• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಪಿಟಿಸಿಎಲ್‌ ಮಹಾತ್ಮೆ : ಜನರೇಟರ್‌, ಯುಪಿಎಸ್‌ ತಯಾರಕರಿಗೆ ಸುಗ್ಗಿ !

By Staff
|

*ಇನ್ಫೋ ಇನ್‌ಸೈಟ್‌

KPTCLs summer gift : Buy UPS and generatorsಬೆಂಗಳೂರಿನಲ್ಲೀಗ ಯುಪಿಎಸ್‌ನದ್ದೇ ದರಬಾರು. ಮನೆಯ ಅಗತ್ಯ ಸಾಮಾನುಗಳಾದ ಟೀವಿ ಫೋನುಗಳ ಪಟ್ಟಿಯಲ್ಲಿ ಜನರೇಟರ್‌, ಇನ್‌ವರ್ಟರ್‌...ಯುಪಿಎಸ್‌ಗಳೂ ಸೇರಿಕೊಂಡಿವೆ. ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೊಳ್ಳುವ ಭರಾಟೆ ಮುಂದುವೆರಿದಿದೆ.

ಎಲ್ಲದಕ್ಕೂ ಮೂಲ ಕಾರಣ ಕೆಪಿಟಿಸಿಎಲ್‌ ಮಹಾತ್ಮೆ. ದಿನವೂ ಅರ್ಧ ಗಂಟೆ, ಒಂದು ಗಂಟೆ... ಹೀಗೆ ವಿದ್ಯುತ್‌ ಕಡಿತ ನಡೆಯುತ್ತಿರುವಾಗಲೇ, ವಿದ್ಯುತ್‌ ಕಡಿತ ಪ್ರಮಾಣ ಮತ್ತು ಅವಧಿಯನ್ನು ಹೆಚ್ಚಿಸಬೇಕು ಎಂದು ಕೇಂದ್ರೀಯ ಪ್ರಾಧಿಕಾರ ಸೂಚನೆ ಬೇರೆ ಹೊರಡಿಸಿದೆ. ಮಾಧ್ಯಮಗಳು ವಿದ್ಯುತ್‌ ಕಡಿತದ ಸುದ್ದಿಗಳನ್ನು ಬಿತ್ತರಿಸುತ್ತಿರುವಂತೆಯೇ ಗ್ರಾಹಕರು ಬದಲಿ ವ್ಯವಸ್ಥೆಗಾಗಿ ಓಡಾಡುತ್ತಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಇಲ್ಲದ ಸೆಕೆ ಈ ಬಾರಿ ಬೆಂಗಳೂರಿಗರನ್ನು ಕಾಡುತ್ತಿರುವುದೂ, ಈ ವಿದ್ಯುತ್‌ ಕಡಿತದ ಭೂತವೂ ಬೆನ್ನು ಹತ್ತಿರುವುದರಿಂದ ಗ್ರಾಹಕರನ್ನು ಅಕ್ಷರಶಃ ಕತ್ತಲೆಗೆ ದೂಡಿದಂತಾಗಿದೆ. ಪರಿಣಾಮ, ಬೆಂಗಳೂರು ನಿವಾಸಿಗಳು, ಫ್ಯಾಕ್ಟರಿ ಮಾಲಿಕರು, ಶೋರೂಂ ನಿರ್ವಾಹಕರು... ಜನರೇಟರ್‌ ಅಂಗಡಿಗಳಿಗೆ ದೌಡಾಯಿಸುತ್ತಿದ್ದಾರೆ.

ಜನರೇಟರ್‌, ಯುಪಿಎಸ್‌ ತಯಾರಕರಿಗೆ ಸುಗ್ಗಿಯ ಸಂಭ್ರಮ. ರಾಜಾಜಿ ನಗರದ ಜನರೇಟರ್‌ ಶೋರೂಂನ ಮಾಲಿಕರ ಪ್ರಕಾರ ಬೇಸಗೆಯಲ್ಲಿ ಜನರೇಟರ್‌ ಕೊಳ್ಳಲು ಆಕರ್ಷಕ ಯೋಜನೆಗಳು, ಡಿಸ್ಕೌಂಟ್‌, ರಿಯಾಯಿತಿ ಬಹುಮಾನಗಳಂತಹ ಆಯ್ಕೆಯಿಲ್ಲ. ನಗರ ಪ್ರದೇಶದಲ್ಲಿ ಹೆಚ್ಚಿನವರು ಯುಪಿಎಸ್‌ ಕೊಳ್ಳುತ್ತಾರೆ. ಅದು ಹೆಚ್ಚಿನವರ ಬಜೆಟ್‌ಗೆ ಹೊಂದಿಕೆಯಾಗುತ್ತದೆ.

ಸೀಮೆಎಣ್ಣೆ ಮತ್ತು ಡೀಸೆಲ್‌ನಿಂದ ಓಡುವ ಜನರೇಟರ್‌ಗಳೂ ಜನಪ್ರಿಯ.

ವಿದ್ಯುತ್‌ ಇಲ್ಲವೆಂದು ಜನರೇಟರ್‌ ಕೊಳ್ಳುವುದು ಪರಿಸರದ ದೃಷ್ಟಿಯಿಂದ ತರವಲ್ಲ. ಶಬ್ದಮಾಲಿನ್ಯದ ಕಿರಿಕಿರಿಯಾಂದಿಗೆ ಸಾಲುಮಾಲಿನ್ಯಗಳು ಜನರೇಟರ್‌ ಹಿಂದಿದೆ. ಕ್ಷಣದ ಬದುಕಿಗೆ ಅಂಟಿಕೊಂಡಿರುವ ನಗರ ಜೀವನದಲ್ಲಿ ಅದನ್ನೆಲ್ಲಾ ಯೋಚಿಸಲು ಯಾರಿಗೂ ಪುರುಸೊತ್ತಿಲ್ಲ. ಪುರುಸೊತ್ತು ಮಾಡಿಕೊಳ್ಳಬೇಕಾದ ಸರಕಾರಕ್ಕೂ ಈ ವಿಷಯ ಗಮನಕ್ಕೆ ಬಂದ ಹಾಗಿಲ್ಲ. ಜನರೇಟರ್‌ಗಳ ಸಂಖ್ಯೆ ಮಿತಿ ಮೀರದಂತೆ ನೋಡಿಕೊಳ್ಳಲು ಏಜೆನ್ಸಿಗಳನ್ನು ನೇಮಕ ಮಾಡಿದರೆ ವಾಯು ಮಾಲಿನ್ಯವನ್ನು ಹತೋಟಿಗೆ ತರಬಹುದು.

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more