• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಪರಂಪರಾ ಸ್ಮಾರಕ ರಕ್ಷಣೆಗೆ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚನೆ

By Staff
|

ಬೆಂಗಳೂರು : ಹಂಪೆಯ ವಿಶ್ವ ಪರಂಪರಾ ಸ್ಮಾರಕ ರಕ್ಷಣೆಗೆ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

‘ಹಂಪೆಯ ಶ್ರೀಮಂತ ಪರಂಪರೆಯನ್ನು ರಕ್ಷಣೆಗಾಗಿ ನಿರ್ವಹಣೆಯ ಅಗತ್ಯವಿದೆ . ಅಲ್ಲದೆ ದೇಶೀ ಮತ್ತು ವಿದೇಶೀ ಪ್ರವಾಸಿಗರಿಗೆ ಅನುಕೂಲ ಒದಗಿಸಿಕೊಡುವ ನಿಟ್ಟಿನಲ್ಲಿ ಆ ಪ್ರದೇಶದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪ್ರಾಧಿಕಾರ ರಚನೆಗೆ ನಿರ್ಧರಿಸಲಾಗಿದೆ ’ ಎಂದು ಆದೇಶ ಹೇಳಿದೆ. ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನಬದ್ಧ ಅಂಗೀಕಾರ ಇನ್ನೂ ದೊರೆತಿಲ್ಲವಾದರೂ ಪ್ರಾಧಿಕಾರವು ಸದ್ಯದಲ್ಲಿಯೇ ತನ್ನ ಕಾರ್ಯವನ್ನು ಆರಂಭಿಸಲಿದೆ.

ಸೌಕರ್ಯಗಳನ್ನು ಒದಗಿಸುವ ಜೊತೆ ಜೊತೆಗೆ ಪ್ರವಾಸಿಗರಿಂದ ನಮ್ಮ ಪುರಾತನ ಹಾಗೂ ಸಮೃದ್ಧ ಸ್ಮಾರಕವಾದ ಹಂಪೆಗೆ ಯಾವುದೇ ಹಾನಿಯಾಗದಂತೆ ಕಾಪಾಡಬೇಕಾದ ಅಗತ್ಯವೂ ಇದೆ. ಆದ್ದರಿಂದ ಹಂಪೆಯ ಅಭಿವೃದ್ಧಿ , ಪ್ರಕರಣಗಳು ಹಾಗೂ ನಿರ್ವಹಣಾ ವಿಷಯಗಳ ವಿಲೇವಾರಿಗೆ ಈ ಶಾಸನ ಬದ್ಧ ಪ್ರಾಧಿಕಾರದ ಅಗತ್ಯವಿದೆ.

ಪ್ರಸ್ತುತ ಬಳ್ಳಾರಿ ಜಿಲ್ಲಾಧಿಕಾರಿ, ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಶಿಕ್ಷಣ ತಜ್ಞರೂ ಸೇರಿದಂತೆ ಪ್ರಾಧಿಕಾರವು 20 ಮಂದಿ ಸದಸ್ಯರನ್ನು ಹೊಂದಿದೆ. ರಾಜ್ಯ ಮಟ್ಟದ ಸಲಹಾ ಸಮಿತಿಯಲ್ಲಿ 10 ಮಂದಿ ಸದಸ್ಯರಿದ್ದು ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಎರಡೂ ಸಮಿತಿಗಳಲ್ಲಿ ಸ್ಥಳೀಯ ಶಾಸಕಕರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಸರಕಾರದ ಪರಿಶೀಲನೆಯಲ್ಲಿದೆ.

ಪ್ರಾಧಿಕಾರದ ಮುಖ್ಯ ಜವಾಬ್ದಾರಿಗಳು-

  • ಹಂಪೆಯ ಪ್ರಾಕೃತಿಕ ಸೊಬಗನ್ನು ಉಳಿಸಿಕೊಳ್ಳುವುದು
  • ಸ್ಮಾರಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಮೃದ್ಧತೆಯನ್ನು ಕಾಯ್ದುಕೊಳ್ಳುವುದು.
  • ಈ ಪರಿಸರದಲ್ಲಿ ವಾಣಿಜ್ಯ ಸಂಕೀರ್ಣಗಳು ಅಕ್ರಮವಾಗಿ ತಲೆಯೆತ್ತದಂತೆ ನೋಡಿಕೊಳ್ಳುವುದು
  • ಹಂಪೆಯ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮೌಲ್ಯವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳುವುದು
  • ಸ್ಥಳೀಯರನ್ನು ಹಂಪೆ ಪ್ರದೇಶಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದು
  • ಅಭಿವೃದ್ಧಿ ಕಾರ್ಯಕ್ರಮಗಳ ರೂಪು ರೇಶೆಗಳನ್ನು ಸಿದ್ಧಪಡಿಸುವುದು
  • ಅಭಿವೃದ್ಧಿ ಕಾರ್ಯಗಳಿಗಾಗಿ ಆರ್ಥಿಕ ಸಂಪನ್ಮೂಲ ಹೊಂದಿಸುವುದು
(ಇನ್ಫೋ ವಾರ್ತೆ)

ಹಂಪೆ : ಹತ್ತು ದಿಕ್ಕು ನೂರು ದಿನ
ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more