ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮದುವೆಯಾಗಲು ಪುರುಸೊತ್ತೇ ಸಿಗಲಿಲ್ಲ’- ಎಚ್‌. ನರಸಿಂಹಯ್ಯ

By Staff
|
Google Oneindia Kannada News

*ದಿನೇಶ್‌ ಕೆ. ಕಾರ್ಯಪ್ಪ

ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳ ಬದಲಿಗೆ ಮೂವತ್ನಾಲ್ಕರಿಂದ ಮೂವತ್ತೆಂಟು ಗಂಟೆ ಇರುವಂತೆ ಮಾಡಿದರೆ ಒಳ್ಳೆಯದು ! ಟೈಂಪಾಸ್‌ ಹೇಗೆ ಮಾಡುತ್ತೀರಿ ? ಎಂಬ ಪ್ರಶ್ನೆಗೆ ಶಿಕ್ಷಣ ತಜ್ಞ ಡಾ. ಎಚ್‌. ನರಸಿಂಹಯ್ಯ ನೀಡುವ ರೆಡಿಮೇಡ್‌ ಉತ್ತರ ಇದು.

ಸುತ್ತಲೂ ಹನ್ನೊಂದು ಸಮಸ್ಯೆಗಳಿವೆ. ಇವುಗಳ ನಡುವೆ ವಿರಾಮವೆಂಬುದೇ ಇಲ್ಲ. ಹೃದಯ ಬಡಿತದಲ್ಲಿ ಒಂದು ಬೀಟ್‌ನ ನಂತರ ಮತ್ತೊಂದು ಬೀಟ್‌ನ ನಡುವಿನ ಅಂತರವೇ ವಿರಾಮ ಎಂಬಂತೆ ನನಗೂ ಆಗಿದೆ. ಸದಾ ಕೆಲಸದ ಒತ್ತಡ. ನನಗೆ ಕೆಲಸವೇ ಟೈಂಪಾಸ್‌ ಎನ್ನುತ್ತಾರೆ ಎಚ್ಚೆನ್‌.

ನಾನು ಹೋಗದೇ ಇದ್ದರೆ ಲಾಲ್‌ಬಾಗ್‌ ಇರುವುದಿಲ್ಲವೇನೋ ಎಂಬಂತೆ ನಲವತ್ತೆರಡು ವರ್ಷಗಳಿಂದ ಪ್ರತಿದಿನ ಬೆಳಗ್ಗೆ ಲಾಲ್‌ಬಾಗ್‌ಗೆ ವಾಕಿಂಗ್‌ ಹೋಗುತ್ತೇನೆ. ಬೆಳಗ್ಗೆ ಹೊತ್ತು ಅಲ್ಲಿಗೆ ಬರುವ ನಾಯಿಗಳೂ ಇಂಗ್ಲಿಷ್‌ನಲ್ಲಿಯೇ ಸಂಭಾಷಿಸುತ್ತವೆ! ಎಂದು ಕನ್ನಡ ಪ್ರೇಮವನ್ನು ಮೆರೆಯುತ್ತಾರೆ.

ಒಂದು ಕೆಲಸದ ನಂತರ ಮತ್ತೊಂದು ಎಂಬಂತೆ ಕೆಲಸಗಳ ನಡುವೆಯೇ ಕಳೆದುಹೋಗಿದ್ದರಿಂದ ಮದುವೆ ಮರೆತೇ ಹೋಯ್ತು. ವಿವಾಹವಾಗಲು ಪುರುಸೊತ್ತೇ ಸಿಗಲಿಲ್ಲ ! ಮದುವೆಯಾಗಬಾರದು ಎಂಬ ಪೂರ್ವಾಗ್ರಹವೇನೂ ಇರಲಿಲ್ಲ ಎಂದು ತಮ್ಮ ಬ್ರಹ್ಮಚರ್ಯದ ಗುಟ್ಟು ಬಹಿರಂಗಗೊಳಿಸುತ್ತಾರೆ.

ನಾನು ಯಾರನ್ನೇ ಆಗಲಿ ಪ್ರಶ್ನಿಸದೇ ಒಪ್ಪಿಕೊಳ್ಳುವುದಿಲ್ಲ. ನನಗೆ ಭಗವಂತನ ದರ್ಶನ ಆಗಿಲ್ಲ . ದೇವರು ಇಲ್ಲ ಎಂದು ನಾನೇನು ಹೇಳಿಲ್ಲ. ನಿಸರ್ಗ ಶಕ್ತಿಗಿಂತ ದೊಡ್ಡದು ಗೋಚರಿಸಲಿಲ್ಲ. ದೇವರ ಹೆಸರಿನಲ್ಲಿ ನಡೆಯುವ ಆಷಾಢಭೂತಿತನ ಮತ್ತು ಮೂಢನಂಬಿಕೆಗಳನ್ನು ವಿರೋಧಿಸುತ್ತೇನೆ ಎಂದವರು ಈಗಲೂ ಏರಿದ ಧ್ವನಿಯಲ್ಲಿ ಹೇಳುತ್ತಾರೆ.

ಇನ್ನೊಂದು ತಿಂಗಳಿಗೆ ಎಂಬತ್ತೆರಡು ವರ್ಷ ಪ್ರಾಯವಾಗುತ್ತದೆ. ಇಲ್ಲಿಯವರೆಗೆ ಕೆಲಸದ ನಡುವೆ ವಿರಾಮ ದೊರೆತಿಲ್ಲ. ವಯಸ್ಸಾಗಿರುವುದರಿಂದ ಆಯಾಸವಾಗುತ್ತದೆ ಎನ್ನುವ ಎಚ್ಚೆನ್‌ ಬಸವನಗುಡಿಯ ನ್ಯಾಷನಲ್‌ ಕಾಲೇಜು ವಿದ್ಯಾರ್ಥಿ ನಿಲಯದಲ್ಲೇ ನೆಲೆಸಿದ್ದಾರೆ. ರಾಗಿಮುದ್ದೆ ಇವರ ಮೆಚ್ಚಿನ ಖಾದ್ಯ. ಎಷ್ಟೇ ಕೆಲಸಗಳಿದ್ದರೂ ಏನಪ್ಪ ಎಂದು ಪ್ರೀತಿಯಿಂದಲೇ ಮಾತನಾಡಿಸುತ್ತಾರೆ.

(ವಿಜಯ ಕರ್ನಾಟಕ)

Post your views

ವಾರ್ತಾ ಸಂಚಯ
ಹುಟ್ಟೂರು ಹೊಸೂರಿಗೆ ಹೂವು ತಂದ ಎಚ್‌. ನರಸಿಂಹಯ್ಯ
ಡಾ। ಎಚ್‌.ನರಸಿಂಹಯ್ಯ ಅವರಿಗೆ ಗೊರೂರು ಪ್ರಶಸ್ತಿ
ಹಳೆ ಮೈಸೂರಿಗರಿಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಂತಾರೆ ಎಚ್ಚೆನ್‌

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X