ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿವಿಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಡಿಗ್ರಿ ಬಿಕರಿ!

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪತ್ರಿಕೆಗಳ ಮೌಲ್ಯಮಾಪನವೇ ಆಗದೆ, ಪದವಿ ಕೊಟ್ಟಿರುವ ಪ್ರಕರಣ ವರದಿಯಾಗಿದೆ. ಡಿಗ್ರಿ ಬಿಕರಿಗೆ ಹೆಸರುವಾಸಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಂಗಳೂರು ವಿವಿ ಆವರಣದಲ್ಲಿ ಇದೀಗ ಈ ಪ್ರಕರಣದ್ದೇ ಸದ್ದು. ವಿವಿಯ ನೂತನ ಕುಲಪತಿ ಡಾ।ಎಂ.ಎಸ್‌.ತಿಮ್ಮಯ್ಯ ಅವರಿಗೂ ಇದೊಂದು ಸವಾಲು.

ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ದ್ವಿತೀಯ ಬಿಎ ಪರೀಕ್ಷೆಯ ಸುಮಾರು ಒಂದು ಸಾವಿರ ಉತ್ತರ ಪತ್ರಿಕೆಗಳ ಕಟ್ಟು ಪರೀಕ್ಷಾ ವಿಭಾಗದ ಗಮನಕ್ಕೆ ಬಂದಿದೆ. ಈ ಉತ್ತರ ಪತ್ರಿಕೆಗಳ ಮೌಲ್ಯಮಾಪನವೇ ಆಗದಿರುವುದು ಡಿಗ್ರಿ ಬಿಕರಿಯ ಸಂಗತಿಯನ್ನು ಬಯಲುಮಾಡಿದೆ.

ಕಸದ ಬುಟ್ಟಿಯಲ್ಲಿ ಉತ್ತರ ಪತ್ರಿಕೆ : ದ್ವಿತೀಯ ಬಿಕಾಂ ಪರೀಕ್ಷೆಯ ಮೇನೇಜ್‌ಮೆಂಟ್‌ ವಿಷಯದ ಮೌಲ್ಯ ಮಾಪನವಾಗದ 9 ಉತ್ತರ ಪತ್ರಿಕೆಗಳು ವಿವಿ ಆವರಣದ ಕಸದ ಬುಟ್ಟಿಯಲ್ಲಿ ದೊರೆತಿರುವುದು ಅವ್ಯವಹಾರದ ಪರಾಕಾಷ್ಠೆಗೆ ಹಿಡಿದ ಕನ್ನಡಿ.

ಇದರಲ್ಲಿ ಯಾರ್ಯಾರು ಶಾಮೀಲು?
ದುಡ್ಡು ಕೊಟ್ಟು ಡಿಗ್ರಿ ಖರೀದಿಸಿರುವ ಸಾವಿರಾರು ವಿದ್ಯಾರ್ಥಿಗಳು, ಅವರಿಗೆ ಬೆನ್ನು ತಟ್ಟಿರುವ ಪರೀಕ್ಷಾ ವಿಭಾಗದ ಅಧಿಕಾರಿಗಳು, ಮೌಲ್ಯಮಾಪಕರು ಮೊದಲಾದವರು ಶಾಮೀಲಾಗಿರುವ ಶಂಕೆಯಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತಿಮ್ಮಯ್ಯ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದಿದ್ದಾರೆ.

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಹಾಗೂ ಬೆಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ಡಾ। ಕೆ.ಶ್ರೀನಿವಾಸನ್‌ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆದಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X