ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಬರೆಯುವ ವಿದ್ಯಾರ್ಥಿಗಳ ಸಲೀಸು ಪ್ರಯಾಣಕ್ಕೆ ವಿಶೇಷ ರೈಲುಗಳ ಓಟ!

By Staff
|
Google Oneindia Kannada News

ಬೆಂಗಳೂರು : ಬಿಸಿಲ ಝಳದಲ್ಲಿ ಸಿಇಟಿ ಬಿಸಿ. ದೂರದೂರಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ನಗರಕ್ಕೆ ಬರುವ ವಿದ್ಯಾರ್ಥಿಗಳ ಓದು- ಬರಹಕ್ಕೆ ಕ್ವಚಿತ್‌ ತೊಂದರೆಯೂ ಆಗಬಾರದೆಂಬುದು ದಕ್ಷಿಣ ರೈಲ್ವೆ ಉಮೇದಿ. ಪ್ರಯಾಣದ ವೇಳೆಯೂ ಆರಾಮಾಗಿ ಓದಿಕೊಂಡು ಬರಲು ಅನುವಾಗುವಂತೆ ಸಿಇಟಿ ಸ್ಪೆಷಲ್‌ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.

ಓಡಲಿರುವ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ನೋಟ್‌ ಮಾಡಿಕೊಳ್ಳಿ...

1. ಬರೌನಿ- ಯಶವಂತಪುರ- ಬರೌನಿ ರೈಲು. ಈ ರೈಲು ಮೇ 5, ಬೆಳಗ್ಗೆ 7.15 ಗಂಟೆಗೆ ಬರೌನಿಯಿಂದ ಹೊರಟು ಮೇ 7ರಂದು ಸಂಜೆ 5.45 ಗಂಟೆಗೆ ಯಶವಂತಪುರ ಸೇರಲಿದೆ. ಇದೇ ರೈಲು ಮೇ 11ರಂದು ಸಂಜೆ 4.15 ಗಂಟೆಗೆ ಯಶವಂತಪುರ ಬಿಟ್ಟು, ಮೇ 14ರಂದು ಬೆಳಗ್ಗೆ 6.05ಕ್ಕೆ ಬರೌನಿ ಮುಟ್ಟಲಿದೆೆ.

2. ಹಜರತ್‌ ನಿಜಾಮುದ್ದೀನ್‌- ಯಶವಂತಪುರ- ಹಜರತ್‌ ನಿಜಾಮುದ್ದೀನ್‌ ವಿಶೇಷ ರೈಲು. ಮೇ 6ರ ಮಧ್ಯಾಹ್ನ 3.30 ಗಂಟೆಗೆ ನಿಜಾಮುದ್ದೀನ್‌ನಿಂದ ಹೊರಡಲಿರುವ ಈ ರೈಲು ಮೇ 6ರ ಬೆಳಗ್ಗೆ 11.30 ಗಂಟೆಗೆ ಯಶವಂತಪುರ ತಲುಪಲಿದೆ. ಮೇ 10ರ ರಾತ್ರಿ 8 ಗಂಟೆಗೆ ಯಶವಂತಪುರ ಬಿಟ್ಟು, ಮೇ 12ರ ರಾತ್ರಿ 7.40ಕ್ಕೆ ನಿಜಾಮುದ್ದೀನ್‌ ಸೇರಲಿದೆ.

3. ಹಜರತ್‌ ನಿಜಾಮುದ್ದೀನ್‌- ಬೆಂಗಳೂರು- ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌. ಮೇ 6ನೇ ತಾರೀಖು ರಾತ್ರಿ 10.30 ಗಂಟೆಗೆ ನಿಜಾಮುದ್ದೀನ್‌ನಿಂದ ಹೊರಡಲಿರುವ ಈ ರೈಲು ಮೇ 8ರಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರು ಬಂದು ಸೇರಲಿದೆ. ಮೇ 10ರ ರಾತ್ರಿ 10.45 ಗಂಟೆಗೆ ಬೆಂಗಳೂರು ಬಿಟ್ಟು, ಮೇ 12ರಂದು ಸಂಜೆ 4.50ಕ್ಕೆ ನಿಜಾಮುದ್ದೀನ್‌ ಮುಟ್ಟಲಿದೆ.

