ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರಮಂಗಲದಲ್ಲಿ ಮಾರಾಟಕ್ಕೆ 920 ಸರ್ಕಾರಿ ಫ್ಲಾಟ್‌, ಚ.ಅ.ಗೆ 1 ಸಾವಿರ ರು.

By Staff
|
Google Oneindia Kannada News

ಬೆಂಗಳೂರು : ನಾಲ್ಕನೇ ರಾಷ್ಟ್ರೀಯ ಕ್ರೀಡಾಕೂಟದ ಅಂಗವಾಗಿ ಕೋರಮಂಗಲದಲ್ಲಿ ನಿರ್ಮಿಸಿದ್ದ 2354 ಫ್ಲಾಟ್‌ಗಳನ್ನು ಮಾರಾಟ ಮಾಡಲು ಉದ್ದೇಶಿಸಿರುವ ರಾಜ್ಯ ಸರ್ಕಾರ, ಫ್ಲಾಟ್‌ಗಳ ಪ್ರತಿ ಚದರ ಅಡಿಗೆ 1 ಸಾವಿರ ರುಪಾಯಿ ಮೌಲ್ಯವನ್ನು ಗೊತ್ತು ಪಡಿಸಿದೆ.

ಈ ಮುನ್ನ ಕೂಡ ಫ್ಲಾಟ್‌ ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದ್ದು, ಪ್ರತಿ ಚದರ ಅಡಿಗೆ 1.5 ಸಾವಿರ ರುಪಾಯಿ ಗೊತ್ತು ಪಡಿಸಿತ್ತು. ಹಲವಾರು ವಿವಾದಗಳಿಂದಾಗಿ ಮಾರಾಟ ಪೂರ್ಣಗೊಂಡಿರಲಿಲ್ಲ . ಪ್ರಸ್ತುತ ಮಾರಾಟ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಚಿಂತಿಸಿರುವ ಸರ್ಕಾರ, ಕೊಳ್ಳುಗರನ್ನು ಉತ್ತೇಜಿಸಿಲು ಬೆಲೆ ಕಡಿತದ ಆಮಿಷವನ್ನೂ ಪ್ರಕಟಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

4 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಗಮಿಸಿದ್ದ ಕ್ರೀಡಾಪಟುಗಳು ತಂಗಲು ಜನತಾದಳ ಸರ್ಕಾರ ಹುಡ್ಕೋ ನೆರವಿನಿಂದ 270 ಕೋಟಿ ರುಪಾಯಿ ವೆಚ್ಚದಲ್ಲಿ 2534 ಫ್ಲಾಟ್‌ ನಿರ್ಮಿಸಿತ್ತು. ಈ ಫ್ಲಾಟ್‌ಗಳಲ್ಲಿ 1613 ಫ್ಲಾಟ್‌ಗಳು ಈಗಾಗಲೇ ಮಾರಾಟವಾಗಿದ್ದು, 920 ಫ್ಲಾಟ್‌ಗಳು ಮಾರಾಟಕ್ಕೆ ಲಭ್ಯವಿವೆ ಎಂದು ವಾರ್ತಾ ಸಚಿವ ಶಿವಣ್ಣ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಕಾಸ್ಮೆಟಿಕ್ಸ್‌ ಲಿಮಿಟೆಡ್‌ಗೆ ಬೀಗ

ಟಾಲ್ಕಂ ಪೌಡರ್‌ ಉತ್ಪಾದಿಸುತ್ತಿದ್ದ ಮೈಸೂರು ಕಾಸ್ಮೆಟಿಕ್ಸ್‌ ಲಿಮಿಟೆಡ್‌ ಕಂಪನಿಯನ್ನು ಮುಚ್ಚಲು ಸರ್ಕಾರ ನಿರ್ಧರಿಸಿದ್ದು , ಅಲ್ಲಿ ಉಳಿದಿರುವ 20 ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯ ಸೌಲಭ್ಯ ಒದಗಿಸಲಾಗುವುದು ಎಂದು ಶಿವಣ್ಣ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X