ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಪೊಲೀಸ್‌ ಇಲಾಖೆಗೆ ಯಮಾಹಾ ಕಂಪೆನಿಯಿಂದ 70 ಬೈಕ್‌ಗಳು

By Staff
|
Google Oneindia Kannada News

Yamaha bikeಬೆಂಗಳೂರು : ಯಮಾಹಾ ಮೋಟರ್‌ ಕಂಪೆನಿಯು 70 ವೈಬಿಎಕ್ಸ್‌ ಮೋಟರ್‌ ಸೈಕಲ್‌ಗಳನ್ನು ರಾಜ್ಯ ಪೊಲೀಸ್‌ ಇಲಾಖೆಗೆ ದೇಣಿಗೆ ರೂಪದಲ್ಲಿ ನೀಡಿದೆ.

ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್‌ ನಿರ್ದೇಶಕರಿಗೆ ಯಮಾಹಾ ಮೋಟರ್ಸ್‌ , ಇಂಡಿಯಾದ ಮುಖೇಶ್‌ ಶ್ಯಾಮ್‌ ನೇತೃತ್ವದ ಅಧಿಕಾರಿಗಳ ತಂಡ 70 ಮೋಟರ್‌ ಸೈಕಲ್‌ಗಳನ್ನು ಇತ್ತೀಚೆಗೆ ಹಸ್ತಾಂತರಿಸಿತು. ಕಳೆದ ಮೂರು ತಿಂಗಳ ಅವಧಿಯಲ್ಲಿ ಕಂಪೆನಿ 500 ವೈಬಿಎಕ್ಸ್‌ ಮೋಡೆಲ್‌ನ ಮೋಟರ್‌ ಸೈಕಲ್‌ಗಳನ್ನು ಭಾರತೀಯ ಪೊಲೀಸ್‌ ಇಲಾಖೆಯ ಈಶಾನ್ಯ ವಿಭಾಗಕ್ಕೆ ಸರಬರಾಜು ಮಾಡಿತ್ತು.

ಭಾರತೀಯ ಪೊಲೀಸ್‌ ಇಲಾಖೆಗೆ ಯಮಾಹಾ ಕಂಪೆನಿಯ ಮೋಟರ್‌ ಬೈಕ್‌ಗಳಿಂದ ಸಾಕಷ್ಟು ಪ್ರಯೋಜನ ದೊರೆಯಬೇಕೆಂಬುದೇ ನಮ್ಮ ಉದ್ದೇಶ. 24 ಗಂಟೆಯೂ ಸೇವೆ, ಗುಣಮಟ್ಟದ ಗ್ಯಾರಂಟಿಯನ್ನು ಕಾಪಾಡಿಕೊಳ್ಳಲು ಕಂಪೆನಿ ಯಾವತ್ತೂ ಶ್ರಮಿಸುತ್ತಿರುತ್ತದೆ ಎಂದು ಯಮಾಹಾ ಕಂಪೆನಿಯ ಅಧಿಕಾರಿಗಳ ತಂಡ ಹೇಳಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X