ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಡಿಗ್ರಿ ದಾಟಿದ ಸಿಇಟಿ ಜ್ವರ: ಪರೀಕ್ಷಾರ್ಥಿಗಳಿಗಾಗಿ ‘ಎಸ್‌ಕೆ ಇ-ಲರ್ನಿಂಗ್‌’

By Staff
|
Google Oneindia Kannada News

ಸಿಇಟಿ ಜ್ವರ ಮತ್ತೆ ಏರಿದೆ!

ವೃತ್ತಿಪರ ಶಿಕ್ಷಣ ನೀಡುವ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಮೊದಲನೆಯ ಬಾಗಿಲಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜ್ವರ ಈಗ ವಿದ್ಯಾರ್ಥಿಗಳನ್ನು ಆವರಿಸಿದೆ. ಮೇ 9 ಹಾಗೂ 10 ರಂದು ಪರೀಕ್ಷೆ .

60 ಪ್ರಶ್ನೆ . ಉತ್ತರಿಸಲು 90 ನಿಮಿಷದ ಅವಕಾಶ. ಪ್ರತಿ ಅಂಕಕ್ಕೂ ಪೈಪೋಟಿ. ಒಂದು ಅಂಕ ಕಡಿಮೆಯಾದರೂ ರ್ಯಾಂಕ್‌ ಪಟ್ಟಿಯಲ್ಲಿ ತಳ ಕಾಣುವ ಆತಂಕ. ಹೊರ ರಾಜ್ಯದ ವಿದ್ಯಾರ್ಥಿಗಳೂ ಸಿಇಟಿ ಬರೆಯಲು ಸಾವಿರಾರು ಸಂಖ್ಯೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಉನ್ನತ ಶಿಕ್ಷಣದ ಕಾಶಿ ಎಂದು ಪ್ರಸಿದ್ಧಿ ಪಡೆದಿರುವುದೇ ಇದಕ್ಕೆ ಕಾರಣ.

ಸಿಇಟಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಮೂಲಕ ಎಸ್‌ಕೆ ಇನ್ಫೋಸಿಸ್ಟಂಸ್‌ ಕಂಪನಿ, ಮಾಹಿತಿ ತಂತ್ರಜ್ಞಾನ ಆಧಾರಿತ ‘ಎಸ್‌ಕೆ ಇ-ಲರ್ನಿಂಗ್‌’ ಎನ್ನುವ ಸೇವೆಯನ್ನು ರೂಪಿಸಿದೆ. ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು, ಪರೀಕ್ಷೆಯನ್ನು ಎದುರಿಸಲು ಆತ್ಮ ವಿಶ್ವಾಸ ತುಂಬುವುದು ಎಸ್‌ಕೆ ಇ-ಲರ್ನಿಂಗ್‌ನ ಉದ್ದೇಶ.

ಆಯ್ದ ಸೈಬರ್‌ ಕೆಫೆ ಹಾಗೂ ಐಟಿ ಕಲಿಕಾ ಕೇಂದ್ರಗಳಲ್ಲಿ ಎಸ್‌ಕೆ ಇ-ಲರ್ನಿಂಗ್‌ ಸೇವೆಯನ್ನು ಪರೀಕ್ಷಾರ್ಥಿಗಳು ಪಡೆಯಬಹುದು. ಮುನ್ನೂರು ರುಪಾಯಿ ಶುಲ್ಕ. ಪ್ರತಿ ವಿಷಯದ ಬಗ್ಗೆ 5 ತಾಸು ಅಭ್ಯಾಸ ಮಾಡಬಹುದು. ಆಬ್ಜೆಕ್ಟಿವ್‌ ಮಾದರಿಯ ಪ್ರಶ್ನೋತ್ತರ ಕಲಿಕೆಗೆ ಹಾಗೂ ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಎಸ್‌ಕೆ ಇ-ಲರ್ನಿಂಗ್‌ ಅತ್ಯುತ್ತಮ ಕೋರ್ಸ್‌ ಎನ್ನುತ್ತಾರೆ ಎಸ್‌ಕೆ ಇನ್ಫೋಸಿಸ್ಟಂಸ್‌ನ ವಸಂತ್‌. ಅಂದಹಾಗೆ, 18 ವರ್ಷಗಳ ಪ್ರಶ್ನೆ ಪತ್ರಿಕೆಗಳು ಎಸ್‌ಕೆ ಇ-ಲರ್ನಿಂಗ್‌ನಲ್ಲಿ ಲಭ್ಯವಿವೆ.

ಸಿಇಟಿ- 2002 ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ, ಪರೀಕ್ಷಾ ಕೇಂದ್ರ ಹಾಗೂ ನಗರ ಸಾರಿಗೆ ಕುರಿತು ಮಾಹಿತಿ ಒದಗಿಸುವ ಉದ್ದೇಶದಿಂದ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ದೂರವಾಣಿ ಮಾಹಿತಿ ಕೇಂದ್ರವೊಂದನ್ನು ಸ್ಥಾಪಿಸಿಲು ಎಸ್‌ಕೆ ಇನ್ಫೋಸಿಸ್ಟಂಸ್‌ ಉದ್ದೇಶಿಸಿದೆ. ವಿವರಗಳಿಗೆ ದೂರವಾಣಿ ಸಂಖ್ಯೆ 080- 3631634 ಅಥವಾ 080-3544589 ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X