‘ನನ್ನ ಹೆಂಡತಿ ಮಾರಾಟಕ್ಕೆ : ದೋಣಿ ಕೊಟ್ಟು, ಆಕೆಯನ್ನು ಪಡೆಯಿರಿ’
ಹೆಂಡತಿ ಪ್ರಾಣ ಹಿಂಡುತೀ...
ಹೆಂಡತಿಯಾಬ್ಬಳು
ಮನೆಯಾಳಗಿದ್ದರೆ
ಕಳೆವುದು
ಕೋಟಿ
ರುಪಾಯಿ
ಹೆಂಡತಿಯಾಬ್ಬಳು
ಹತ್ತಿರವಿದ್ದರೆ
ನಾನು
ಒಬ್ಬ
ಬಡಪಾಯಿ...!
ಹೀಗೆಲ್ಲಾ ಹಾಡುವ ಮಂದಿ ಉಂಡು ಮಲಗುವ ಹೊತ್ತಿಗಾದರೂ ಹೆಂಡತಿಯ ಜೊತೆ ರಾಜಿಯಾಗುತ್ತಾರೆ. ಸತ್ಯಕ್ಕಾಗಿ ಹರಿಶ್ಚಂದ್ರ ಹೆಂಡತಿಯನ್ನು ಮಾರಿದ್ದನ್ನು ಕೇಳಿದ್ದೇವೆ. ಆದರೆ ಕೇವಲ ಒಂದು ದೋಣಿಗಾಗಿ ಹೆಂಡತಿಯನ್ನು ಮಾರಲು ಹೊರಟಿರುವ ಭೂಪ ನ್ಯೂಜಿಲೆಂಡಿನಲ್ಲಿದ್ದಾನೆ.
ಹೆಂಡತಿ ಮಾರಲು ಹೊರಟಿರುವಾತನ ಹೆಸರು ಆ್ಯಂಡ್ರೂ ಗಿಲ್ಮೋರ್. ಮಾರಾಟಕ್ಕಿರುವಾಕೆ ಶರ್ಲಿ ಗಿಲ್ಮೋರ್. ಹೆಂಡತಿ ತನ್ನನ್ನು ಏಪ್ರಿಲ್ ಫೂಲ್ ಮಾಡಿದ್ದಕ್ಕೆ ಇದು ಗಂಡನ ಪ್ರತೀಕಾರ! ಸ್ಥಳೀಯ ಪತ್ರಿಕೆಯಾಂದರ ಮೋಟಾರಿಂಗ್ ವಿಭಾಗದಲ್ಲಿ ತನ್ನ ಹೆಂಡತಿಯ ಸೆಕ್ಸಿ ಚಿತ್ರವನ್ನೂ ಈತ ಪ್ರಕಟಿಸಿದ್ದಾನೆ. ನಿನ್ನ ಬೈಕು ಕಳುವಾಗಿದೆ ಅಂತ ಗಂಡನನ್ನು ಏಪ್ರಿಲ್ ಫೂಲ್ ಮಾಡಿದ್ದೇ ಶರ್ಲಿಗೆ ಮುಳುವಾಗಿದೆ.
ಆರು ಮೀಟರ್ ಉದ್ದದ ದೋಣಿಯನ್ನು ಕೊಡಿ, ನನ್ನ ಹೆಂಡತಿಯನ್ನು ಪಡೆಯಿರಿ ಎಂದು ನಿಸ್ಸಂಕೋಚವಾಗಿ ಜಾಹೀರಾತು ಕೊಟ್ಟಿದ್ದಾನೆ ಆ್ಯಂಡ್ರೂ ಗಿಲ್ಮೋರ್. ಆರಾಮಾಗಿ ಕಾಲುಚಾಚಿಕೊಂಡು ಆ್ಯಂಡ್ರೂ ಸಿಗರೇಟು ಸೇದುತ್ತಿದ್ದರೆ, ತನ್ನನ್ನು ದೋಣಿ ಕೊಟ್ಟು ಪಡೆಯಲು ಮುಂದಾಗಿರುವವರಿಗೆ ಉತ್ತರ ಕೊಟ್ಟು ಕೊಟ್ಟು ಶರ್ಲಿ ಸುಸ್ತಾಗಿದ್ದಾಳೆ. ಇತ್ತೀಚಿನ ಸುದ್ದಿಯ ಪ್ರಕಾರ ಶರ್ಲಿಯನ್ನು ಪಡೆಯಲು ಮನೆಯ ಮುಂದೆ ಜನವೋ ಜನ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...