For Daily Alerts
ಬೆಂಗಳೂರಿನ 100 ಎಕರೆ ಜಾಗದಲ್ಲಿ ತಲೆಯೆತ್ತಲಿದೆ ಇನ್ಫೋಸಿಸ್ ಕ್ಯಾಂಪಸ್
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕಂಪನಿಗಳ ದಿಗ್ಗಜ ಇನ್ಫೋಸಿಸ್, ನಗರದ ಸಮೀಪ ಹೊಸ ಕ್ಯಾಂಪಸ್ ಸ್ಧಾಪಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
100 ಎಕರೆ ಪ್ರದೇಶದಲ್ಲಿ ಹೊಸ ಕ್ಯಾಂಪಸ್ ತಲೆಯೆತ್ತಲಿದೆ ಎಂದು ತಿಳಿಸಿದ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ನಂದನ್ ನೀಲೇಕಣಿ, ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದರು.
ಇನ್ಫೋಸಿಸ್ ಸದ್ಯದಲ್ಲೇ ಬೇರೆ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದೂ ನೀಲೇಕಣಿ ಹೇಳಿದರು.
ಯೂರೋಪ್, ಅಮೆರಿಕಾದಲ್ಲಿನ ಕೆಲವು ಕಂಪನಿಗಳನ್ನು ಸ್ವಾಧೀನ ತೆಗೆದುಕೊಳ್ಳುವ ಯೋಜನೆಯನ್ನು ಅವರು ಹೇಳಿದರಾದರೂ, ಯಾವ ಯಾವ ಕಂಪನಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಿದೆ ಎಂಬುದನ್ನು ಹೇಳಲು ಆವರು ನಿರಾಕರಿಸಿದರಾದರು.
(ಏಜೆನ್ಸೀಸ್)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