ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಸೋಲಾರ್‌ ಹೀಟರ್‌ಗಳ ಮಾರುಕಟ್ಟೆಗೆ ಖುಲಾಯಿಸಿದ ಲಕ್ಕು!

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ವಿದ್ಯುತ್‌ ದರ ಏರಿಕೆ, ಲೋಡ್‌ ಶೆಡ್ಡಿಂಗ್‌ನ ಹಾವಳಿ- ಬೆಂಗಳೂರಿನಲ್ಲಿ ಸೋಲಾರ್‌ ವಾಟರ್‌ ಹೀಟರ್‌ಗಳಿಗೆ ಬೇಡಿಕೆ ಬರಲು ಇನ್ನೇನು ಬೇಕು?

ಕಳೆದೆರಡು ತಿಂಗಳಲ್ಲಿ ಸೋಲಾರ್‌ ನೀರು ಕಾಯಿಸುವ ಉಪಕರಣಗಳ ಮಾರಾಟದ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಈ ಪ್ರಕ್ರಿಯೆಯ ಹಿಂದೆ ವಿದ್ಯುತ್‌ ಕಡಿತದ ಬಿಸಿಯೇ ಕೆಲಸ ಮಾಡಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಸೋಲಾರ್‌ ವ್ಯವಸ್ಥೆಯ ಬಳಕೆದಾರರ ಸಂಘಟನೆ, ಸೋಲಾರ್‌ ಕ್ಲಬ್‌ನ ಸ್ಥಾಪಧಿಕ ಟಿ. ಅನಂತ್‌ ಕೂಡ ಕಳೆದೆರಡು ತಿಂಗಳಲ್ಲಿ ಸೋಲಾರ್‌ ವಾಟರ್‌ ಹೀಟರ್‌ನ ಮಾರಾಟ ದರದಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು ಖಚಿತಪಡಿಸುತ್ತಾರೆ.

ಬೆಂಗಳೂರಿನಲ್ಲಿ 1 ಲಕ್ಷ ಸೋಲಾರ್‌ ಬಳೆಕದಾರರು

ದಿನೇ ದಿನೇ ವಿದ್ಯುತ್‌ ಗ್ರಾಹಕರಲ್ಲಿ ಸೋಲಾರ್‌ ಬಳಕೆಯ ಬಗೆಗಿನ ಅರಿವು ಒಲವು ಹೆಚ್ಚಾಗುತ್ತಿದೆ. 1984ರಿಂದ 94ರ ಅವಧಿಯಲ್ಲಿ ನಗರದಲ್ಲಿ ಕೇವಲ 2 ಸಾವಿರ ಸೋಲಾರ್‌ ವಾಟರ್‌ ಹೀಟರ್‌ಗಳಿದ್ದವು. ಆದರೆ ನಂತರದ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ 35 ಸಾವಿರಕ್ಕೇರಿದೆ. ಇತ್ತೀಚಿನ ದಿನಗಳ ಲೆಕ್ಕ ನೋಡಿದರೆ, 1ಲಕ್ಷಕ್ಕೂ ಹೆಚ್ಚು ಮಂದಿ ಸೋಲಾರ್‌ ಬಳಕೆದಾರರು ನಗರದಲ್ಲಿದ್ದಾರೆ ಎಂದು ಅನಂತ್‌ ಹೇಳುತ್ತಾರೆ.

