ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಬರದ ಬೆಂಕಿ, ರಾಜ್‌ ಬರ್ತಡೆಯಲ್ಲಿ ಕೃಷ್ಣ .. ರಾಮ ರಾಮ!

By Staff
|
Google Oneindia Kannada News

ಬೆಂಗಳೂರು : ನಾಡಿನ ಜನತೆ ಬರದ ಬೇಗೆಯಲ್ಲಿ ಬೇಯುತ್ತಿರುವಾಗ, ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವರನಟ ರಾಜ್‌ ಅವರ ವೈಭವದ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದನ್ನು ಮಾಜಿ ಸಚಿವ ಎಚ್‌.ಎನ್‌.ನಂಜೇಗೌಡ ತೀವ್ರವಾಗಿ ಟೀಕಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬರ ಪರಿಸ್ಥಿತಿಯ ಪರಿಹಾರ ಕಾಮಗಾರಿಗಳ ಕುರಿತು ತಾವೇ ಕರೆದ ಪರಿಶೀಲನಾ ಸಭೆಗೆ ಸಮಯದ ಅಭಾವವೊಡ್ಡಿ ಗೈರು ಹಾಜರಾಗುವ ಮುಖ್ಯಮಂತ್ರಿಗಳು, ರಾಜ್‌ ಹುಟ್ಟುಹಬ್ಬದಲ್ಲಿ ಭಾಗವಹಿಸುತ್ತಾರೆ. ಜನರ ನೋವುಗಳಿಗೆ ಕಿವುಡಾಗಿ ಹೊಟ್ಟೆ ತುಂಬಿದ ಜನರ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಭಾಗವಹಿಸುವುದು ಜನ ವಿರೋಧಿ ಕ್ರಮವಾಗಿದೆ ಎಂದು ಸುದ್ದಿ ಹೇಳಿಕೆಯಲ್ಲಿ ನಂಜೇಗೌಡ ತಿಳಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ರಾಜ್ಯದಲ್ಲಿ ತಾಂಡವವಾಡುತ್ತಿರುವಾಗ ಅದ್ದೂರಿ ಕಾರ್ಯಕ್ರಮಗಳ ಆಚರಣೆಯೇ ಸರಿಯಾದುದಲ್ಲ . ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕೃಷ್ಣ ಬಡ ಜನತೆಯನ್ನು ಅಣಕಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಅವರು ಪ್ರಬುದ್ಧತೆಯನ್ನು ಮೆರೆಯದಿರುವುದು ನಾಚಿಕೆಗೇಡಿನ ಹಾಗೂ ದುರಾದೃಷ್ಟದ ಸಂಗತಿ ಎಂದು ಅವರು ಆಕ್ಷೇಪಿಸಿದ್ದಾರೆ.

ಸರಳತೆ ಹಾಗೂ ನಿರಾಡಂಬರದ ಕಾರ್ಯಕ್ರಮಗಳ ಪರಿಪಾಠ ಮುಖ್ಯಮಂತ್ರಿಗಳಿಂದಲೇ ಆರಂಭವಾಗಬೇಕು ಎಂದು ಕರೆ ನೀಡಿರುವ ನಂಜೇಗೌಡ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಅದ್ದೂರಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X