ಶೈಕ್ಷಣಿಕ ಪ್ರಸಾರಕ್ಕಾಗಿ ಜ್ಞಾನಭಾರತಿ ಟೀವಿ ಚಾನೆಲ್,80ಎಫ್ಎಂ ಕೇಂದ್ರಗಳು
ಬೆಂಗಳೂರು: ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕಾಗಿಯೇ ಜ್ಞಾನ ಭಾರತಿ ಎಂಬ ಹೊಸ ಚಾನೆಲ್ ಹಾಗೂ, 80 ಎಫ್. ಎಂ. ಬಾನುಲಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ ಜೋಶಿ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಅಲಹಾಬಾದ್ನಲ್ಲಿರುವ ಬಾನುಲಿ ಕೇಂದ್ರಗಳ ಮಾದರಿಯಲ್ಲಿ ಇನ್ನಷ್ಟು ಬಾನುಲಿ ಕೇಂದ್ರಗಳನ್ನು ದೇಶದ ಇತರೆಡೆಗಳಲ್ಲಿಯೂ ತೆರೆಯಲಾಗುವುದು ಎಂದು ಜೋಶಿ ಹೇಳಿದರು. ಅವರು ಸೋಮವಾರ ನಗರದ ಅರಮನೆ ಮೈದಾನದಲ್ಲಿ ರಾಷ್ಟ್ರಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜ್ಞಾನ ಭಾರತಿ ಎಂಬ ಹೊಸ ಟೀವಿ ಚಾನೆಲ್ ಸ್ಥಾಪನೆಗಾಗಿ ಹೊಸ ಟ್ರಾನ್ಸ್ಫಾಂಡರ್ಗಳನ್ನಿು ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗ್ರಾಮೀಣ ಪ್ರದೇಶದ ಜನರಿಗೂ ಶಿಕ್ಷಣವನ್ನು ತಲುಪಿಸಲು ಹಾಗೂ ಪೂರ್ಣ ಪ್ರಮಾಣದ ಸಾಕ್ಷರತೆಯನ್ನು ಪಡೆಯಲು ಈ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಸಚಿವರು ಶೈಕ್ಷಣಿಕ ಚಾನೆಲ್ನ ಭಾರತಿ ಯಾವತ್ತು ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಲಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...