ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ-ಬೆಂಗಳೂರು ರಾತ್ರಿರೈಲಿಗೆ ಜೂ.1ರಿಂದ ಹವಾ ನಿಯಂತ್ರಣ ಭಾಗ್ಯ

By Staff
|
Google Oneindia Kannada News

ಬೆಂಗಳೂರು : ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸುವ ರಾತ್ರಿ ರೈಲಿಗೀಗ ಹವಾ ನಿಯಂತ್ರಣ ಬೋಗಿಯ ಭಾಗ್ಯ. ಜೂನ್‌ 1 ರಿಂದ ಈ ರೈಲು ಹವಾ ನಿಯಂತ್ರಣ ಬೋಗಿಯನ್ನು ಹೊಂದಲಿದೆ! ದಕ್ಷಿಣ ರೈಲ್ವೆಯ ಮೈಸೂರು ವಲಯದ ರೈಲ್ವೆ ಬಳಕೆದಾರರ ಸಮಿತಿಯ ಸಭೆ ಈ ನಿರ್ಣಯವನ್ನು ಕೈಗೊಂಡಿದೆ.

ಹವಾ ನಿಯಂತ್ರಣ ಕಂಪಾರ್ಟ್‌ಮೆಂಟ್‌ 64 ಸೀಟುಗಳ ಸಾಮರ್ಥ್ಯ ಹೊಂದಿದೆ. ಪ್ರಯಾಣದರವೇನೂ ಹೆಚ್ಚಿಲ್ಲ ; ಪ್ರಥಮ ದರ್ಜೆ ಪ್ರಯಾಣ ದರಕ್ಕಿಂಥ ತುಸು ಕಡಿಮೆಯೇ ಇರುತ್ತದೆ ಎಂದು ಮೈಸೂರು ವಲಯದ ರೈಲ್ವೆ ಬಳಕಂದಾರರ ಸಮಿತಿಯ ಸದಸ್ಯರಾದ ಎಸ್‌.ಚಿನ್ನಪ್ಪ ಮತ್ತು ಎಂ.ಭಾರದ್ವಾಜ್‌ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್‌ನಿಂದ ಶಿವಮೊಗ್ಗ- ಬೆಂಗಳೂರು ರೈಲು ಹವಾ ನಿಯಂತ್ರಣ ವ್ಯವಸ್ಥೆ ಹೊಂದುತ್ತಿರುವುದರಿಂದ, ಮಳೆಗಾಲದ ಆರಂಭದೊಂದಿಗೆ ರೈಲಿನ ಬೋಗಿ ಹವಾ ನಿಯಂತ್ರಣಗೊಳ್ಳುತ್ತಿದೆ ಎಂದಾಯಿತು. ಬೇಸಗೆಯ ಆರಂಭದಲ್ಲೇ ರೈಲು ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದ್ದರೆ ಚೆನ್ನಾಗಿತ್ತು , ಒಂದಷ್ಟು ನಿದ್ರೆಯಿಲ್ಲದ ರಾತ್ರಿಗಳು ತಪ್ಪುತ್ತಿದ್ದವು ಎಂದು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು ಗೊಣಗಬಹುದು. ಆದರೆ ಮಾಡುವುದೇನು? ಮುಂದಿನ ವರ್ಷವೂ ಬೇಸಗೆ ಬರುತ್ತದೆಂದು ಸಮಾಧಾನಿಸಿಕೊಳ್ಳಬೇಕಷ್ಟೇ. ಎಷ್ಟೋ ರೈಲುಗಳಿಗೆ ಈ ಭಾಗ್ಯವೂ ಇಲ್ಲ. ಅವುಗಳೆಲ್ಲ ಏರ್‌ ಕಂಡೀಷನ್‌ ಆಗುವುದು ಯಾವಾಗಲೋ?

ರೈಲ್ವೆ ಬಳಕಾದರರ ಸಮಿತಿಗೆ ಹಗಲು ವೇಳೆ ಮುಂಜಾನೆ 5 ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಓಡುವ ಎಕ್ಸ್‌ಪ್ರೆಸ್‌ ರೈಲಿಗೆ 2 ಹೆಚ್ಚುವರಿ ಕಂಪಾರ್ಟ್‌ಮೆಂಟ್‌ ಜೋಡಿಸಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಧಿಕಾರಿಗಳು ರೈಲು ಬಿಡುತ್ತಿದ್ದಾರೆ ಎನ್ನುವಂತಿಲ್ಲ ; ಪ್ರಯಾಣಿಕರ ಸಂಖ್ಯೆಯೂ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ಆಧುನೀಕರಿಸುವ ನಿರ್ಣಯವನ್ನು ಕೂಡ ಮೈಸೂರು ವಲಯದ ರೈಲ್ವೆ ಬಳಕೆದಾರರ ಸಭೆ ಕೈಗೊಂಡಿದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X