ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 4 ರಿಂದ ಬಸವನಗುಡಿ ಕ್ರಿಕೆಟ್‌ ಕಪ್‌ ಸ್ಪರ್ಧಾಕಣದಲ್ಲಿ 24 ತಂಡ

By Staff
|
Google Oneindia Kannada News

ಬೆಂಗಳೂರು : ಪ್ರತಿಷ್ಠಿತ ಬಸವನಗುಡಿ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ವೇದಿಕೆ ಸಿದ್ಧವಾಗಿದ್ದು , ಮೇ 4ರ ಶನಿವಾರದಿಂದ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ಈ ಬಾರಿ 24 ತಂಡಗಳು ಭಾಗವಹಿಸಲಿವೆ.

ಕಳೆದ ಬಾರಿಯ ಚಾಂಪಿಯನ್‌ ಚೆನ್ನೈನ ಇಂಡಿಯಾ ಸಿಮೆಂಟ್ಸ್‌ ಹಾಗೂ ಎರಡನೇ ಸ್ಥಾನ ಪಡೆದಿದ್ದ ಡಿಟಿಡಿಸಿ ತಂಡಗಳು ಈ ಬಾರಿಯೂ- ಎಲೆಕ್ಟೋಲಕ್ಸ್‌ ಕೆಲ್ವಿನೇಟರ್‌ ಬಸವನಗುಡಿ ಕಪ್‌ ಪ್ರಶಸ್ತಿಗೆ ತೀವ್ರ ಸ್ಪರ್ಧೆಯಾಡ್ಡಲಿವೆ ಎಂದು ಬಸವನಗುಡಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷ ಬಿ.ಜಿ.ನಾಗರಾಜ್‌ ತಿಳಿಸಿದ್ದಾರೆ.

ಬಸವನಗುಡಿ ಕಪ್‌ ಗಳಿಸುವ ತಂಡ 75 ಸಾವಿರ ರುಪಾಯಿ ನಗದು ಹಾಗೂ ಟ್ರೋಫಿಯನ್ನು ಗೆಲ್ಲಲಿದೆ. ಎರಡನೇ ಸ್ಥಾನ ಪಡೆಯುವ ತಂಡ 35 ಸಾವಿರ ರುಪಾಯಿ ನಗದು ಹಾಗೂ ಟ್ರೋಫಿ ಪಡೆಯಲಿದೆ. ಅಲ್ಲದೆ ಪ್ರತಿ ಪಂದ್ಯದಲ್ಲೂ ಪಂದ್ಯಶ್ರೇಷ್ಠ , ಅತ್ಯುತ್ತಮ ಬ್ಯಾಟ್ಸ್‌ಮನ್‌, ಅತ್ತುತ್ತಮ ಬೌಲರ್‌ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ನಾಗರಾಜು ಹೇಳಿದ್ದಾರೆ.

ಟೂರ್ನಿಯಲ್ಲಿ ಭಾಗವಹಿಸುವ ಪ್ರಮುಖ ತಂಡಗಳು :
ಇಂಡಿಯಾ ಸಿಮೆಂಟ್ಸ್‌ , ಸ್ಪಿಕ್‌ (ಚೆನ್ನೈ), ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌, ಸ್ವಾಂಟನ್ಸ್‌ ಕ್ರಿಕೆಟ್‌ ಕ್ಲಬ್‌ (ಕೇರಳ), ಜಿಂಡಾ ತಾಲಿಸ್ಮಿತ್‌ (ಹೈದರಾಬಾದ್‌), ಮೈಸೂರು ಜಿಮ್ಖಾನ, ಎಸ್‌ಡಿಎನ್‌ ಕ್ರಿಕೆಟ್‌ ಅಕಾಡೆಮಿ (ಧಾರವಾಡ), ಕೆನರಾ ಬ್ಯಾಂಕ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ತಂಡಗಳು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X