• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಲಿತ ಯುವತಿ ಮೇಲೆ ಮೇಲ್ಜಾತಿ ಯುವಕರಿಂದ 3 ದಿನಗಳ ಕಾಲ ಅತ್ಯಾಚಾರ!

By Staff
|

ಜೈಪುರ : ಗುದಾವಾಸ್‌ ಎಂಬೊಂದು ಹಳ್ಳಿ. ಏಪ್ರಿಲ್‌ 15ರಂದು ಮನೆಯಿಂದ ಹೊರಗೆ ಬಂದ ದಲಿತ ಯುವತಿಯಾಬ್ಬಳನ್ನು ನಾಲ್ವರು ಬ್ರಾಹ್ಮಣ ಯುವಕರು ಅಪಹರಿಸಿ, ಮೂರು ದಿನಗಳ ಕಾಲ ಬಲಾತ್ಕಾರ ಮಾಡಿದ್ದಾರೆ. ಕೊನೆಗೆ ಊರಾಚೆ ಆಕೆಯನ್ನು ಬಿಸುಟಿದ್ದಾರೆ. ಠಾಣೆಯಲ್ಲಿ ದಾಖಲಾಗಿರುವ ದೂರಿದು.

ದೇಶದಲ್ಲೇ ಅಪರಾಧಗಳಲ್ಲಿ ನಂಬರ್‌ ಒನ್‌ ಎನಿಸಿರುವ ರಾಜಾಸ್ಥಾನ ಈ ಹಿಂದೆ ಇಂಥಾ ಅನೇಕ ಘಟನೆಗಳನ್ನು ಕಂಡಿದೆ. ಆದರೆ ತೀರಾ ಇತ್ತೀಚೆಗೆ ಈ ಪ್ರಕಾರದ ಅವಘಡ ನಡೆದಿರಲಿಲ್ಲ. ಈ ಘಟನೆ ಪೊಲೀಸರ ಗಮನಕ್ಕೆ ಬರುವುದು ತೀರಾ ತಡವಾಗಿರುವುದು ದುರಂತ. ಸ್ಟಾರ್‌ ಟಿವಿ ಈ ವರದಿಯನ್ನು ಪ್ರಕಟಿಸಿದೆ.

ನನ್ನನ್ನು ಬಲವಂತವಾಗಿ ಹೊತ್ತೊಯ್ದರು. ಚಾಕು ತೋರಿಸಿ, ಹೆದರಿಸಿ ಮೂರು ದಿನಗಳ ಅವಧಿಯಲ್ಲಿ ಸಾಕಷ್ಟು ಬಾರಿ ಅತ್ಯಾಚಾರ ಮಾಡಿದರು. ಬೇಡ ಬೇಡವೆಂದರೂ ಗೋಳು ಹೊಯ್ದುಕೊಂಡರು. ಕಿರುಚಿಕೊಂಡರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದರು ಎಂದು ಬಲಾತ್ಕಾರಕ್ಕೆ ಈಡಾದ ಹುಡುಗಿ ಗೋಳಿಡುತ್ತಾಳೆ.

ಗುದಾವಾಸ್‌ನಲ್ಲಿನ ಮೇಲ್ಜಾತಿಯವರು ಈ ಬಗ್ಗೆ ಪೊಲೀಸರಿಗೆ ದೂರು ಕೊಡಕೂಡದೆಂದು ಬಲಾತ್ಕಾರಕ್ಕೆ ಒಳಪಟ್ಟ ಯುವತಿಯ ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ. ಹಾಗೇನಾದರೂ ಮಾಡಿದಲ್ಲಿ, ಗಡಿಪಾರು ಮಾಡುವುದಾಗಿ ಹೆದರಿಸಿದ್ದಾರೆ. ಅಷ್ಟೇ ಅಲ್ಲದೆ, ಹಸುಗಳಿಗೆ ಕುಡಿಯಲು ಕೆರೆಯ ನೀರನ್ನು ಕೊಡುವುದಿಲ್ಲ ಎಂದಿದ್ದಾರೆ.

ಕೆಲವು ಮಹಿಳಾ ಸಂಘಟನೆಗಳು ಪೊಲೀಸರಿಗೆ ಈ ವಿಷಯವನ್ನು ಮುಟ್ಟಿಸಿವೆ. ಆದರೆ ನೊಂದ ದಲಿತ ಕುಟುಂಬದವರು ಈವರೆಗೆ ಪೊಲೀಸರಿಗೆ ದೂರು ಕೊಟ್ಟಿಲ್ಲ. ಕೊಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟೀತೆಂಬ ಭಯ. ಈಗ ಪ್ರಕರಣದ ದೂರು ಪಟ್ಟಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಯಾರೂ ತುಟಿ ಬಿಚ್ಚದಿರುವುದರಿಂದ ವಿಚಾರಣೆ ಕಷ್ಟವಾಗುತ್ತಿದೆ. ಬಲಾತ್ಕಾರ ನಡೆದು ವಾರ ಕಳೆದಿರುವುದರಿಂದ ಹುಡುಗಿಯ ವೈದ್ಯಕೀಯ ತಪಾಸಣೆ ಮೂಲಕವೂ ಬಲಾತ್ಕಾರದ ಪತ್ತೆ ಸುಲಭವಲ್ಲ ಎನ್ನುತ್ತಾರೆ ಪೊಲೀಸರು.

ಬಲಾತ್ಕಾರವಾದ ಹುಡುಗಿಗೆ ಕಳೆದ ತಿಂಗಳು ಮದುವೆ ನಿಶ್ಚಯವಾಗಿತ್ತು. ಆದರೀಗ, ಅದು ಮುರಿದು ಬಿದ್ದಿರುವುದು ಗಾಯದ ಮೇಲೆ ಎಳೆದಿರುವ ದೊಡ್ಡ ಬರೆ!

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more