ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ ರಂಗಭೂಮಿಯನ್ನೂ ಬಿಡದೆ ಕಾಡುತ್ತಿರುವ ಜಾತೀಯತೆಯ ಭೂತ !

By Staff
|
Google Oneindia Kannada News

ನಮ್ಮ ಜಾತಿಯವರು ಅಥವಾ ಜನಾಂಗದವರು ಎಂಬ ಮೋಹದ ಬಗ್ಗೆ ಮಾನವತಾವಾದಿಗಳು ಸಾಕಷ್ಟು ಮಾತುಗಳನ್ನಾಡಿದ್ದರೂ, ಈ ಮೋಹ ಆಧುನಿಕ ಜಗತ್ತಿನಿಂದಲೂ ಅಳಿದುಹೋಗಿಲ್ಲ. ವಿದ್ಯಾವಂತರಿಗೇ ಜಾತಿಯ ಬಗ್ಗೆ ಕಾಳಜಿ ಹೆಚ್ಚಾಗಿರುವುದು ಎಂದು ಪ್ರಸ್ತುತ ನಡೆಯುತ್ತಿರುವ ಘಟನೆಗಳು ಮತ್ತು ಸಮೀಕ್ಷೆಗಳು ಹೇಳುತ್ತವೆ. ವಿದ್ಯಾವಂತರೆಲ್ಲಾ ಪ್ರಜ್ಞಾವಂತರಲ್ಲ ಎಂಬುದಷ್ಟೇ ಇದರ ಹಿಂದಿನ ತಾತ್ಪರ್ಯ. ಈ ಜಾತಿ ಜನಾಂಗದ ಕಾಟ ಸಾಂಪ್ರದಾಯಿಕ ದೇಶವೆನಿಸಿಕೊಂಡಿರುವ ಇಂಗ್ಲೆಂಡ್‌ಗೂ ತಪ್ಪಿಲ್ಲ.

ಬ್ರಿಟಿಷ್‌ ಪೊಲೀಸ್‌ ಇಲಾಖೆಯಲ್ಲಿ ಬರೀ ಜನಾಂಗೀಯ ಪೂರ್ವಾಗ್ರಹಗಳೇ ಕೆಲಸ ಮಾಡುತ್ತಿವೆ ಎಂಬ ಹುಯಿಲು ಇತ್ತೀಚೆಗಷ್ಟೇ ಕೇಳಿಬಂದಿತ್ತು. ಈ ಕಾವು ತಣ್ಣಗಾಗುತ್ತಲೇ ಸಮೀಕ್ಷೆಯಾಂದು ಬ್ರಿಟನ್‌ನ ರಂಗಭೂಮಿಯಲ್ಲಿಯೂ ಜನಾಂಗೀಯವಾದಗಳೇ ತುಂಬಿಕೊಂಡಿವೆ ಎಂದು ಆಪಾದಿಸಿದೆ.

ಇಂಗ್ಲೆಂಡ್‌ನ ಆರ್ಟ್‌ ಕೌನ್ಸಿಲ್‌ ಮತ್ತು ರಂಗಭೂಮಿ ನಿರ್ವಹಣಾ ಸಂಘಟನೆಯ ಎಕ್ಲಿಪ್ಸ್‌ ರಿಪೋರ್ಟ್‌ ಪ್ರಕಾರ ಬ್ರಿಟನ್‌ ರಂಗಭೂಮಿಗೇ ಜನಾಂಗೀಯವಾದದ ಆಪಾದನೆ.

