ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಟ್ಟಿಯಲ್ಲಿ ಕಸ ಗುಪ್ಪೆಯಾಗಿದೆಯಾ? ತಡವೇಕೆ, ಫೋನ್‌ ಕೈಗೆತ್ತಿಕೊಳ್ಳಿ...

By Staff
|
Google Oneindia Kannada News

ಬೆಂಗಳೂರು : ಬಹು ದಿನಗಳಿಂದ ನಿರೀಕ್ಷಿಸಿದ್ದ ಸ್ವಚ್ಛ ಬೆಂಗಳೂರು ಹೆಲ್ಪ್‌ ಲೈನ್‌ ಈಗ ಸಾರ್ವಜನಿಕರ ಬಳಕೆಗೆ ರೆಡಿಯಾಗಿದೆ. ರಾಜ್ಯ ನಗರಾಭಿವೃದ್ಧಿ ಸಚಿವ ಟಿ. ಜಾನ್‌ ಸೋಮವಾರ ಸ್ವಚ್ಛ ಬೆಂಗಳೂರು ಹೆಲ್ಪ್‌ಲೈನ್‌ನ್ನು ಉದ್ಘಾಟಿಸಿದರು.

ಟೆಲಿಫೋನ್‌ ಸೇವೆಯಲ್ಲಿನ ತೊಂದರೆಯ ಬಗ್ಗೆ ಪ್ರಥಮ ದೂರು ಸಲ್ಲಿಸುವ ಮೂಲಕ ಸಚಿವರು ಹೆಲ್ಪ್‌ಲೈನ್‌ ಉದ್ಘಾಟನೆ ಮಾಡಿದರು. ಸ್ವಚ್ಛ ಬೆಂಗಳೂರು ಹೆಲ್ಪ್‌ಲೈನ್‌ ಯೋಜನೆಯಡಿಯಲ್ಲಿ ನಗರದ ನಾಗರಿಕರು ರಸ್ತೆ ಸ್ವಚ್ಛತೆ, ಕಸದ ತೊಟ್ಟಿ ಖಾಲಿ ಮಾಡುವುದು, ಪ್ರತಿ ಮನೆಯಿಂದ ಕಸ ಸಂಗ್ರಹಿಸುವುದು, ಸಲ್ಲದ ಜಾಗದಲ್ಲಿ ಪೋಸ್ಟರು ಮತ್ತು ಹೋರ್ಡಿಂಗ್‌ಗಳನ್ನು ನಿಲ್ಲಿಸುವುದು, ರಸ್ತೆ ಮೇಲೆ ಸತ್ತ ಪ್ರಾಣಿಗಳ ವಿಲೇವಾರಿಯಂತಹ ತೊಂದರೆಗಳ ಬಗ್ಗೆ ದೂರು ಸಲ್ಲಿಸಬಹುದು.

ಹೆಲ್ಪ್‌ಲೈನ್‌ ಫೋನ್‌ ನಂಬರ್‌ - 98450-24365. ಈ ಯೋಜನೆಯಡಿಯಲ್ಲಿ ದಾಖಲಿಸಿಕೊಳ್ಳಲಾದ ದೂರನ್ನು ಬೆಂಗಳೂರು ಮಹಾನಗರ ಪಾಲಿಕೆ ಪರಿಶೀಲಿಸುತ್ತದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಅಗ್ಗಳಿಕೆ ಬೆಂಗಳೂರು ಕಾರ್ಯನಿರತ ಪಡೆಗೆ ಸಲ್ಲುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X