ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದಂ’ಪತಿಗೆ ಗಂಡಾಗದು..ಜಪಾನಿಗಳ ಪ್ರಕಾರ ದೇವರಾಣೆಗೂ ಇದು ಸತ್ಯ !!

By Staff
|
Google Oneindia Kannada News

ಧೂಮಪಾನ ಮಾಡಿದರೆ ಏನಾಗುತ್ತದೆ ? ಶ್ವಾಸಕೋಶ ಕ್ಯಾನ್ಸರ್‌ , ಹೃದಯಾಘಾತ ಮತ್ತಿತರ ಮಾರಕ ಕಾಯಿಲೆಗಳು ‘ಹಲೋ’ ಎಂದು ಗೆಳೆತನ ಬಯಸುತ್ತವೆ. ಇವೆಲ್ಲಾ ಹಳೆಯ ಮಾತು. ‘ಸ್ಮೋಕಿಂಗ್‌ ಮಾಡಿದರೆ ಗಂಡು ಮಕ್ಕಳೇ ಹುಟ್ಟುವುದಿಲ್ಲ’ ಎನ್ನುವುದು ಹೊಸ ಸುದ್ದಿ. ಇದು ದೇವರಾಣೆ ಸತ್ಯ ಎಂದು ಜಪಾನ್‌ ವಿಜ್ಞಾನಿಗಳು ಡಂಗುರ ಸಾರಿದ್ದಾರೆ.

ಗಂಡು ಮಗು ಹುಟ್ಟಲು ಅವಶ್ಯವಾದ ‘ವೈ‘ ಕ್ರೋಮೋಸೋಮ್‌ ಧೂಮಪಾನದಿಂದಾಗಿ ನಶಿಸುತ್ತವೆ. ಪತಿ-ಪತ್ನಿ ಇಬ್ಬರೂ ಧೂಮಪ್ರಿಯರಾದರಂತೂ ಗಂಡು ಹುಟ್ಟುವ ಸಾಧ್ಯತೆ ಮತ್ತಷ್ಟು ಕಡಿಮೆ ಎಂಬುದು ವಿಜ್ಞಾನಿಗಳ ವಾದ.

ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದರಿಂದ ಸರಕಾರ ಮುಂದೊಂದು ದಿನ ಬೀಡಿ ಸಿಗರೇಟು ಸೇವನೆ ಕಡ್ಡಾಯಗೊಳಿಸಬಹುದು !

ವೆಜ್‌ ಚಪ್ಪಲಿ !!

ಇನ್ನು ಮುಂದೆ ಶಾಖಾಹಾರಿಗಳು ತಾವು 100 ಪರ್ಸೆಂಟ್‌ ವೆಜಿಟೇರಿಯನ್‌ ಎಂದು ಮಾಂಸಾಹಾರಿಗಳ ಮುಂದೆ ಧೈರ್ಯದಿಂದ ಹೇಳಿಕೊಳ್ಳಬಹುದು. ಅಮೆರಿಕದ ಕಂಪೆನಿಯಾಂದು ವೆಜ್‌ ಶೂ ತಯಾರಿಸಿದೆ. ನೋಟ, ಸ್ಪರ್ಶ, ವರ್ಣ ತಾಳಿಕೆ ಬಾಳಿಕೆಯಲ್ಲಿ ಇದು ಪಕ್ಕಾ ಲೆದರ್‌ ಶೂಗೆ ಸಾಟಿಯೆನ್ನುತ್ತಾರೆ ತಯಾಕರು. ಆದರೆ ಬೆಲೆಯಲ್ಲಿ ಮಾತ್ರ ಲೆದರ್‌ ಶಗಿಂತ ಮುಂದೆ ಇದರ ಬೆಲೆ 75ರಿಂದ 90 ಡಾಲರ್‌ ಅಂದರೆ ಸುಮಾರು 3, 750ರಿಂದ 4,500 ರೂ. !

(ವಿಜಯ ಕರ್ನಾಟಕ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X