ಸುಮಾರು 17 ಲಕ್ಷ ಮಂದಿ ಎಇಎಚ್‌ ವಿದ್ಯುತ್‌ ಬಳಕೆದಾರರ ನಡುವೆ ನೋಡಿದರೆ ಇದು ಸಣ್ಣ ಸಂಖ್ಯೆಯೇ. ವಾಟರ್‌ ಹೀಟರ್‌ ಬಳಕೆದಾರರನ್ನು ಆಕರ್ಷಿಸಿದ್ದು ಕಂಪೆನಿಗಳ ಸಾಲ ಯೋಜನೆಗಳು ಹಾಗೂ ಕೆಪಿಟಿಸಿಎಲ್‌ ಸೋಲಾರ್‌ ವಾಟರ್‌ ಹೀಟರ್‌ ಬಳಕೆದಾರರು ಬಳಸುವ ಪ್ರತಿ ಯೂನಿಟ್‌ ವಿದ್ಯುತ್‌ಗೆ ನೀಡಿರುವ 15 ಪೈಸೆ ರಿಯಾಯಿತಿ. ಇದರಿಂದ ವಿದ್ಯುತ್‌ ಬಳಕೆ ಕಡಿಮೆಯಾಗುವುದಲ್ಲದೆ, ವಿದ್ಯುತ್‌ ಬಿಲ್ಲಿನಲ್ಲಿಯೂ ಹಣದ ಮೊತ್ತ ಚಿಕ್ಕದಾಗಿರುವುದರಿಂದ ಬಳಕೆದಾರರಿಗೆ ಅನುಕೂಲ.

ಬಲ್ಬು ಉರಿಯುವುದು ಭಾರೀ ಲೇಟು
ಆದರೂ ಸೋಲಾರ್‌ ಹೀಟರ್‌ ವ್ಯವಸ್ಥೆಯ ಯಶಸ್ಸು ಸೋಲಾರ್‌ ವಿದ್ಯುತ್‌ ಬಲ್ಬ್‌ಗಳಿಗಿಲ್ಲ. ಅವು ಬೇಗನೇ ಉರಿಯುವುದಿಲ್ಲ ಎಂಬುದು ಬಳಕೆದಾರರ ಆಪಾದನೆ. ಆದರೂ ಸೋಲಾರ್‌ ವ್ಯವಸ್ಥೆಯ ಕ್ರಯ ಕಡಿಮೆಯಾಗುವ ನಿರೀಕ್ಷೆಯೂ ಇದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಕಡಿಮೆ ಬೆಲೆಯ ಸೋಲಾರ್‌ ವ್ಯವಸ್ಥೆಯನ್ನು ತಯಾರು ಮಾಡಿದೆ.

ಆದಾಯ ತೆರಿಗೆ ನೀಡುವವರು ಹೊಸದಾಗಿ ಕಟ್ಟುವ ಪ್ರತಿ ಮನೆಯಲ್ಲಿಯೂ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಅಳವಡಿಕೆಯನ್ನು ಕಡ್ಡಾಯ ಮಾಡಬೇಕು ಎಂದು ಅಖಿಲ ಭಾರತ ಪವರ್‌ ಇಂಜಿನಿಯರ್‌ಗಳ ಮಂಡಳಿಯ ಅಧ್ಯಕ್ಷ ಕೆ.ಸಿ. ನಾಯಕ್‌ವಾಡಿ ಸಲಹೆ ಮಾಡುತ್ತಾರೆ. ಇದರಿಂದ ವಿದ್ಯುತ್ತನ್ನೇ ನಿರ್ಲಕ್ಷಿಸುವಷ್ಟು ಸಹಾಯ ಆಗದೇ ಇದ್ದರೂ ವಿದ್ಯುತ್‌ ಉಳಿತಾಯವಂತೂ ಆಗುತ್ತದೆ.

ಆದರೂ ಸೋಲಾರ್‌ ಅಳವಡಿಕೆಗೆ ಸರಕಾರದ ನೆರವು ಬೇಕೇ ಬೇಕು. ಈ ನಡುವೆ ವಿದ್ಯುತ್‌ ದರ ಹೆಚ್ಚಳವನ್ನು ಪ್ರತಿಭಟಿಸಿ, ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರಕ್ಕೆ ದೂರು ನೀಡಿರುವ ಸಾರ್ವಜನಿಕರ ವೇದಿಕೆ ಸೋಲಾರ್‌ ವಾಟರ್‌ ಹೀಟರ್‌ ಬಳಸುವವರಿಗೆ ಕೆಪಿಟಿಸಿಎಲ್‌ ನೀಡುವ ರಿಬೇಟನ್ನು ಹೆಚ್ಚಿಸಬೇಕು ಎಂದು ಕೇಳಿಕೊಂಡಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X