ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯ ಕೋವಳ್ಳಿಯಲ್ಲಿ ಯಾದವೀ ಕಲಹ : 10 ಮಂದಿ ಸಜೀವ ದಹನ

By Staff
|
Google Oneindia Kannada News

ಬೆಂಗಳೂರು : ಮೃತ ಹೆಣ್ಣುಮಗಳೊಬ್ಬಳ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಯಾದವೀ ಕಲಹದಲ್ಲಿ 10 ಮಂದಿಯನ್ನು ಸಜೀವವಾಗಿ ಸುಟ್ಟು ಹಾಕಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋವಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಬಾಬು ಬೋಂಸ್ಲೆ ಎನ್ನುವ ವ್ಯಕ್ತಿ , ತನ್ನ ಮಗಳ ಅಂತ್ಯ ಸಂಸ್ಕಾರಕ್ಕೆ ಅಡ್ಡಿಯಾದ ಸಹೋದರ ಈಶ್ವರ ಬೋಂಸ್ಲೆ ವಿರುದ್ಧ ಕ್ರುದ್ಧನಾಗಿ ಈ ನರಮೇಧ ನಡೆಸಿದ್ದಾನೆ. ತನ್ನ ಬೆಂಬಲಿಗರ ಸಹಾಯದಿಂದ ಈಶ್ವರ ಬೋಂಸ್ಲೆ ಅವರ ಕುಟುಂಬದ ಸದಸ್ಯರನ್ನು ಮನೆಯಾಳಗೆ ಕೂಡಿರುವ ಬಾಬು ಬೋಂಸ್ಲೆ , ಮನೆಗೆ ಬೆಂಕಿ ಹಚ್ಚುವ ಮೂಲಕ 10 ಮಂದಿಯ ಸಜೀವ ದಹನಕ್ಕೆ ಕಾರಣನಾಗಿದ್ದಾನೆ. ಬುಧವಾರ ರಾತ್ರಿ ಈ ದುರಂತ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಜೀವ ದಹನಕ್ಕೊಳಗಾದ ದುರ್ದೈವಿಗಳನ್ನು ಈಶ್ವರ ಬೋಂಸ್ಲೆ (48), ಲಕ್ಷ್ಮಿ ಲಿಂಬವ್ವ (42), ಬಸವಪ್ಪ ಈಶ್ವರ ಬೋಂಸ್ಲೆ (16), ದೇವಿಕಾ (22), ಹನುಮಂತ ಈಶ್ವರ ಬೋಂಸ್ಲೆ (12), ಶಿವ ಈಶ್ವರ ಬೋಂಸ್ಲೆ (13), ತೇಜವ್ವ (15), ನಿಂಗಮ್ಮ ಈಶ್ವರ ಬೋಂಸ್ಲೆ (7), ಆದಿ ಈಶ್ವರ ಬೋಂಸ್ಲೆ (8) ಮತ್ತು ಲಕ್ಷ್ಮಿ ಈಶ್ವರ ಬೋಂಸ್ಲೆ (7 ತಿಂಗಳ ಕೂಸು) ಎಂದು ಗುರ್ತಿಸಲಾಗಿದೆ.

ಅನಾರೋಗ್ಯ ಪೀಡಿತಳಾಗಿದ್ದ ಬಾಬು ಬೋಂಸ್ಲೆಯ ಮಗಳು ಕಸ್ತೂರಿ ಮೀರಜ್‌ ಆಸ್ಪತ್ರೆಯಲ್ಲಿ ನಿಧನಳಾದಳು. ಮಗಳ ಅಂತ್ಯಕ್ರಿಯೆಯನ್ನು ತನ್ನ ಜಮೀನಿನಲ್ಲಿ ನಡೆಸಲು ಬಾಬು ಬೋಂಸ್ಲೆ ಪ್ರಯತ್ನಿಸಿದಾಗ, ಈಶ್ವರ ಬೋಂಸ್ಲೆ ಎತ್ತಿದ ತಕರಾರೇ ಆತ ಹಾಗೂ ಆತನ ಕುಟುಂಬದವರ ಜೀವಕ್ಕೆ ಮುಳುವಾಗಿದೆ. ಕಸ್ತೂರಿ ಏಡ್ಸ್‌ ರೋಗದಿಂದ ಸತ್ತಿದ್ದಾಳೆ ಎಂದು ಈಶ್ವರ ಬೋಂಸ್ಲೆ ನಡೆಸಿದ ಅಪ ಪ್ರಚಾರ ಕೂಡ ಬಾಬು ಬೋಂಸ್ಲೆಯ ಸಿಟ್ಟಿಗೆ ಕಾರಣವಾಗಿದೆ.

ರಾತ್ರಿ 7.30 ರ ವೇಳೆಗೆ ಬಾಬು ಬೋಂಸ್ಲೆ ಹಚ್ಚಿದ ಬೆಂಕಿಯಿಂದ ಈಶ್ವರ ಬೋಂಸ್ಲೆಯ ಮನೆ ಹೊತ್ತಿ ಉರಿಯುತ್ತಿದ್ದರೂ ಗ್ರಾಮಸ್ಥರು ನೆರವಿಗೆ ಬಂದಿಲ್ಲ . ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಮಧ್ಯರಾತ್ರಿಯ ಧಾವಿಸುವಾಗ ಮಧ್ಯರಾತ್ರಿಯಾಗಿತ್ತು . ಈ ಘಟನೆಯಿಂದ ಕೋವಳ್ಳಿ ಗ್ರಾಮವಿಡೀ ದಿಗ್ಭ್ರಮೆಯಲ್ಲಿ ಮುಳುಗಿದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X