ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕ್ರೆೃಸ್ಟ್‌ ಕಾಲೇಜಿನೊಂದಿಗೆ ಕೈಜೋಡಿಸಿದ ಥೈಲ್ಯಾಂಡ್‌ ಶಿಕ್ಷಣ ಸಂಸ್ಥೆ

By Staff
|
Google Oneindia Kannada News

ಬೆಂಗಳೂರು: ಥೈಲ್ಯಾಂಡ್‌ನ ಬ್ಯಾಂಕಾಕ್‌ ಅಸಂಪ್ಷನ್‌ ವಿಶ್ವ ವಿದ್ಯಾಲಯ ಹಾಗೂ ನಗರದ ಪ್ರತಿಷ್ಠಿತ ಕ್ರೆೃಸ್ಟ್‌ ಕಾಲೇಜು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದದ ಪ್ರಕಾರ ಕ್ರೆೃಸ್ಟ್‌ ಕಾಲೇಜು ಏಳು ಪ್ರಮುಖ ಪದವಿಗಳನ್ನುಆರಂಭಿಸಲಿದೆ. ಪದವಿ ವಿಭಾಗದಲ್ಲಿ ಮೂರು ಕೋರ್ಸ್‌ಗಳು ಮತ್ತು ಸ್ನಾತಕೋತ್ತರ ಪದವಿ ವಿಭಾಗದಲ್ಲಿ ನಾಲ್ಕು ಕೋರ್ಸುಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಕ್ರೆೃಸ್ಟ್‌ ಕಾಲೇಜಿನ ಪ್ರಾಂಶುಪಾಲ ಫಾ. ಸೆಬೆಸ್ಟಿಯನ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದವಿ ವಿಭಾಗದಲ್ಲಿ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ , ಕಂಪ್ಯೂಟರ್‌ ವಿಜ್ಞಾನ ಮತ್ತು ಐಟಿ ಕೋರ್ಸುಗಳು ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌, ಟೂರಿಸಂ ನಿರ್ವಹಣೆ, ಐಟಿ ಮತ್ತು ಟೆಲಿಕಮ್ಯೂನಿಕೇಷನ್ಸ್‌ ಕೋರ್ಸುಗಳು ಆರಂಭವಾಗಲಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿದಂತಾಗುತ್ತದೆ ಎಂದು ಸೆಬಾಸ್ಟಿಯನ್‌ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X