• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳೆಗನ್ನಡ ಜೈನಸಾಹಿತ್ಯದ ಇಂಗ್ಲಿಷ್‌ ಅನುವಾದ ಪ್ರಕಟಣೆಗೆ ಕೃಷ್ಣ ಕಟಾಕ್ಷ

By Staff
|

ಬೆಂಗಳೂರು : ಹಳೆಗನ್ನಡ ಜೈನ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿತ ಗ್ರಂಥಗಳ ಪ್ರಕಟಣೆಗಾಗಿ ಎರಡೂವರೆ ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಘೋಷಿಸಿದ್ದಾರೆ.

ಮಹಾವೀರ ಜಯಂತಿಯ ಅಂಗವಾಗಿ ನಗರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೃಷ್ಣ ಮಾತನಾಡುತ್ತಿದ್ದರು. ಜೈನ ಸಂಘಟನೆಗಳು ಸಲ್ಲಿಸುತ್ತಿರುವ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮುಖ್ಯಮಂತ್ರಿಗಳು, ಗಾಂಧಿ ಹುಟ್ಟಿದ ನಾಡು ಗುಜರಾತ್‌ನಲ್ಲಿ ತಾಂಡವವಾಡುತ್ತಿರುವ ಹಿಂಸೆಯನ್ನು ಹತ್ತಿಕ್ಕಬೇಕಾದರೆ, ಜೈನ ಧರ್ಮದ ಆದರ್ಶವನ್ನು ಪಾಲಿಸುವ ಅಗತ್ಯವಿದೆ. ಮಹಾವೀರರ ಅಹಿಂಸಾ ತತ್ವವನ್ನೇ ಗಾಂಧೀಜಿಯೂ ಅಳವಡಿಸಿಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸಾಹಿತಿ, ಹಂ.ಪ. ನಾಗರಾಜಯ್ಯ ಅವರು ಅನುವಾದಿತ ಕೃತಿಗಳ ಪ್ರಕಟಣೆಗೆ ನೆರವು ಕೋರಿ ಮಾತನಾಡಿದರು. ನಾಗರಾಜಯ್ಯ ಅವರ ಮನವಿಗೆ ಸ್ಪಂದಿಸಿದ ಕೃಷ್ಣ , ಕೃತಿಗಳ ಪ್ರಕಟಣೆಗೆ ನೆರವಾಗುವುದಾಗಿ ಹೇಳಿದರು.

ಈ ನಡುವೆ, ನಗರದ ಪ್ರಮುಖ ರಸ್ತೆಯಾಂದಕ್ಕೆ ಭಗವಾನ್‌ ಮಹಾವೀರರ ಹೆಸರನ್ನು ಇಡುವಂತೆ ಸರಕಾರ ಮಹಾನಗರ ಪಾಲಿಕೆಗೆ ಶಿಫಾರಸು ಮಾಡಿದೆ. ಜೈನ್‌ ಯುವ ಸಂಘಟನೆ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ವಿಷಯ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more