21ನೇ ಶತಮಾನದ ಇಂಗ್ಲೆಂಡ್‌ನ ವೈವಿಧ್ಯಪೂರ್ಣ ಸಮಾಜವನ್ನು ರಂಗಭೂಮಿಯ ಕಲಾ ಪ್ರಕಾರಗಳಲ್ಲಿ ಬಿಂಬಿಸುವಂತೆ ಮಾಡುವುದು ಮತ್ತು ಅಲ್ಲಿರುವ ಸಾಂಪ್ರದಾಯಿಕ ಮನೋಭಾವಗಳಲ್ಲಿ ಬದಲಾವಣೆ ತರುವುದು ಈ ಸಮೀಕ್ಷೆಯ ಉದ್ದೇಶ ಎಂದು ಆರ್ಟ್‌ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಾಹಕ ಪೀಟರ್‌ ಹೆವಿಟ್‌ ಹೇಳುತ್ತಾರೆ. ಜಾಗತಿಕ ಸಂಸ್ಕೃತಿಗಳನ್ನು ಮನಃಪೂರ್ವಕ ಸ್ವೀಕರಿಸುವ ಕಾರ್ಯಗಳು ಇಲ್ಲಿ ಎಂದೂ ನಡೆದೇ ಇಲ್ಲ ಎನ್ನುವುದು ಪೀಟರ್‌ ವಾದ.

ಜನಾಂಗೀಯವಾದದ ಬಗ್ಗೆ ಚೆನ್ನಾಗಿ ತಿಳಿದಿರುವವರೂ ಬದಲಾವಣೆಯ ಕಡೆಗೆ ಸಂಶಯ ದೃಷ್ಟಿ ಬೀರುತ್ತಾರೆ. ಸಾಂಸ್ಕೃತಿಕ ವೈವಿಧ್ಯವನ್ನು ಬಿತ್ತರಿಸಲು ದುಡಿದಿರುವ ಸಂಸ್ಥೆಯೆಂದರೆ ಉತ್ತರ ಲಂಡನ್‌ನ ಟ್ರೆೃಸಿಕಲ್‌ ಥಿಯೇಟರ್‌. ಇದರ ನಿರ್ದೇಶಕ ನಿಕೋಲಸ್‌ ಕೆಂಟ್‌ ಹೇಳುವುದು- ಇಲ್ಲಿ ಕೈಗಾರಿಕೆಗೆ ಸಂಬಂಧಿಸಿ ತುಂಬಾ ಜನಾಂಗೀಯವಾದವಿದೆ. ಜನರು ಈ ಬಗ್ಗೆ ವಿಶಾಲವಾಗಿ ಯೋಚಿಸಬೇಕು. ಜನಾಂಗೀಯವಾದ ಇಲ್ಲಿ ಪೂರ್ವಾಗ್ರಹದಿಂದ ಹುಟ್ಟಿದ್ದಲ್ಲ. ಬದಲಾಗಿ ಹೊಸ ಹಾಗೂ ಪ್ರಸ್ತುತ ವಿಷಯಗಳನ್ನು ಸ್ವೀಕರಿಸುವ ಸಾಮರ್ಥ್ಯ ಕಡಿಮೆ ಇರುವುದರಿಂದ ಹೀಗಾಗಿದೆ. ಈ ಗುಂಗಿನಿಂದ ಹೊರಬರಲು ಜನರು ಪ್ರಯತ್ನಗಳನ್ನು ಮಾಡಿಲ್ಲವೆಂದಲ್ಲ. ಆದರೆ ಇನ್ನಷ್ಟು ಸಮಯ ಬೇಕಾಗುತ್ತದೆ.

ಕಪ್ಪು ವರ್ಣದವರು ಹಾಗೂ ಏಷ್ಯಾದ ರಂಗಭೂಮಿ ನಟರು ರಂಗಭೂಮಿಯಲ್ಲಿ ಅದರಲ್ಲಿಯೂ ಟೀವಿ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ತೀರಾ ಕಷ್ಟವೆಂದು ದೂರುತ್ತಾರೆ ಎಂದು ಜನಾಂಗೀಯವಾದದ ಬಗ್ಗೆ ರಂಗಭೂಮಿ ನಟರ ಸಂಘಟನೆಯ ಬಾತ್ಮೀದಾರ ಮಾರ್ಟಿನ್‌ ಬ್ರೌನ್‌ ಬೇಜಾರು ಮಾಡಿಕೊಳ್ಳುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X