ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಏಡ್ಸ್‌ಗೆ 146 ಬಲಿ : ಜನ ಜಾಗೃತಿಗೆ ‘ಶಾಸಕರ ವೇದಿಕೆ’

By Staff
|
Google Oneindia Kannada News

ಬೆಂಗಳೂರು : ಮಾರಣಾಂತಿಕ ಏಡ್ಸ್‌ ರೋಗದ ವಿರುದ್ಧ ಜನ ಜಾಗೃತಿಯನ್ನು ಪರಿಣಾಮಕಾರಿಯಾಗಿ ಮೂಡಿಸಲು ‘ಕರ್ನಾಟಕ ಶಾಸಕರ ವೇದಿಕೆ’ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೇ 3 ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ವೇದಿಕೆಯನ್ನು ಉದ್ಘಾಟಿಸುವರು. ಅನ್‌ಏಡ್ಸ್‌ (UNAIDS)ನ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ವಿಶ್ವಸಂಸ್ಥೆಯ ಸಹಾಯಕ ಕಾರ್ಯದರ್ಶಿ ಡಾ.ಪೀಟರ್‌ ಪೈಲಟ್‌ ಅವರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಎ.ಬಿ.ಮಲಕರೆಡ್ಡಿ ತಿಳಿಸಿದರು.

ಕರ್ನಾಟಕದಲ್ಲಿ 1988 ರಲ್ಲಿ ಮೊದಲ ಏಡ್ಸ್‌ ಪ್ರಕರಣ ದಾಖಲಾಗಿದ್ದು , ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕೇವಲ ಪಟ್ಟಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೋಗ, ಗ್ರಾಮೀಣ ಪ್ರದೇಶಗಳಲ್ಲೂ ಕಾಣಿಸಿಕೊಂಡಿದೆ. ಮಹಿಳೆಯರಲ್ಲೂ ಏಡ್ಸ್‌ ಪ್ರಮಾಣ ಹೆಚ್ಚುತ್ತಿದೆ ಎಂದು ಮಲಕರೆಡ್ಡಿ ವಿಷಾದಿಸಿದರು.

1987 ರಿಂದ 2001 ರ ನಡುವೆ 4.65 ಲಕ್ಷ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದು , 11 ಸಾವಿರದ 583 ಪ್ರಕರಣಗಳಲ್ಲಿ ಧನಾತ್ಮಕ ಚಿಹ್ನೆಗಳು ಕಾಣಿಸಿಕೊಂಡಿದ್ದರೆ, 1442 ಮಂದಿ ಏಡ್ಸ್‌ನಿಂದ ಬಳಲುತ್ತಿರುವುದು ಖಚಿತವಾಗಿದೆ. ಕಳೆದ ಮಾರ್ಚ್‌ನಲ್ಲಿ ಸಾವಪ್ಪಿದ ಮೂವರು ಸೇರಿದಂತೆ ಈವರೆಗೆ 146 ಮಂದಿ ಏಡ್ಸ್‌ನಿಂದ ಮರಣ ಹೊಂದಿದ್ದಾರೆ ಎಂದು ಸಚಿವರು ಹೇಳಿದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X