ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್‌ಗೆ ಕಡಿವಾಣ ಹಾಕಲು ಶಾಸಕರ ವೇದಿಕೆಗೆ ಚಾಲನೆ ನೀಡಿದ ಕೃಷ್ಣ

By Staff
|
Google Oneindia Kannada News

ಬೆಂಗಳೂರು: ಹೆಚ್ಚುತ್ತಿರುವ ಮಾರಣಾಂತಿಕ ಏಡ್ಸ್‌ ರೋಗದ ಬೆಳವಣಿಗೆ ಅಪಾಯವನ್ನು ಜನ ಸಮುದಾಯವು ಅರಿತುಕೊಂಡು ಈಗಲೇ ಎಚ್ಚೆತ್ತುಕೊಂಡಲ್ಲಿ ರೋಗಕ್ಕೆ ತುತ್ತಾಗುವವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುವುದೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಶುಕ್ರವಾರ ತಿಳಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಏಡ್ಸ್‌ ರೋಗದ ಹಿನ್ನೆಲೆಯಲ್ಲಿ ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲು ಶಾಸಕರ ವೇದಿಕೆಯನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದ ಕೃಷ್ಣ ಈ ವಿಷಯ ತಿಳಿಸಿದರು.

ಏಡ್ಸ್‌ ರೋಗಕ್ಕೆ ತುತ್ತಾದ ಅತಿ ಹೆಚ್ಚು ಜನರನ್ನು ಹೊಂದಿರುವ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ, ಜನರನ್ನು ಏಡ್ಸ್‌ ನ ಬಗೆಗೆ ಕಾಳಜಿ ವಹಿಸುವಂತೆ ಮಾಡುವುದು ಸದ್ಯಕ್ಕಿರುವ ಅತಿ ದೊಡ್ಡ ಸವಾಲು ಎಂದು ಮುಖ್ಯಮಂತ್ರಿಗಳು ಹೇಳಿದರು.

ಬರುವ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು 3.6 ದಶ ಲಕ್ಷ ಜನರು ಏಡ್ಸ್‌ಗೆ ಬಲಿಯಾಗಬಹುದೆಂಬ ರಾಷ್ಟ್ರೀಯ ಸಮೀಕ್ಷೆಯಾಂದರ ಅಂದಾಜನ್ನು ಮಂದಿಟ್ಟ ಕೃಷ್ಣ, 2012ರ ಹೊತ್ತಿಗೆ ರಾಜ್ಯದಲ್ಲಿ 6.5 ಲಕ್ಷ ಜನರು ಈ ಮಾರಕ ರೋಗವನ್ನು ಹೊಂದಬಹುದಾದ ಅಂಕಿ-ಅಂಶವನ್ನು ಬಹಿರಂಗ ಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅನ್‌ಏಡ್ಸ್‌ ನಿರ್ದೇಶಕ ಡಾ. ಪೀಟರ್‌ ಪೈಯಟ್‌, ಏಡ್ಸ್‌ ಪಿಡುಗನ್ನು ನಿಯಂತ್ರಿಸಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದರು. ರಾಜ್ಯದ ಆರೋಗ್ಯ ಸಚಿವ ಡಾ. ಎ. ಬಿ. ಮಾಲಕ ರೆಡ್ಡಿ, ಸಚಿವ ಸಂಪುಟ ಹಾಗೂ ಉಭಯ ಸದನಗಳ ಅನೇಕ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X