• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಳು ಲಕ್ಷ ರೈತರಿಗೆ ಬೆಳೆವಿಮೆ ಸೂರ್ಯ ; 120 ಕೋಟಿ ರು. ಪರಿಹಾರ

By Staff
|

ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಕುಟುಂಬಗಳಿಗೆ ಪರಿಹಾರ ಧನ ನೀಡುವುದನ್ನು ನಿಲ್ಲಿಸಬೇಕು ಎಂದು ಡಾ. ವೀರೇಶ್‌ ನೀಡಿರುವ ವರದಿಯ ಬಗ್ಗೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಿಗೇ, ರಾಜ್ಯದಲ್ಲಿ ಕೃಷಿ ವಿಮೆ ಕುರಿತಾದ ಅಂಕಿ ಅಂಶಗಳು ಪ್ರಕಟವಾಗಿವೆ.

ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿರುವ ಕೃಷಿ ವಿಮೆ ಫಲಿತದ ಕುರಿತು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಎನ್‌. ವಿಶ್ನನಾಥ್‌ ನೀಡಿರುವ ಅಂಕಿ ಅಂಶಗಳಂತೆ- ಮೇ ತಿಂಗಳಿಗೆ ಕೊನೆಗೊಳ್ಳುವ ವರ್ಷದಲ್ಲಿ ಕೃಷಿ ವಿಮೆ ಫಲಾನುಭವಿ ರೈತರ ಸಂಖ್ಯೆ 7 ಲಕ್ಷ. ವಿಮೆ ಸೌಲಭ್ಯಗಳಿಗಾಗಿ ಪಡೆದ ಹಣದ ಮೊತ್ತ 120 ಕೋಟಿ ರುಪಾಯಿ.

ವಿಶ್ವನಾಥನ್‌ ಅವರ ಹೇಳಿಕೆಯ ಮುಖ್ಯಾಂಶಗಳು :

  • ಈ ಬಾರಿ ಬೆಳೆ ವಿಮೆಯಡಿ 13 ಕೃಷಿ ಉತ್ಪನ್ನಗಳನ್ನು ಗುರ್ತಿಸಲಾಗಿತ್ತು . ಮುಂದಿನ ವರ್ಷ ಇನ್ನೂ 5 ಕೃಷಿ ಬೆಳೆಗಳನ್ನು ವಿಮಾ ಯೋಜನೆಯಡಿ ತರಲಾಗುವುದು.
  • ಈ ವರ್ಷ ತಾಲ್ಲೂಕನ್ನು ಒಂದು ಘಟಕವಾಗಿ ಗುರ್ತಿಸಿಕೊಂಡು, ಪ್ರಕೃತಿಯ ವೈಪರೀತ್ಯಗಳಿಂದ ನಾಶವಾದ ಬೆಳೆಯನ್ನು ಅಂದಾಜು ಮಾಡಲಾಗಿತ್ತು . ಮುಂದಿನ ಬೆಳೆಯ ವರ್ಷದಿಂದ ಹೋಬಳಿ ಮಟ್ಟದಲ್ಲಿ ಈ ಪ್ರಕ್ರಿಯೆಯನ್ನು ಅನುಸರಿಸಲಾಗುವುದು.
  • ಅಡಿಕೆ ಮಾರುಕಟ್ಟೆಯಲ್ಲಿ ಮಧ್ಯೆ ಪ್ರವೇಶಿಸಲು ಸರ್ಕಾರ ಉದ್ದೇಶಿಸಿದ್ದು , ಜೂನ್‌ 1 ರಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ಅಡಿಕೆ ಖರೀದಿಸಲಿದೆ.
  • ಮಾರುಕಟ್ಟೆ ಮಧ್ಯೆ ಪ್ರವೇಶಕ್ಕೆ 40 ಕೋಟಿ ರುಪಾಯಿಗಳ ಅಗತ್ಯವಿದೆ. ಧನ ಸಹಾಯಕ್ಕೆ ಹಾಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿದೆ.
  • ಈ ಸೀಜನ್‌ನಲ್ಲಿ 60 ಮಿಲಿಯನ್‌ ಕಿಲೋ ತಂಬಾಕು ಉತ್ಪಾದಿಸಲು ರಾಜ್ಯಕ್ಕೆ ಅನುಮತಿ ನೀಡುವಂತೆಯೂ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.
  • (ಪಿಟಿಐ)

    ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X