ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗೆಲುವು ನನಗೆ ಬರ್ತ್‌ಡೇ ಗಿಫ್ಟ್‌ - ಸಚಿನ್‌ ತೆಂಡುಲ್ಕರ್‌

By Staff
|
Google Oneindia Kannada News

ಪೋರ್ಟ್‌ ಆಫ್‌ ಸ್ಪೇನ್‌: ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ಮಂಗಳವಾರ ಮುಕ್ತಾಯಗೊಂಡ ವಿಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಸಾಧಿಸಿದ ಜಯ, ತಮ್ಮ ಹುಟ್ಟುಹಬ್ಬಕ್ಕೆ ಸಂದ ಮರೆಯಲಾಗದ ಗಿಫ್ಟ್‌ ಎಂದು ಸಚಿನ್‌ ತೆಂಡೂಲ್ಕರ್‌ ಬಣ್ಣಿಸಿದ್ದಾರೆ.

ಏಪ್ರಿಲ್‌ 24 ರ ಬುಧವಾರ 29 ನೇ ಹುಟ್ಟುಹಬ್ಬ ಆಚರಿಸಿದ ತೆಂಡೂಲ್ಕರ್‌- ವಿಂಡೀಸ್‌ ವಿರುದ್ಧದ ಗೆಲುವಿನ ಟೆಸ್ಟ್‌ನಲ್ಲಿ ತಮ್ಮ 29 ನೇ ಟೆಸ್ಟ್‌ ಶತಕ ಪೂರೈಸಿ ಬ್ರಾಡ್‌ಮನ್‌ ದಾಖಲೆಯನ್ನು ಸರಿಗಟ್ಟಿದ್ದರು. ನನಗೀಗ ತುಂಬಾ ಖುಷಿಯಾಗಿದೆ. ಬರ್ತಡೇ ಆಚರಣೆಗೆ ರಂಗು ಬಂದಿದೆ ಎಂದು ಸಚಿನ್‌ ತಮ್ಮ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.

ಮೊದಲ ಇನಿಂಗ್ಸ್‌ನಲ್ಲಿ ಸಚಿನ್‌ ಸಂಪಾದಿಸಿದ್ದ 117 ರನ್‌ಗಳ ಆಟ ಅತ್ಯಮೂಲ್ಯವಾದುದು ಎಂದು ತಂಡದ ಕೋಚ್‌ ಜಾನ್‌ ರೈಟ್‌ ಹಾಗೂ ನಾಯಕ ಸೌರವ್‌ ಗಂಗೂಲಿ ಮನತುಂಬಿ ಹೊಗಳಿದ್ದಾರೆ. ತೆಂಡೂಲ್ಕರ್‌ ಅವರ ಶತಕದಿಂದಾಗಿ ಪಂದ್ಯದ ಪ್ರಾರಂಭದಲ್ಲಿಯೇ ನಾವು ಮುನ್ನಡೆ ಸಾಧಿಸಲು ಸಾಧ್ಯವಾಯಿತು ಎನ್ನುತ್ತಾರೆ ರೈಟ್‌.

ರೈಟ್‌ ಹಾಗೂ ಗಂಗೂಲಿ ಪ್ರತಿಕ್ರಿಯೆಗೆ ತೆಂಡೂಲ್ಕರ್‌ ಅವರದು ವಿನಯದ ಉತ್ತರ. ಇಡೀ ತಂಡ ಚೆನ್ನಾಗಿ ಆಡಿದ್ದರಿಂದಲೇ ಗೆಲುವುದು ಸಾಧ್ಯವಾಯಿತು. ಯಾರೊಬ್ಬರೂ ದೊಡ್ಡ ಶತಕವನ್ನಾಗಲೀ ಅಥವಾ 5 ವಿಕೆಟನ್ನಾಗಲೀ ಗಳಿಸಲಿಲ್ಲ . ಆದರೂ ಗೆಲುವು ಸಾಧ್ಯವಾಯಿತು. ಇದಕ್ಕೆ ತಂಡಸ್ಫೂರ್ತಿಯೇ ಕಾರಣ ಎಂದು ಹುಟ್ಟುಹಬ್ಬದ ಪುಳಕದಲ್ಲಿರುವ ತೆಂಡೂಲ್ಕರ್‌ ಹೇಳುತ್ತಾರೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X