• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸದ್ಯದಲ್ಲಿಯೇ ಬೆಳದಿಂಗಳ ವಿಹಾರ

By Staff
|

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳದಿಂಗಳ ವಿಹಾರಕ್ಕೆ ಅನುಕೂಲ ಕಲ್ಪಿಸಲು ಉದ್ಯಾನವನದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಬನ್ನೇರುಘಟ್ಟದಲ್ಲಿ ಹುಲಿ ಸಿಂಹಗಳನ್ನು ನೋಡಲು ಸಫಾರಿ ಹೋಗುವ ವ್ಯಾನುಗಳು ಇನ್ನು ಮುಂದೆ ಸಂಜೆ ಐದು ಗಂಟೆಗೆ ತಮ್ಮ ಸುತ್ತಾಟವನ್ನು ನಿಲ್ಲಿಸುವುದಿಲ್ಲ. ಬೆಳದಿಂಗಳಲ್ಲಿಯೂ ಹುಲಿಗಳು ಮಲಗಿರುವ ಕಾಡಿನೊಳಕ್ಕೆ ನಿಸರ್ಗ ಪ್ರಿಯರನ್ನು ಕರೆದುಕೊಂಡು ಹೋಗಲಿವೆ. ಈ ವ್ಯವಸ್ಥೆಯನ್ನು ಸದ್ಯದಲ್ಲಿಯೇ ಆರಂಭಿಸಲು ಪ್ರಯತ್ನಗಳು ಸಾಗಿದ್ದು, ದೇಶದಲ್ಲಿಯೇ ರಾತ್ರಿ ಸಫಾರಿ ಎಂಬ ಯೋಜನೆಯನ್ನು ಜಾರಿಗೆ ತಂದ ಪ್ರಥಮ ರಾಷ್ಟ್ರೀಯ ಉದ್ಯಾನವನ ಎಂಬ ಅಗ್ಗಳಿಕೆಯೂ ಬನ್ನೇರುಘಟ್ಟಕ್ಕೆ ಸಲ್ಲಲಿದೆ.

ರಾತ್ರಿ ಸಫಾರಿ ನಡೆಸುವುದರಿಂದ ಯಾವುದೇ ತೊಂದರೆಗಳಿವೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ಸಿಂಗಪೂರದ ಜೈವಿಕ ಉದ್ಯಾನವನದ ಅಧಿಕಾರಿಗಳ ತಂಡವೊಂದು ನಗರಕ್ಕೆ ಆಗಮಿಸಿದೆ. ಸಿಂಗಪೂರದ ಪ್ರಖ್ಯಾತ ಜುರಾಂಗ್‌ ಪಾರ್ಕ್‌ನಲ್ಲಿ ಈಗಾಗಲೇ ರಾತ್ರಿ ಸಫಾರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ವಿಶ್ವದಲ್ಲಿ ಪ್ರಥಮ ರಾತ್ರಿ ಸಫಾರಿಯನ್ನು ಪರಿಚಯಿಸಿದ ಮೊದಲ ದೇಶ (1994)ಎಂಬ ಕ್ರೆಡಿಟ್‌ ಕೂಡ ಸಿಂಗಪೂರಕ್ಕೆ ಸಲ್ಲಬೇಕು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X