ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಗ್ಲ ಶಾಲೆ ತೆರೆಯುತ್ತಿರುವುದು ಗುಲಾಮಗಿರಿಯ ಗುರುತು : ನಿಟ್ಟೂರು

By Super
|
Google Oneindia Kannada News

ಬೆಂಗಳೂರು : ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವರೇ ಭ್ರಷ್ಟಾಚಾರ ತಡೆ ಆಂದೋಲನದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಕಿತ್ತೆಸೆಯಲು ಆತ್ಮ ಸಾಕ್ಷಾತ್ಕಾರ ಅಗತ್ಯ ಎಂದು ಶತಾಯುಷಿ ಹಾಗೂ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಡೆಸಿದ 'ಮನೆಯಂಗಳದ ಮಾತುಕತೆ"ಯಲ್ಲಿ ನಾಗರಿಕರ ಪ್ರಶ್ನೆಗಳಿಗೆ ನಿಟ್ಟೂರು ಉತ್ತರ ಕೊಟ್ಟರು. ಭ್ರಷ್ಟಾಚಾರ ಎಲ್ಲೆಲ್ಲೂ ಇದೆ. ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಮೊದಲು ಪ್ರತಿಯಾಬ್ಬರೂ ಅಂತಃಕರಣವನ್ನು ಪ್ರಶ್ನಿಸಿಕೊಳ್ಳಬೇಕು ಎಂದರು.

ಕೆಲವು ಚುರುಕು ಪ್ರಶ್ನೆಗಳಿಗೆ ಅಷ್ಟೇ ಚುರುಕುಮತಿಯ ಉತ್ತರಗಳನ್ನು ನಿಟ್ಟೂರು ಕೊಟ್ಟದ್ದು ಹೀಗೆ...

ಬ್ರಿಟಿಷರಿಂದ ಬಿಡುಗಡೆಯಾಗಿ ನಾವು ಸುಖವಾಗಿದ್ದೇವೆಯೇ?
ಸ್ವಾಭಿಮಾನಿಯಾದ ಪ್ರತಿಯಾಬ್ಬರಿಗೂ ಈ ಬಗ್ಗೆ ಹೆಮ್ಮೆ. ಚಳವಳಿಯಲ್ಲಿ ಭಾಗವಹಿಸಿದ್ದ ನನಗಂತೂ ತೃಪ್ತಿ. ಆದರೆ ಅವರು ಬಿಟ್ಟು ಹೋದ ಗುಲಾಮಗಿರಿಯನ್ನು ಒಪ್ಪಿಕೊಂಡಿರುವುದಕ್ಕೆ ಬೇಸರ. ಇಂದಿಗೂ ಆಂಗ್ಲ ಶಾಲೆ ತೆರೆಯಬೇಕು ಅಂತ ಅರ್ಜಿ ಹಾಕುತ್ತಾರಲ್ಲ. ಅದಕ್ಕಿಂತ ದುರಂತ ಬೇಕೆ?

ನ್ಯಾಯವಾದಿಗಳಾಗಿದ್ದಾಗ ಅಪ್ರಾಮಾಣಿಕವಾಗಿ ಕೆಲಸ ಮಾಡಲು ಆಗಿನ ಕಾಲದ ರಾಜಕಾರಣಿಗಳು ಪ್ರಭಾವ ಬೀರಲಿಲ್ಲವೇ?
ಇಲ್ಲ, ಇಲ್ಲ. ಅಂಥಾ ಘಟನೆ ನಡೆದಿದ್ದು ನೆನಪಿಲ್ಲ. ಪ್ರಾಮಾಣಿಕತೆಯಲ್ಲಿ ನಾನು ರಾಜಿ ಆಗುವುದಿಲ್ಲ. ಆದರಿಂದು ರಾಜಕಾರಣಿಗಳು ಮತ್ತು ಮಾದ್ಯಮಗಳು ಅನಗತ್ಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದು ಒಳ್ಳೆಯದಲ್ಲ.

ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಓದುವಾಗ ನನಗೆ ಈ ತರಹದ ಭಾವನೆಗಳಿರಲಿಲ್ಲ. ಖಾಸಗಿ ಶಿಕ್ಷಣ ಹಾಗೂ ಶಿಕ್ಷಕರ ಆಸೆಗೆ ಅನುಗುಣವಾಗಿ ಇವತ್ತಿನ ಸ್ಥಿತಿ ನಿರ್ಮಾಣವಾಗಿದೆಯೇ ಏನೋ? ಶಿಕ್ಷಣ ಯಾವತ್ತೂ ಒಳ್ಳೆಯದನ್ನು ಕಲಿಸುತ್ತದೆ ಅನ್ನುವುದು ಮಾತ್ರ ಸತ್ಯ.

ಹಂಗಾಮಿ ರಾಜ್ಯಪಾಲರಾಗಿದ್ದ ಆಗಿನ ದಿನಗಳನ್ನು ಮೆಲುಕು ಹಾಕಿದ ನಿಟ್ಟೂರು, ನೆಹರೂ ಬಳಿ ಹೋಗಿ ಮಾತನಾಡಲು ಇಚ್ಛಿಸುತ್ತಿರಲಿಲ್ಲ. ಅವರೇನೂ ನಿರ್ಬಂಧ ಹೇರಿರಲಿಲ್ಲ. ಒಮ್ಮೆ ಲಾಲಬಹದ್ದೂರ್‌ ಶಾಸ್ತ್ರಿ ಯಾಕೆ ಭೇಟಿಯಾಗಲಿಲ್ಲ ಅಂತ ಕೇಳಿದರು. ಕೆಲಸದ ಒತ್ತಡದ ನೆಪ ಹೇಳಿದೆ. ಆದರೆ ವಾಸ್ತವದಲ್ಲಿ ನೆಹರೂ ಬಳಿಗೆ ಹೋಗಿ ಮಾತನಾಡುವುದು ನನ್ನ ಇಷ್ಟವಾಗಿರಲಿಲ್ಲ. ಹಂಗಾಮಿ ರಾಜ್ಯಪಾಲನಾಗಿ ನಾನು ಕೆಲಸ ಮಾಡಿದ್ದು ಒಂದು ವಾಕಿಂಗ್‌ ಇದ್ದ ಹಾಗಿತ್ತು ಎಂದರು.

English summary
We accepted slavery of British people. This is tragedy : Nittur Srinivasa Rao regrets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X