ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಕಡಿತಕ್ಕೆ ಅಂಜದ ಸಖರಾಯ ಪಟ್ಟಣ, ಬೆಳಗಿದ ಸೋಲಾರ್‌ ದೀಪ !

By Staff
|
Google Oneindia Kannada News

ಚಿಕ್ಕಮಗಳೂರು : ಇಲ್ಲಿನ ಸಖರಾಯ ಪಟ್ಟಣ ಬದಲಿ ಇಂಧನ ವ್ಯವಸ್ಥೆಯನ್ನು ಬಳಸುವ ಮೂಲಕ ರಾಜ್ಯದಲ್ಲಿಯೇ ದಾಖಲೆ ಸ್ಥಾಪಿಸಿದೆ.

ಪಟ್ಟಣದ ಗ್ರಾಹಕರು ವಿದ್ಯುತ್‌ ಕಡಿತದಿಂದ ತೀವ್ರ ತೊಂದರೆಗೊಳಗಾಗಿದ್ದರೂ, ಕೆಪಿಟಿಸಿಎಲ್‌ ಕ್ರಮವನ್ನು ಶಪಿಸುತ್ತಿಲ್ಲ. ಬದಲಾಗಿ ಇತರ ಇಂದನ ವ್ಯವಸ್ಥೆಗಳನ್ನು ಆಶ್ರಯಿಸುತ್ತಿದ್ದಾರೆ. ಸೌರ ವಿದ್ಯುತ್‌ ವ್ಯವಸ್ಥೆ ಸಾಕಷ್ಟು ಜನಪ್ರಿಯವಾಗಿದ್ದು, ಸುಮಾರು 1000 ಮನೆಗಳಿರುವ ಸಖರಾಯ ಪಟ್ಟಣದಲ್ಲಿ 135 ಮನೆಗಳು ಸೌರ ವಿದ್ಯುತ್‌ನ್ನು ಅವಲಂಬಿಸಿದೆ. ಇತರರು ಬ್ಯಾಂಕ್‌ ಸಾಲದ ಮುಖಾಂತರ ಅಥವಾ, ಕಂತುಗಳ ಮುಖಾಂತರ ಸೌರ ವಿದ್ಯುತ್‌ ವ್ಯವಸ್ಥೆಯನ್ನ ಉಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಶೆಲ್‌ ಸೋಲಾರ್‌ ಇಂಟರ್‌ ನ್ಯಾಷನಲ್‌ ಸಂಸ್ಥೆ ಸೌರ ಶಕ್ತಿಯನ್ನು ಬಳಸುವಂತೆ ವಿದ್ಯುತ್‌ ಗ್ರಾಹಕರನ್ನು ಒತ್ತಾಯಿಸಿತ್ತು. ಸಂಸ್ಥೆಗೆ ಆರಂಭದಲ್ಲಿ ನಿರಾಶದಾಯಕ ಪ್ರತಿಕ್ರಿಯೆ ಬಂದಿದ್ದರೂ, ನಂತರದ ದಿನಗಳಲ್ಲಿ ಮಧ್ಯಮ ವರ್ಗದ ಜನರೇ ಈ ಬದಲಿ ವ್ಯವಸ್ಥೆಗೆ ಮೊರೆ ಹೋಗಿರುವುದು ಕಂಡು ಬಂದಿದೆ.

ಊರಿನ ಗ್ರಾಮದೇವತೆ ಗುಡಿಗೂ ಸೌರಶಕ್ತಿಯ ದೀಪಗಳನ್ನೇ ಉರಿಸಿರುವ ಗ್ರಾಮಸ್ಥರು, ಸೌರಶಕ್ತಿಯ ಪೂರ್ಣ ಲಾಭ ಪಡೆಯುತ್ತಿದ್ದಾರೆ. ಶೆಲ್‌ ಸೋಲಾರ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಅಧ್ಯಕ್ಷ ಫಿಲಿಫ್‌ ಅವರೂ ಕಳೆದ ವಾರ, ಈ ಗ್ರಾಮಕ್ಕೆ ಭೇಟಿ ನೀಡಿದ್ದು, ಜನರ ಆಸಕ್ತಿಯನ್ನು ಶ್ಲಾಘಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X