• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಥಾ ಹದವಿತ್ತೇ, 2001 ರ ಏಪ್ರಿಲ್‌ 18 ರ ದಿನಕೆ ಎಂಥ ಮುದವಿತ್ತೇ...

By Staff
|

ಯಾವ ನಾಚಿಕೆಯೂ ಇಲ್ಲದೆ ಕೂಗುವ ಕುದಿ ಕುಕ್ಕರ್ರು! ತೊಟ್ಟಿಲಲ್ಲಿ ನಿದ್ದೆಯಲ್ಲೇ ಅಸಹನೆಯಿಂದ ಮುಖ ಕಿವುಚುವ ಮಗು, ಗೋಡೆಯ ಮೇಲಿನ ಅಂಗೈನಲ್ಲಿನ ಸೂರ್ಯ...

ಏಪ್ರಿಲ್‌ ತಿಂಗಳ 18 ನೇ ತಾರೀಖಿನ ನಡು ಬೇಸಗೆಯ ರೌದ್ರ ಗುರುವಾರವೇ... ಸೂರ್ಯ ಭೂಮಿಗೆ ತೀರಾ ಹತ್ತಿರ ಬಂದನೇ... ಸುತ್ತುತ್ತ ಸುತ್ತುತ್ತ ಭೂಮಿ ಹಳಿ ತಪ್ಪಿ ಸೂರ್ಯನ ಕಕ್ಷೆಗೆ ಜಾರಿತೋ... ಎಲೆ ಬೇಸಗೆಯೇ ನಿನ್ನ ಲೆಕ್ಕದ ಹೊತ್ತಗೆಯಲ್ಲಿ ಇಂಥ ಮತ್ತೊಂದು ದಿನ ಜಮೆಯಾಗದಿರಲಿ!

ಕಳೆದ ವರ್ಷ ಇದೇ ದಿನ-
2001 ನೇ ಇಸವಿ ಏಪ್ರಿಲ್‌ ತಿಂಗಳ 18 ನೇ ತಾರೀಖು,
ಬೆಂಗಳೂರಿನಲ್ಲಿ 127.6 ಮಿಲಿ ಮೀಟರ್‌ ಮಳೆ ಸುರಿದಿತ್ತು . ಅದು ಧಾರಾಕಾರ ಮಳೆ, ದಾಖಲೆಯ ಮಳೆ! ಅಂದಿಗೆ ಸರಿಯಾಗಿ ನಲವತ್ತು ವರ್ಷಗಳ ಹಿಂದೆ, 1967 ನೇ ಇಸವಿಯಲ್ಲಿ ಸುರಿದಿತ್ತು ನೋಡಿ- 122.5 ಮಿಲಿ ಮೀಟರ್‌ ಮಳೆ. ಅನಂತರ ಸುರಿದದ್ದೇ ಈ ದಾಖಲೆಯ ಮಳೆ!

ಕಳೆದ ದಿನಗಳೇ ಚೆನ್ನ . ಎಷ್ಟು ಕಷ್ಟಕರವಾಗಿದ್ದರೂ ವೃದ್ಧಾಪ್ಯದಲ್ಲಿ ಬಾಲ್ಯದ ದಿನಗಳು ಸೊಗಸೆನಿಸುವುದು ಈ ಭಾವದಿಂದಲೇ. ನಿನ್ನೆ, ಮೊನ್ನೆ, ಕಳೆದ ವಾರ, ಕಳೆದ ಗೆಳೆಯರು, ಅವರೊಂದಿಗೆ ಕಂಡ ದೊಡ್ಡಾಲ, ಎದೆಗೆ ಸಂದ ಕಾಮನಬಿಲ್ಲು ... ಅವೆಲ್ಲ ಅಮರ ಮಧುರ. ಮತ್ತೆ ಅದೇ ದಿನ, ಅದೇ ಮಳೆ- ಮಳೆ ಬಿಲ್ಲು ... ಉಹ್ಞೂಂ... ಸಿಕ್ಕುವುದಿಲ್ಲ . ಗೆಳೆಯರು ಕೂಡ, ಅವರು ಅವರಾಗಿ ನಮಗೆ ಸಿಕ್ಕುವುದಿಲ್ಲ . ಅಸಲಿಗೆ ನಾವು ಕೂಡ ಆ ದಿನಗಳ ಭಾವುಕತೆಯ ತೀವ್ರತೆ- ಹಸಿ ಉಳಿಸಿಕೊಂಡಿರುವುದಿಲ್ಲ . ಈ ಬೇಸಗೆಯೂ ಹಾಗೇ. ಕಳೆದ ವರ್ಷದಂತೆ ಈ ವರ್ಷವಿಲ್ಲ . ಕಳೆದ ಏಪ್ರಿಲ್‌ 18 ರಂತೆ ಈ ದಿನವಿಲ್ಲ .

ಆದರೂ ಮನಸ್ಸು ಬಯಸುತ್ತದೆ ನೋಡಿ-
ಈ ದಿನ ದಾಖಲೆಯ ಮಳೆಯಿರಲಿ, ಒಂಚೂರಾದರೂ ಮಳೆಯಾಗಬೇಕಿತ್ತು . ನಾಲ್ಕು ಹನಿಗಳ ಸಿಂಚನದಿಂದ ನಸುಗುಡುವ ನೆಲದಲ್ಲಿ ಹೆಜ್ಜೆಗಳ ಊರಬೇಕಿತ್ತು .

ಹೌದು, ಇವತ್ತು ಮಳೆಯಾಗಬೇಕಿತ್ತು ! ನಿಮಗೆ ಹಾಗನ್ನಿಸುವುದಿಲ್ಲವಾ?

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more