ಹಿಂದೂಸ್ತಾನ್ ಲೇಟೆಕ್ಸ್ ಕೊಡುಗೆ : ಭಾರತದಲ್ಲಿ ಹೆಂಗಸರ ಕಾಂಡೋಮ್!
ತಿರುವನಂತಪುರ : ಕಾಂಡೋಮ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಹಿಂದೂಸ್ತಾನ್ ಲೇಟೆಕ್ಸ್ ಲಿಮಿಟೆಡ್, ಮಹಿಳಾ ಕಾಂಡೋಮ್ಗಳನ್ನು ಉತ್ಪಾದಿಸಲು ಬ್ರಿಟನ್ನಿನ ಕಂಪನಿಯಾಂದರ ಜೊತೆ ಕೈಜೋಡಿಸಿದೆ.
ಕಂಪನಿಯ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಜಿ.ರಾಜಮೋಹನ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಹೆಂಗಸರ ಕಾಂಡೋಮ್ ತಯಾರಿಸಲು ಬೇಕಾದ ಯಂತ್ರೋಪಕರಣಗಳನ್ನು ಬ್ರಿಟನ್ನಿನ ಫೀಮೇಲ್ ಹೆಲ್ತ್ ಕಂಪನಿ ಒದಗಿಸಲಿದೆ. ಉತ್ಪಾದನೆ ಮಾತ್ರ ಹಿಂದೂಸ್ತಾನ್ ಲೇಟೆಕ್ಸ್ ಲಿಮಿಟೆಡ್ನ ಆವರಣದಲ್ಲೇ ನಡೆಯಲಿದೆ ಎಂದು ರಾಜಮೋಹನ್ ಹೇಳಿದರು.
ಸ್ಥಳೀಯ ಮಾರುಕಟ್ಟೆಯನ್ನು ಹಿಂದೂಸ್ತಾನ್ ಲೇಟೆಕ್ಸ್ ನೋಡಿಕೊಳ್ಳಲಿದೆ. ರಫ್ತಿನ ಉಸ್ತುವಾರಿ ಬ್ರಿಟನ್ನಿನ ಫೀಮೇಲ್ ಹೆಲ್ತ್ ಕಂಪನಿಗೆ ಸೇರಿರುತ್ತದೆ. ಮೊದಮೊದಲು ಕಾಂಡೋಮ್ ದರ ತುಂಬಾ ತುಟ್ಟಿಯಾಗಲಿದ್ದು, ಪ್ರತಿ ಕಾಂಡೋಮ್ಗೆ ಸುಮಾರು 25 ರುಪಾಯಿ ಆಗಲಿದೆ. ಕಾಂಡೋಮ್ ಬೆಲೆ ಇಷ್ಟೊಂದು ದುಬಾರಿಯಾಗಲು ಅದರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ದರ ಕಾರಣ. ವಿಶೇಷ ಗುಣ ಮಟ್ಟದ ಪಾಲಿಯುರೇಥೇನ್ ಬಳಸುವುದರಿಂದ, ಗ್ರಾಹಕರು ಕಾಂಡೋಮ್ಗೆ ಹೆಚ್ಚಿನ ಬೆಲೆ ತೆರುವುದು ಅನಿವಾರ್ಯ ಎಂದು ರಾಜಗೋಪಾಲ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...