• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸವ ಕಲ್ಯಾಣದಲ್ಲಿ ವಿಶ್ವ ಶಾಂತಿ ಸ್ಥಾಪನೆಗೆ ಮೇ 1ರಿಂದ ‘ಕಲ್ಯಾಣ ಪರ್ವ’

By Staff
|

ಬೆಂಗಳೂರು : ವಿಶ್ವ ಶಾಂತಿ ಸ್ಥಾಪನೆಗಾಗಿ ಮೇ 1ರಿಂದ 3ನೇ ತಾರೀಖಿನವರೆಗೆ ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ ಎಂಬ ಬೃಹತ್‌ ಸಮಾವೇಶ ನಡೆಯಲಿದ್ದು, ಬೆಲ್ಜಿಯಂ ಬರಹಗಾರ ಜೇನ್‌ ಲೆಷರ್ಟ್‌ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಾಜ್ಯದ ಹಾಗೂ ಹೊರನಾಡಿನ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿರುವ ಈ ಸಮಾವೇಶಕ್ಕೆ 30 ಲಕ್ಷ ರುಪಾಯಿ ವೆಚ್ಚದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದರು.

ಬಸವ ಜ್ಯೋತಿ, ಅಕ್ಕಮಹಾದೇವಿ ಜ್ಯೋತಿ, ಚನ್ನಬಸವ ಜ್ಯೋತಿ, ಅಲ್ಲಮಪ್ರಭು ಜ್ಯೋತಿ, ಸಿದ್ಧರಾಮೇಶ್ವರ ಜ್ಯೋತಿ ಹಾಗೂ ಹರಳಯ್ಯ ಜ್ಯೋತಿಗಳು ಫೆಬ್ರವರಿ 8ರಿಂದ ಪ್ರವಾಸ ಹೊರಟಿದ್ದು, ಮೇ 1ರಂದು ಬಸವ ಕಲ್ಯಾಣದಲ್ಲಿ ಬಂದು ಸೇರಲಿವೆ. ಈ ಆರೂ ಜ್ಯೋತಿಗಳಿಂದ ಕಲ್ಯಾಣ ಜ್ಯೋತಿ ಬೆಳಗಿಸಲಾಗುವುದು. ಇದೇ ಸಂದರ್ಭದಲ್ಲಿ ‘ವಿಶ್ವ ಗುರು ಬಸವಣ್ಣ’ ಹಾಗೂ ‘ಸಿದ್ಧರಾಮೇಶ್ವರರ ತ್ರಿವಿಧಿ’ ಕೃತಿಗಳು ಬಿಡುಗಡೆಯಾಗಲಿವೆ ಎಂದು ಹೇಳಿದರು.

ಮೇ 1ರಂದು ರಾಷ್ಟ್ರೀಯ ಭಾವೈಕ್ಯತಾ ಗೋಷ್ಠಿಯ ಮೂಲಕ ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಿಸಲಾಗುವುದು. ಶಾಂತಿಗಾಗಿ ಸಾಮೂಹಿಕ ಲಿಂಗಾರ್ಚನೆ ನಡೆಸಲಾಗುವುದು ಎಂದು ಮಾತೆ ಮಹಾದೇವಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more