• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಭಾರತೀಯ ಹೆಂಗಸರ ಬಿಕರಿ : ಅಮ್ನೆಸ್ಟಿ ಅಂತರರಾಷ್ಟ್ರೀಯ ವರದಿ

By Staff
|

ಲಂಡನ್‌ : ಪಾಕಿಸ್ತಾನದಲ್ಲಿ ಹೆಂಗಸರು ಮಾರಾಟಕ್ಕಿದ್ದಾರೆ !
ಭಾರತ, ನೇಪಾಳ, ಬಾಂಗ್ಲಾದೇಶ, ಆಫ್ಘಾನಿಸ್ತಾನದ ಅಸಹಾಯಕ ಹೆಂಗಸರನ್ನು ಕರೆತಂದು, ಸಣ್ಣ ಪುಟ್ಟ ಜಾತ್ರೆಗಳಲ್ಲಿ ಪಾಕಿಸ್ತಾನ ಮಾರಾಟ ಮಾಡುತ್ತಿದೆ ಎಂದು ಅಮ್ನೆಸ್ಟಿ ಅಂತರರಾಷ್ಟ್ರೀಯ ವರದಿ ತಿಳಿಸಿದೆ.

ಪಾಕಿಸ್ತಾನದ ಆದಿವಾಸಿಗಳ ಪ್ರದೇಶದಲ್ಲಿ ಹೆಂಗಸರ ಮಾರಾಟಕ್ಕೆಂದೇ ಜಾತ್ರೆ ಆಯೋಜಿತವಾಗುತ್ತಿದ್ದ ಕಾಲವಿತ್ತು. ಕೆಲವು ವರ್ಷಗಳ ಹಿಂದೆ ಇಂತಹ ಜಾತ್ರೆಗಳನ್ನು ಸರ್ಕಾರ ನಿಷೇಧಿಸಿತು. ಆದರೆ ಈಗಲೂ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಸಣ್ಣ ಪುಟ್ಟ ಜಾತ್ರೆಗಳ ಮೂಲಕ ಹೆಂಗಸರ ಮಾರಾಟ ಖುಲ್ಲಂಖುಲ್ಲ ನಡೆದಿದೆ ಎನ್ನುತ್ತಿದೆ ಅಮ್ನೆಸ್ಟಿ ವರದಿ.

ಬೇರೆ ದೇಶಗಳಿಗೆ ಹೋಲಿಸಿದಲ್ಲಿ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಜನ ತುಂಬಾ ತರಾತುರಿಯಲ್ಲಿರುತ್ತಾರೆ. ಇದಕ್ಕೆ ಕಾರಣವೇ ಹೆಂಗಸರ ಮಾರಾಟ ಮತ್ತು ವೇಶ್ಯಾವಾಟಿಕೆ. ಹೆಂಗಸರನ್ನು ಅಪಹರಿಸುವುದು, ಅವರಿಗೆ ಪದೇ ಪದೇ ಅಕ್ರಮವಾಗಿ ಮದುವೆ ಮಾಡಿಸುವುದು ಪಾಕಿಸ್ತಾನದಲ್ಲಿ ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅಪಹರಿಸುವ ಬಹುತೇಕ ಹೆಂಗಸರನ್ನು ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿದ್ದಾರೆ.

ವಿವಾಹೇತರ ಸಂಬಂಧ ಹೊಂದುವುದು ಪಾಕಿಸ್ತಾನದ ರಿkುನಾ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧ. ಅನೇಕ ಹೆಂಗಸರನ್ನು ಈ ಕಾಯ್ದೆಯಡಿ ಬಂಧಿಸಲಾಗಿದೆ. ಆದರೆ, ಬಂಧಿತ ಹೆಂಗಸರು ಇಂಥಾ ಕೃತ್ಯ ಎಸಗಲು ಲೈಂಗಿಕ ದಲ್ಲಾಳಿಗಳೆ ಕಾರಣ ಎಂಬುದು ಗೊತ್ತಾಗಿದೆ. ವೇಶ್ಯಾವಾಟಿಕೆ ಮೂಲಕ ಹಣ ಸಂಪಾದಿಸಲು ಒಲ್ಲೆ ಎನ್ನುವ ಅದೆಷ್ಟೋ ಹೆಂಗಸರು ಕೊಲೆಯಾಗಿದ್ದಾರೆ. ಇಂಥ ಸಮಾಜ ಘಾತುಕ ಕೃತ್ಯವನ್ನು ವರದಿ ಮಾಡಿದ ಸೂಫಿ ಮೊಹಮ್ಮದ್‌ ಖಾನ್‌ ಎಂಬ ಪತ್ರಕರ್ತನನ್ನು ಕಳೆದ ವರ್ಷ ಮೇ ತಿಂಗಳಲ್ಲಿ ದುಷ್ಕರ್ಮಿಗಳು ಕೊಂದುಹಾಕಿದ್ದಾರೆ. ಕಳೆದ ವರ್ಷ ಸಿಂಧ್‌ ಮತ್ತು ಪಂಜಾಬ್‌ನಿಂದಲೇ ಸುಮಾರು 70 ಹೆಂಗಸರನ್ನು ಅಪಹರಿಸಿ, ಪಾಕಿಸ್ತಾನದಲ್ಲಿ ಮಾರಾಟ ಮಾಡಲಾಗಿದೆ !

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more