ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಐಎಸ್‌ಎಫ್‌ ಸುಪರ್ದಿಗೆ ಉಗ್ರರ ದಾಳಿ ಭೀತಿಯ ತಾಜ್‌ಮಹಲ್‌ ರಕ್ಷಣೆ

By Staff
|
Google Oneindia Kannada News

Taj Mahalನವದೆಹಲಿ : ವಿಶ್ವ ಪ್ರಸಿದ್ಧ ಶಿಲ್ಪಕಾವ್ಯ ತಾಜ್‌ಮಹಲ್‌ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆಯಿದೆಯೆನ್ನುವ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಮೇ 1 ರಿಂದ ತಾಜ್‌ಮಹಲ್‌ ರಕ್ಷಣೆಯನ್ನು ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ(ಸಿಐಎಸ್‌ಎಫ್‌)ಗಳ ಸುಪರ್ದಿಗೆ ಒಪ್ಪಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸುಪ್ರಿಂಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಎಂ.ಬಿ.ಷಾ ಹಾಗೂ ನ್ಯಾಯಮೂರ್ತಿ ಎಚ್‌.ಕೆ.ಸೀಮಾ ಅವರಿದ್ದ ಜಂಟಿ ನ್ಯಾಯಪೀಠ ಮಂಗಳವಾರ ಈ ಮಹತ್ವದ ನಿರ್ದೇಶನ ನೀಡಿದೆ. 17 ನೇ ಶತಮಾನದ ಮೊಗಲ್‌ ಚಕ್ರವರ್ತಿ ಷಹಜಹಾನ್‌ ತನ್ನ ಮುದ್ದಿನ ರಾಣಿ ಮುಮ್ತಾಜ್‌ ಮಹಲ್‌ ನೆನಪಿಗೆ ನಿರ್ಮಿಸಿದ್ದ ಈ ವಾಸ್ತುಶಿಲ್ಪವನ್ನು ಭಯೋತ್ಪಾದಕರು ಘಾಸಿಗೊಳಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

ತಾಜ್‌ ಮಹಲ್‌ ರಕ್ಷಣೆಯನ್ನು ಸಿಐಎಸ್‌ಎಫ್‌ ವಹಿಸಿಕೊಳ್ಳುವುದಾದಲ್ಲಿ ಸ್ಥಳೀಯ ಪೊಲೀಸರಿಗೆ ಯಾವುದೇ ಆಕ್ಷೇಪಣೆಯಿಲ್ಲ ಎಂದು ಉತ್ತರಪ್ರದೇಶದ ಸಲಹೆಗಾರ ಅಜಯ್‌ ಅಗರ್‌ವಾಲ್‌ ತಿಳಿಸಿದ್ದಾರೆ. ರಾತ್ರಿ ವೇಳೆ ತಾಜ್‌ಮಹಲ್‌ ವೀಕ್ಷಣೆಗೆ ಅವಕಾಶ ಕಲ್ಪಿಸುವ ನಿರ್ಧಾರ ಕೂಡ ಸಿಐಎಸ್‌ಎಫ್‌ಗೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X