4. ಹೌರಾ- ಬೆಂಗಳೂರು ದಂಡು- ಹೌರಾ ವಿಶೇಷ ರೈಲು ಹೌರಾದಿಂದ ಮೇ 6ನೇ ತಾರೀಖು ರಾತ್ರಿ 9.25ಕ್ಕೆ ಹೊರಟು, ಮೇ 8ರ ಬೆಳಗ್ಗೆ 10.30ಕ್ಕೆ ಬೆಂಗಳೂರು ದಂಡಿಗೆ ಬರಲಿದೆ.

5. ಪಾಟ್ನಾ- ಬೆಂಗಳೂರು ಸಿಟಿ ವಿಶೇಷ ರೈಲು. ಇದು ಪಾಟ್ನಾದಿಂದ ಮೇ 6ರಂದು ಮಧ್ಯಾಹ್ನ 12.30ಕ್ಕೆ ಹೊರಟು, ಮೇ 8ನೇ ತಾರೀಖು ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ಬಂದು ಸೇರಲಿದೆ. ಬೆಂಗಳೂರಿನಿಂದ ಮೇ 11ರಂದು ಬೆಳಗ್ಗೆ 5.45ಕ್ಕೆ ಬಿಟ್ಟು, ಮೇ 13ರ ಬೆಳಗ್ಗೆ 6.15ಕ್ಕೆ ಪಾಟ್ನಾ ತಲುಪಲಿದೆ.

6. ಇದಲ್ಲದೆ ಪಾಟ್ನಾ- ಯಶವಂತಪುರ ವಿಶೇಷ ರೈಲೂ ಉಂಟು. ಮೇ 6ರಂದು ಬೆಳಗ್ಗೆ 10.30ಕ್ಕೆ ಪಾಟ್ನಾದಿಂದ ಹೊರಟು, ಮೇ 8ರಂದು ಮಧ್ಯಾಹ್ನ 12.45ಕ್ಕೆ ಯಶವಂತಪುರಕ್ಕೆ ಬರಲಿದೆ. ಮೇ 11ರ ಮಧ್ಯರಾತ್ರಿ 12.30ಕ್ಕೆ ಯಶವಂತಪುರದಿಂದ ಹೊರಟು, ಮೇ 13ರಂದು ಸಂಜೆ 4.15ಕ್ಕೆ ಪಾಟ್ನಾ ಮುಟ್ಟಲಿದೆ.

7. ಗುವಾಹಟಿ- ಬೆಂಗಳೂರು ವಿಶೇಷ ರೈಲು ಮೇ 5ರಂದು ಮಧ್ಯಾಹ್ನ 1.30 ಗಂಟೆಗೆ ಗುವಾಹಟಿ ಬಿಟ್ಟು , ಬೆಂಗಳೂರಿಗೆ ಮೇ 8ರ ಬೆಳಗಿನ ಜಾವ 3.30ಕ್ಕೆ ತಲುಪಲಿದೆ. ಮೇ 11ರಂದು ರಾತ್ರಿ 1 ಗಂಟೆಗೆ ಬೆಂಗಳೂರಿನಿಂದ ಹೊರಟು, ಮೇ 13ರ ಮಧ್ಯಾಹ್ನ 3 ಗಂಟೆಗೆ ಗುವಾಹಟಿ ಸೇರಲಿದೆ.

8. ರಾಂಚಿ- ಬೆಂಗಳೂರು ವಿಶೇಷ ರೈಲು- ರಾಂಚಿಯಿಂದ ಮೇ 6ನೇ ತಾರೀಖು ರಾತ್ರಿ 12 ಗಂಟೆಗೆ ಹೊರಟು, ಮೇ 8ರಂದು ಬೆಳಗ್ಗೆ 5.45 ಗಂಟೆಗೆ ಬೆಂಗಳೂರು ಸೇರಲಿದೆ. ಮೇ 11ರ ರಾತ್ರಿ 1.30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 7 ಗಂಟೆಗೆ ರಾಂಚಿ ತಲುಪಲಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X