಲಿ ತೊಡಗಿಕೊಳ್ಳೋದು ಸಾಧ್ಯವಾಗುತ್ತಿದೆ. ಅಬ್ಬಬ್ಬಾ ಅಂದರೆ ಸಂಜೆ 5 ಗಂಟೆಗೆ ಸಂಸತ್ತಿನ ಕಲಾಪ ವಗೈರೆಗಳು ಮುಗಿಯುತ್ತವೆ. ಅಲ್ಲೇ ಉಳಿದುಕೊಂಡರೆ, ನನ್ನ ಇಡೀ ದಿನ ಕಳೆದುಹೋಗುತ್ತದೆ. ಬದಲಾಗಿ ನಾನು ವಿಮಾನದಲ್ಲಿ ಮುಂಬಯಿಗೆ ಮತ್ತೆ ವಾಪಸ್ಸು ಬಂದರೆ, ಒಂದಿಷ್ಟು ಕೆಲಸ ಮಾಡಿಕೊಳ್ಳಬಹುದು. ಇಷ್ಟಕ್ಕೂ ನನ್ನ ಪ್ರಯಾಣಕ್ಕೆ ಜನರ ದುಡ್ಡನ್ನೇನೂ ಬಳಸುತ್ತಿಲ್ಲವಲ್ಲ :-)

ದೆಹಲಿಯಲ್ಲೇ ಇಳಿದುಕೊಳ್ಳುವುದು ನನಗೆ ಕಷ್ಟವಲ್ಲ. ನನ್ನ ಶಾಲಾ ದಿನದ ಅಸಂಖ್ಯ ಗೆಳೆಯರು ಈಗಲೂ ಬುಲಾವು ಕೊಡುತ್ತಲೇ ಇರುತ್ತಾರೆ. ಆದರೆ, ನನಗೆ ಸಂಸತ್‌ ಕಲಾಪವೂ ಮುಖ್ಯ, ಮದ್ಯೋದ್ಯಮವೂ ಮುಖ್ಯ. ಅದಕ್ಕೆ ಈ ವಿಮಾನ ಯಾತ್ರೆ. ನಾನೂ ಸೇರಿ ಐವರು ವಿಮಾನದ ಖಾಯಂ ಯಾತ್ರಿಗಳು. ಈ ವಿಮಾನ ನನ್ನ ನೆಚ್ಚಿನ ಮಿತ್ರ. ಇದರ ದೆಸೆಯಿಂದ ಸಂಸತ್‌ನಲ್ಲಿ ನನ್ನ ಅಟೆಂಡೆಂನ್ಸ್‌ ನೂರಕ್ಕೆ ನೂರರಷ್ಟಿದೆ!

ಅಂದಹಾಗೆ, ಮಲ್ಯ ಅವರ ಈ ವಿಶೇಷ ವಿಮಾನಕ್ಕೆ ಎಲ್ಲರೂ ಇಟ್ಟಿರುವ ಹೆಸರು ಪಾರ್ಲಿಮೆಂಟ್‌ ಎಕ್ಸ್‌ಪ್ರೆಸ್‌!

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X