ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಮರೆತ ಸೋನಿಯಾ, ಅಜ್ಜಿಯ ಓಟ ಹಾಗೂ ‘ಉಡಾ’ವಣೆ

By Staff
|
Google Oneindia Kannada News

ಆಂಧ್ರದ ಅನಂತಪುರದ ಬರಪೀಡಿತರಿಗೆ ಆಹಾರ ಧಾನ್ಯ ಹಂಚಲು ಹೊರಟಿದ್ದ ಸೋನಿಯಾ ಮೇಡಂ ಬೆಂಗಳೂರಿಗೆ ಕಾಲಿಟ್ಟಿದ್ದರು. ಅಬ್ಬ ! ಮೇಡಂಗೆ ಬೆಂಗ್ಳೂರು ಅಂದ್ರೆ ಅದೆಷ್ಟು ಪ್ರೀತಿ ! ಅನಂತಪುರಕ್ಕೆ ಹೈದರಾಬಾದ್‌ ಮೂಲಕ ಹೋಗಬಹುದಿತ್ತು. ಆದರೂ ಬೆಂಗಳೂರಿಗೆ ಬಂದಿದಾರೆ ಅಂದ್ರೆ ಕನ್ನಡಿಗರ ಸೌಭಾಗ್ಯವೇ ಸರಿ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಹೇಳಿದ್ದು ಸತ್ಯ. ಕರ್ನಾಟಕ ಆಕೆಯ ಪ್ರೀತಿಯ ತಾಣ. ಇಲ್ಲಿ ಕಾಲ ಕಳೆಯುವುದೆಂದರೆ ಅವ್ರಿಗೆ ಬಲು ಪ್ರೀತಿ !

ಅದು ಸರಿ. ಅನಂತಪುರಕ್ಕೆ ಹೋದವರು ಪಕ್ಕದ ಬಳ್ಳಾರಿಗೇಕೆ ಹೋಗಲಿಲ್ಲ. ಇದೇ ಮೇಡಂ ಹಿಂದೊಮ್ಮೆ ಅಲ್ಲಿಗೆ ಎಲೆಕ್ಷನ್‌ಗೆ ನಿಂತು ಗೆದ್ದು ರಾಜೀನಾಮೆ ನೀಡಿದ ನೆನಪು ! ಅಷ್ಟೇ ಅಲ್ಲ. ಬಳ್ಳಾರಿಯಲ್ಲಿಯೂ ಬರಗಾಲ. ಅಲ್ಲಿನವರಿಗೂ ನಾಲ್ಕು ಕಾಳು ಕೊಡಬಹುದಿತ್ತಲ್ಲ !

ಹೋಗಲಿ ಬಿಡಿ. ಇಲ್ಲಿ ರಾಜಕೀಯ ಬೇಡ. ಮೊಸರಲ್ಲಿ ಕಲ್ಲು ಹುಡುಕ ಬಾರದು ಎಂದು ಮುಖ್ಯಮಂತ್ರಿಗಳೇ ಹೇಳಿಲ್ಲವೇ ?

ಅಜ್ಜಿಯ ಓಟ
90 ವರ್ಷದ ಮುದುಕಿ ಸತತವಾಗಿ ಎಷ್ಟು ದೂರ ನಡೆಯಬಹುದು, 2 ಕಿ.ಮೀ. , 5 ಕಿ.ಮೀ. ? ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ವಯಸ್ಕರ ಮಾರಥಾನ್‌ ಓಟದಲ್ಲಿ 90ರ ವೃದ್ಧೆಯಾಬ್ಬಳು 42 ಕಿ.ಮೀ. ಓಡಿ ದಾಖಲೆ ಸ್ಥಾಪಿಸಿದ್ದಾಳೆ. ಅದಕ್ಕಾಗಿ ಈಕೆ ತೆಗೆದುಕೊಂಡ ಸಮಯ 11 ಗಂಟೆ 34 ನಿಮಿಷ.

ಅರ್ಧ ದೂರ ಕ್ರಮಿಸುತ್ತಲೇ ಮಂಡಿ ಕೀಲು ಮತ್ತು ಸೊಂಟದಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ಆದರೆ ಓಟ ಪೂರ್ಣಗೊಳಿಸಲೇ ಬೇಕೆಂದು ಧೃಢ ನಿರ್ಧಾರ ಮಾಡಿದ್ದೆ ಎಂದಾಕೆ ಓಟದ ಬಳಿಕ ಉದ್ಗರಿಸಿದಳು. ಇನ್ನೊಂದು 20 ವರ್ಷ ಓಡುತ್ತಲೇ ಇರುತ್ತೇನೆ ಎಂಬ ವಿಶ್ವಾಸ ಆಕೆಗಿದೆಯಂತೆ.

ಉಡಾವಣೆ
ಯಾರನ್ನಾದರೂ ಅತಿಯಾಗಿ ಮುದ್ದಿಸಿದರೆ, ತಲೆ ಮೇಲೆ ಕೂರಿಸಿಕೊಂಡಿದ್ದಾರೆ ಎನ್ನುವುದು ವಾಡಿಕೆ. ನ್ಯೂಯಾರ್ಕ್‌ನ ಕ್ರಿಸ್ತಿನಾ ಹೋಗಾನ್‌ ಅದನ್ನು ಅಕ್ಷರಶಃ ಅನುಸರಿಸಿದ್ದಾಳೆ. ಕ್ರಿಸ್ತಿನಾ ತನ್ನ ಮುದ್ದಿನ ಉಡಗಳನ್ನು ನೆತ್ತಿ ಮೇಲೆ ಕೂರಿಸಿಕೊಂಡು ಗ್ರೀಕ್‌ ಸ್ವಾತಂತ್ರ್ಯೋತ್ಸವ ಪೆರೆಡ್‌ನಲ್ಲಿ ಸಂಭ್ರಮದಿಂದ ಭಾಗವಹಿಸಿದ್ದಳು.
(ವಿಜಯ ಕರ್ನಾಟಕ)

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X