ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಬಿಡಬೇಕಾದಷ್ಟು ‘ಕಾವೇರಿ’ಯನ್ನು ಬಿಟ್ಟಾಗಿದೆ- ಪಾಟೀಲ್‌

By Staff
|
Google Oneindia Kannada News

ಬೆಂಗಳೂರು : ಕಾವೇರಿ ಜಲವಿವಾದ ನ್ಯಾಯಾಧೀಕರಣದ ಮಧ್ಯಂತರ ಆದೇಶಕ್ಕೆ ಬದ್ಧವಾಗಿ ನೀರು ಬಿಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂಬ ತಮಿಳುನಾಡಿನ ಹೇಳಿಕೆಯನ್ನು ಕರ್ನಾಟಕ ಸರ್ಕಾರ ಸಾರಾ ಸಗ-ಟಾ-ಗಿ ನಿರಾಕರಿಸಿದೆ.

ತಮಿಳುನಾಡಿನ ಪನ್ನೀರ್‌ ಸೆಲ್ವಂ ಮಾಡಿರುವ ಆರೋಪ ಹುರುಳಿಲ್ಲದ್ದು ಮತ್ತು ದಾರಿ ತಪ್ಪಿಸುವಂಥದ್ದು. ಏಪ್ರಿಲ್‌ 28ರಂದೇ ತಮಿಳುನಾಡಿಗೆ 185.7 ಟಿಎಂಸಿ ನೀರು ಬಿಡಲಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವ ಎಚ್‌.ಕೆ.ಪಾಟೀಲ್‌ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಈ ತಿಂಗಳೊಳಗಾಗಿ ತಮಿಳುನಾ-ಡಿ-ಗೆ 205 ಟಿಎಂಸಿ ಕಾವೇರಿ ನೀರನ್ನು ರಾಜ್ಯ ಬಿಡಬೇಕು. ಮಾನ್‌ಸೂನ್‌ ಬೆಂಬಲ ಸಿಕ್ಕಿದಲ್ಲಿ ಇದೂ ಕೂಡ ಅಸಾಧ್ಯವೇನಲ್ಲ . ಕಾವೇರಿ ನದಿ ಪ್ರಾಧಿಕಾರ ಹಾಗೂ ಪರಿಶೀಲನಾ ಸಮಿತಿ ತನ್ನ ಪರವಾಗಿ ಕಿಂಚಿತ್ತೂ ಸಹಾಯ ಮಾಡುತ್ತಿಲ್ಲವೆಂದು ತಮಿಳುನಾಡು ಹೇಳುವುದನ್ನು ನಾನು ಒಪ್ಪುವುದಿಲ್ಲ. ಪರಿಶೀಲನಾ ಸಮಿತಿಯ ಯಾವುದೇ ನಿರ್ದೇಶನವನ್ನೂ ಕರ್ನಾಟಕ ತಳ್ಳಿ ಹಾಕಿಲ್ಲ ಎಂದು ಪಾಟೀಲ್‌ ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X