• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೆಸ್ಸೆಸ್‌ ಪರಿವಾರ ತಾಲಿಬಾನ್‌ಗಳನ್ನು ಮೀರಿಸುತ್ತಿದೆ -ಜಾವೇದ್‌ ಅಖ್ತರ್‌

By Staff
|

Javed Aktharನವದೆಹಲಿ : ಸಂಘ ಪರಿವಾರದ ಕಾರ್ಯನಿರ್ವಹಣೆಯ ಬಗ್ಗೆ ಸಿಟ್ಟುಗೊಂಡಿರುವ ಖ್ಯಾತ ಉರ್ದು ಕವಿ ಜಾವೇದ್‌ ಅಖ್ತರ್‌, ದೇಶದಲ್ಲಿ ಕೋಮುವಾದವನ್ನು ಹೆಚ್ಚಿಸುವುದರಿಂದಲೇ ತಾವು ಜನಪ್ರಿಯರಾಗಬಹುದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾವಿಸಿರುವಂತಿದೆ. ಇದು ತಾಲಿಬಾನ್‌ಗಿಂತಲೂ ಅಪಾಯಕಾರಿಯಾದುದು ಎಂದು ಎಚ್ಚರಿಸಿದ್ದಾರೆ.

ಅನ್ಯ ದೇಶದಲ್ಲಿರುವ ಭಯೋತ್ಪಾದನೆಯನ್ನು ಟೀಕಿಸುವ ನಾವು ನಮ್ಮೊಳಗೆ ತಾಲಿಬಾನಿಯರನ್ನು ಮೀರಿಸುವ ಆರೆಸ್ಸೆಸ್‌ನಂತಹ ಸಂಘಟನೆಯನ್ನು ಇಟ್ಟುಕೊಂಡಿದ್ದೇವೆ. ಬಿಜೆಪಿಯು ತೀವ್ರ ಕೋಮು ದ್ವೇಷಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿರುವ ಪಕ್ಷವೆಂಬುದು ಜನರಿಗೆ ತಿಳಿದಿದೆ. ಅದಕ್ಕಾಗಿಯೇ ಆ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ ಎಂದು ಜಾವೇದ್‌ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಬಲಪಂಥೀಯರ ಮೇಲೆ ಕಿಡಿ ಕಾರಿದರು.

ಗುಜರಾತ್‌ನಲ್ಲಿ ನಡೆದ ಹಿಂಸೆಯನ್ನು ಉದಾಹರಿಸಿ ಮಾತನಾಡಿದ ಅಖ್ತರ್‌ ಇಂತಹ ಹಿಂಸೆಗಳಿಂದ ದೇಶದಲ್ಲಿ ಶಾಂತಿ ಕಕಳೆದು ಹೋಗಿದೆ. ಕಳೆದ 77 ವರ್ಷಗಳಿಂದ ಸತತ ಪ್ರಯತ್ನ ನಡೆಸಿ ಆರೆಸ್ಸೆಸ್‌ ಈ ಸ್ಥಿತಿ ತಲುಪಿದೆ. ಚುನಾವಣೆ ಬಂದಾಗ ಜನರು ತಮ್ಮ ನಿಜ ಸಾಮರ್ಥ್ಯವನ್ನು ತೋರಿಸುತ್ತಾರೆ. ಗುಜರಾತ್‌ನಲ್ಲಿ ಬಿಜೆಪಿ ತೋರಿಸಿರುವ ಅಟಾಟೋಪಗಳಿಗೆ ಜನತೆ ಸರಿಯಾದ ಸಮಯದಲ್ಲಿ ತಕ್ಕ ಉತ್ತರ ನಿಡುತ್ತಾರೆ ಎಂದು ಜಾವೇದ್‌ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಈಚಿನ ದಿನಗಳಲ್ಲಿ ಎಲ್ಲ ವರ್ಗ, ಜಾತಿ, ಸಮುದಾಯದ ಮತಗಳಲ್ಲಿ ಮೂಲಭೂತವಾದಿಗಳು ಹೆಚ್ಚಾಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಲಾಭ ಪಡೆಯುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಜಾತ್ಯತೀತ ಮನೋಭಾವವುಳ್ಳವರು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅಖ್ತರ್‌ ಕರೆ ನೀಡಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more